ಕರಾವಳಿ
ಕುಂಭಾಸಿ ಗುಲಾಬಿ ಟೀಚರ್ ನಿಧನ

Views: 915
ಕುಂದಾಪುರ: ಕುಂಭಾಸಿ ನಿವಾಸಿ ನಿವೃತ್ತ ಶಿಕ್ಷಕ ದಿ. ವಕ್ವಾಡಿ ಕೃಷ್ಣಯ್ಯ ಶೆಟ್ಟಿಗಾರ್ ಅವರ ಧರ್ಮಪತ್ನಿ ಗುಲಾಬಿ ಟೀಚರ್ (91) 24.04.2024ನೇ ಬುಧವಾರ ರಾತ್ರಿ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಮೂವರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಇವರು ಉಡುಪಿಯ ಕಿನ್ನಿಮುಲ್ಕಿ ಶಾಲೆಯಲ್ಲಿ ಶಿಕ್ಷಣ ಪಡೆದು 1958ರಲ್ಲಿ ಶಿಕ್ಷಕ ವೃತ್ತಿಗೆ ಸೇರಿ ಉಡುಪಿಯ ಕುಕ್ಕೆಕಟ್ಟೆ ,ಕಿದಿಯೂರು, ಕುಂದಾಪುರದ ಕೋಣಿ, ಬೀಜಾಡಿ, ಕುಂಭಾಸಿ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸಿ 1991ರಲ್ಲಿ ಕೋಟೇಶ್ವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆಯಿಂದ ನಿವೃತ್ತರಾಗಿರುತ್ತಾರೆ.ಇವರ ಸುದೀರ್ಘ ಸೇವೆಯಲ್ಲಿ ಅಪಾರ ಶಿಷ್ಯ ವೃಂದವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಕುಂಭಾಸಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ.






