ಧಾರ್ಮಿಕ

ಕಿನ್ನಿಮುಲ್ಕಿ: ಅಷ್ಟಬಂಧ ಬ್ರಹ್ಮ ಕಲಶಾಭಿಷೇಕ 

Views: 3

        ಬ್ರಹ್ಮಾವರ: ಇದೇ ದಿನಾಂಕ ಮಾ 26 ರಿಂದ ಆರಂಭಗೊಂಡು ಮಾ. 30 ರ ವರೆಗೆ ಉಡುಪಿ ತಾಲೂಕಿನ ಕಿನ್ನಿಮುಲ್ಕಿ ಶ್ರೀ ವೀರಭದ್ರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮ ಕಲಶಾಭಿಷೇಕ ನಡೆಯಲಿದೆ.  ದೇವಸ್ಥಾನದ ಸಮಿತಿ ಸದಸ್ಯರಾದ ಶಂಕರ್. ಬಿ. ಶೆಟ್ಟಿಗಾರ ಮಟ್ಟು, ಟ್ರಸ್ಟಿ . ವಿಠಲ ಶೆಟ್ಟಿಗಾರ. ಜೊತೆ ಕಾಯ೯ದಶಿ೯, ರವೀಂದ್ರ ಶೆಟ್ಟಿಗಾರ ಕೋಶಾಧಿಕಾರಿ, ಧನರಾಜ್
ಅವರು ಮೂಲಕ್ಷೇತ್ರ ಬಾರಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುಗಾ೯ಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿ, ತಮ್ಮ ದೇವಳದ ಆಮಂತ್ರಣ ಪತ್ರಿಕೆಯನ್ನು ದೇವರಿಗೆ ಅಪಿ೯ಸಿ, ದೇವಸ್ಥಾನದ ಸಮಿತಿಗೆ ನೀಡಿದರು.
           ದಿನಾಂಕ 26.03.2023 ರಂದು ಆರಂಭಗೊಂಡು 30.03.2023 ರ ವರೆಗೆ ಶ್ರೀ ಕ್ಷೇತ್ರ ಸನ್ನಿಧಾನದಲ್ಲಿ ಬ್ರಹ್ಮಕಲಶಾಭಿಷೇಕ ಮತ್ತು ದಿನಾಂಕ 05.04.2023 ರಿಂದ 08.04.2023 ರ ವರೆಗೆ 119 ನೇ ವಾಷಿ೯ಕ ಮಹೋತ್ಸವ ಹಾಗೂ ಪುಪ್ಪ ರಥೋತ್ಸವ, ಧಮ೯ ದೈವಗಳ ನೇಮೋತ್ಸವ ನಡೆಯಲಿದೆ. ಎಂದು ದೇಗುಲದ ಆಡಳಿತ ಮೊಕ್ತೇಸರ ಶ್ರೀ ಪ್ರಭಾಶಂಕರ್ ತಿಳಿಸಿದ್ದಾರೆ.  ಈ ಸಂದಭ೯ದಲ್ಲಿ ಬಾರಕೂರು ಕುಲ ದೇವಸ್ಥಾನದ ಸಹಮೊಕ್ತೇಸರ ಶ್ರೀ ಸುಧಾಕರ ವಕ್ವಾಡಿ ಇದ್ದರು.  ಈ ಎಲ್ಲಾ ಕಾಯ೯ಕ್ರಮಗಳಿಗೆ ಸವ೯ರೂ ಭಾಗವಹಿಸುವಂತೆ ವಿನಂತಿಸಿದ್ದಾರೆ.

Related Articles

Back to top button
error: Content is protected !!