ಆರೋಗ್ಯ

ಆರೋಗ್ಯ ಪಾನೀಯ ಪಟ್ಟಿಯಿಂದ `ಬೋರ್ನ್ ವೀಟಾ` ಔಟ್, ಯಾವುದೇ ಆರೋಗ್ಯ ಪಾನೀಯವಲ್ಲ : ಕೇಂದ್ರ ಆದೇಶ

Views: 125

ಆರೋಗ್ಯ ಪಾನೀಯ ಪಟ್ಟಿಯಿಂದ `ಬೋರ್ನ್ ವೀಟಾ` ಔಟ್, ಯಾವುದೇ ಆರೋಗ್ಯ ಪಾನಿಯವಲ್ಲ : ಕೇಂದ್ರ ಆದೇಶ

ಇತ್ತೀಚಿಗೆ ಈ ಕಾಮರ್ಸ್ ಕಂಪೆನಿಗಳಿಗೆ ಬೋರ್ನ್ವಿಟಾವನ್ನು ಆರೋಗ್ಯ ಪಾನೀಯ ವರ್ಗದಿಂದ ತೆಗೆದು ಹಾಕುವಂತೆ ವಾಣಿಜ್ಯ ಸಚಿವಾಲಯ ಸೂಚನೆ ನೀಡಿದೆ.

ಬೋರ್ನ್ವಿಟವನ್ನು ಆರೋಗ್ಯ ಪಾನೀಯ ವರ್ಗದಿಂದ ತೆಗೆದುಹಾಕುವಂತೆ ಈ ಕಾಮರ್ಸ್ ಕಂಪನಿಗಳಿಗೆ ವಾಣಿಜ್ಯ ಸಚಿವಾಲಯ ಸೂಚನೆ ನೀಡಿತು. ಇದು ಯಾವುದೇ ಆರೋಗ್ಯ ಪಾನೀಯ ವರ್ಗಕ್ಕೆ ಸೇರುವುದಿಲ್ಲ ಎಂದು ಮಾಹಿತಿ ನೀಡಿದೆ.

ಫಿಟ್ನೆಸ್ ಡ್ರಿಂಕ್ ಬ್ರಾಂಡ್ ಗಳಿಗೆ ಬಾರಿ ಹೊಡೆತ ನೀಡುವಂತೆ ಕೇಂದ್ರ ಸರ್ಕಾರವು ಎಲ್ಲಾ ಈ ಕಾಮರ್ಸ್ ಕಂಪನಿಗಳಿಗೆ ಸುಪ್ರಸಿದ್ಧ ಹಾಲಿನ ಸಪ್ಲಿಮೆಂಟ್ ಬೋರ್ನ್ವಿಟಾ ಸೇರಿದಂತೆ ಎಲ್ಲಾ ಪಾನೀಯಗಳನ್ನು ಆರೋಗ್ಯಕರ ಪಾನೀಯ ವರ್ಗದಿಂದ ತೆಗೆದುಹಾಕುವಂತೆ ಸೂಚಿಸಿದೆ.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಡೆಸಿದ ವಿಚಾರಣೆಯ ನಂತರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಈ ಆದೇಶವನ್ನು ಹೊರಡಿಸಿದೆ.

ಇದು FSS ಕಾಯ್ದೆ 2006 ಅಡಿಯಲ್ಲಿ ವ್ಯಾಖ್ಯಾನಿಸಲಾದ ಯಾವುದೇ ಆರೋಗ್ಯ ಪಾನೀಯವಲ್ಲ ಎಂದು ತೀರ್ಮಾನಿಸಿದೆ.

ನ್ಯಾಷನಲ್ ಕಮಿಷನ್ ಫಾರ್ ಪ್ರೊಡಕ್ಷನ್ ಆಫ್ ಚೈಲ್ಡ್ ರೈಟ್ಸ್ ಕಾಯ್ದೆ FSS ಕಾಯ್ದೆ 2006ರ ಅಡಿಯಲ್ಲಿ ವ್ಯಾಖ್ಯಾನಿಸಲಾದ ಆರೋಗ್ಯ ಪಾನೀಯ, FSSAI ಮತ್ತು ಮೊಂಡೇಲೇಜ್ ಇಂಡಿಯಾ ಫುಡ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ ನಿಯಮಗಳು ಮತ್ತು ನಿಬಂಧನೆಗಳು ಎಂದು ಸಚಿವಾಲಯ ಏಪ್ರಿಲ್ 10ರ ಅಧಿಸೂಚನೆಯಲ್ಲಿ ತಿಳಿಸಿದೆ.

ಬೋರ್ನ್ ವಿಟವು ಸಕ್ಕರೆ ಮಟ್ಟವನ್ನು ಹೊಂದಿದ್ದು ಸ್ವೀಕಾರಾರ್ಹ ಮಿತಿಗಳಿಗಿಂತ ಹೆಚ್ಚಿನದಾಗಿದೆ ಎಂದು ತನಿಖೆಯೂ ಕಂಡುಹಿಡಿದಿದೆ ಎಂದು ತಿಳಿದುಬಂದಿದೆ.

Related Articles

Back to top button