ಜನಮನ

ಬಿಬಿಎಂಪಿ ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ  ಕಾರಿನ ಮೇಲೆ ಮರಬಿದ್ದು ವೈದ್ಯ ದಂಪತಿಗಳು ಸಾವಿನ ದವಡೆಯಿಂದ ಜಸ್ಟ್ ಮಿಸ್‌!!!

Views: 54

ಬೆಂಗಳೂರು: ಬಿಬಿಎಂಪಿ ಅರಣ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಬ್ರೂಕ್ ಫೀಲ್ಡ್ ಆಸ್ಪತ್ರೆಯ ಎಂಡಿ ಡಾಕ್ಟರ್ ಪ್ರದೀಪ್ ದಂಪತಿ ಅವರ ಕಾರಿನ ಮೇಲೆ ಏಕಾಏಕಿ ಹೆಮ್ಮರ ಬಿದ್ದಿದೆ.ಅದೃಷ್ಟವಶಾತ್ ಕಾರಿನಲ್ಲಿದ್ದ ವೈದ್ಯ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಾಯದಿಂದ ಪಾರಾದ ಆಸ್ಪತ್ರೆ ಎಂಡಿ ಪ್ರದೀಪ್ ಕುಮಾರ್ ಅವರು ಮಾತನಾಡಿ, ದೇವರ ದಯೆ ಮತ್ತು ಪವಾಡದಿಂದ ಬಚಾವ್ ಆಗಿದ್ದೇನೆ. ಮರದ ಕೊಂಬೆ ನನ್ನ ಕಾರ್ ಮೇಲೆ ಬಿದ್ದಿತ್ತು. ನನ್ನ ಹೆಂಡತಿ ಡಾಕ್ಟರ್ ಸಂಗೀತಗಾರರನ್ನು ಮೊದಲು ಕಾರಿನಿಂದ ಇಳಿಸಿದೆ. ಅವಳ ಕೈ ಹಾಗೂ ಕಾಲಿಗೆ ಹಾಗೂ ಕುತ್ತಿಗೆ ಪೆಟ್ಟಾಗಿದೆ.

ಬಿಬಿಎಂಪಿ ಅಧಿಕಾರಿಗಳು ಇಂತಹ ಅಪಾಯಕಾರಿ ಮರಗಳನ್ನು ಗುರುತಿಸುವ ಕೆಲಸ ಮಾಡಬೇಕಿತ್ತು. ಆದರೆ ಅದನ್ನು ಮಾಡದೇ ಬಿಟ್ಟಿರುವುದರಿಂದ  ಹೀಗಾಗಿದೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೇನೆ.ಬಿಬಿಎಂಪಿ ಅರಣ್ಯ ವಿಭಾಗ ಎಲ್ಲಾ ನಷ್ಟ ಭರಿಸುವ ಭರವಸೆ ಕೊಟ್ಟಿದ್ದಾರೆ ಎಂದರು.

Related Articles

Back to top button
error: Content is protected !!