ಕರಾವಳಿ
ಉಡುಪಿಯಲ್ಲಿ ಸಿಎನ್ ಜಿ ಇಂಧನ ಕೊರತೆ: ಇಂಧನ ತುಂಬಲು ರಾತ್ರಿಯಿಡೀ ಸರತಿ ಸಾಲು

Views: 46
ಕರಾವಳಿ ಭಾಗದ ಉಡುಪಿ ಜಿಲ್ಲೆಯಲ್ಲಿ ಸಿಎನ್ ಜಿ ಇಂಧನ ಕೊರತೆಯ ಪರಿಣಾಮ ವಾಹನಗಳು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.ಉಡುಪಿ ಜಿಲ್ಲೆಯ ಭಾಗದಲ್ಲಿ ಸಿಎನ್ ಜಿ ಇಂಧನ ಆಧರಿತ ವಾಹನಗಳು ಹೆಚ್ಚುತ್ತಿದ್ದರೂ ಸಿಎನ್ ಜಿ ಇಂಧನ ಸ್ಟೇಷನ್ ಗಳು ಉಡುಪಿ ಜಿಲ್ಲೆಯಲ್ಲಿ ಕಡಿಮೆಯಾಗುತ್ತಿವೆ.
ಈಗಿರುವ ಬಂಕ್ ಗಳಲ್ಲಿ ಪೂರೈಕೆ ಬೇಡಿಕೆಗೆ ಅನುಗುಣವಾಗಿಲ್ಲ. ಈ ಕಾರಣದಿಂದಾಗಿ ಆಟೋರಿಕ್ಷಾ ಚಾಲಕರು ಇಂಧನ ತುಂಬಿಸಿಕೊಳ್ಳುವುದಕ್ಕಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಉಂಟಾಗಿದೆ.
ಈಗಿರುವ ಬಂಕ್‌ಗಳಿಗೆ ಬೇಡಿಕೆಗೆ ಅನುಗುಣವಾಗಿ ಸಿಎನ್‌ಜಿ ಇಂಧನ ಪೂರೈಕೆಯಾಗುತ್ತಿಲ್ಲ. ಮತ್ತು ಬೇಡಿಕೆ ಹೆಚ್ಚಿರುವುದರಿಂದ, ಸ್ಟಾಕ್ ತ್ವರಿತವಾಗಿ ಖಾಲಿಯಾಗುತ್ತದೆ ಮತ್ತು ಕೆಲವೊಮ್ಮೆ ರಿಕ್ಷಾಗಳು ಮುಂಜಾನೆ ಇಂಧನ ತುಂಬಲು ಸರದಿಯಲ್ಲಿ ರಾತ್ರಿಯಿಡೀ ನಿಲ್ಲುತ್ತವೆ ಎಂದು ವಾಹನ ಚಾಲಕರು ತಿಳಿಸಿದ್ದಾರೆ.






