ಆರೋಗ್ಯ

ಮಂಗಳೂರು:ದಂತ ವೈದ್ಯಕೀಯ ಪದವಿ ಮುಗಿಸಿ ಕ್ಲಿನಿಕ್‌ಗೆ ಜಾಯಿನ್ ಆಗುವ ದಿನವೇ ವೈದ್ಯೆ ಸಾವು 

Views: 204

ಮಂಗಳೂರು : ದಂತ ವೈದ್ಯಕೀಯ ಪದವಿ ಮುಗಿಸಿ ಕ್ಲಿನಿಕ್‌ಗೆ ಸೇರಿದ್ದಾರೆ.ಆದ್ರೆ ದುರಾದೃಷ್ಟ ಅಂದ್ರೆ ಕೆಲಸಕ್ಕೆ ಜಾಯಿನ್ ಆಗುವ ದಿನವೇ ಆಕೆ ಇಹಲೋಕ ತ್ಯಜಿಸಿದ್ದಾರೆ.

ಉಳ್ಳಾಲ ತಾಲೂಕಿನ ನರಿಂಘಾನ ಗ್ರಾಮದ ಆಳ್ವರಬೆಟ್ಟು ನಿವಾಸಿ ಸ್ವಾತಿ ಶೆಟ್ಟಿ (24) ಇಹಲೋಕ ತ್ಯಜಿಸಿದ ವೈದ್ಯೆಯಾಗಿದ್ದಾರೆ. ಉಳ್ಳಾಲ ತಾಲೂಕಿನ ನರಿಂಗಾನ‌ ಗ್ರಾಮದ ಆಳ್ವರಬೆಟ್ಟು ನಿವಾಸಿ  ರಾಮಣ್ಣ ಶೆಟ್ಟಿ ಆಳ್ವರಬೆಟ್ಟು ಹಾಗೂ ಜ್ಯೋತಿ ಶೆಟ್ಟಿ ದಂಪತಿ ಪುತ್ರಿ

ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ದಂತ ವೈದ್ಯಕೀಯ ಪದವಿ ಮುಗಿಸಿ ಮಂಗಳವಾರದಿಂದ ಪಾಂಡೇಶ್ವರದ ಕ್ಲಿನಿಕ್ ಒಂದರಲ್ಲಿ ಕೆಲಸಕ್ಕೆ ಜಾಯಿನ್ ಆಗುವವರಿದ್ದರು. ಹೀಗಾಗಿ ಸೋಮವಾರ ಸಂಜೆ ಪಾಂಡೇಶ್ವರದ ಪಿಜಿ ಬಂದು ಜಾಯಿನ್ ಆಗಿದ್ದರು. ಮರುದಿನ ಹೊಸ ಕೆಲಸಕ್ಕೆ ಹೋಗುವ ಕಾರಣ ಸಾಕಷ್ಟು ಎಕ್ಸೈಟ್ ಆಗಿದ್ದ ಸ್ವಾತಿ ತಂದೆ ತಾಯಿ ಜೊತೆ ಫೋನ್ ಮೂಲಕ ಮಾತನಾಡಿದ್ದರು. ಈ ವೇಳೆ ವಿಪರೀತ ತಲೆನೋವು ಕಾಣಿಸಿಕೊಂಡ ಕಾರಣ ಬೇಗನೆ ಮಲಗುವುದಾಗಿ ಹೇಳಿ ಸ್ವಾತಿ ನಿದ್ರೆಗೆ ಜಾರಿದ್ದರು. ಈ ವೇಳೆ ರೂಮ್ ಮೇಟ್ ಕೂಡಾ ಜೊತೆಯಲ್ಲಿ ಇದ್ದರು ತಲೆನೋವಿನ ಕಾರಣ ತೊಂದರೆ ಕೊಡದೆ ಅವರೂ ಕೂಡಾ ಮಲಗಿದ್ದರು. ಮುಂಜಾನೆ ಸ್ವಾತಿ ಎದ್ದಿಲ್ಲ ಅನ್ನೋ ಕಾರಣಕ್ಕೆ ಅವರನ್ನು ಅಲುಗಾಡಿಸಲು ಹೋದಾಗ ಮೈ ತಣ್ಣಗಾಗಿರುವುದು ಗೊತ್ತಾಗಿದೆ. ತಕ್ಷಣ ಅಂಬ್ಯುಲೆನ್ಸ್ ಮೂಲಕ ನಗರದ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಅಷ್ಟರಲ್ಲಾಗಲೇ ಅವರು ಮೃತ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

 

Related Articles

Back to top button