70 ಅಡಿ ಆಳದ ಬೋರ್ವೆಲ್ ಒಳಕ್ಕೆ ಬಿದ್ದ 6 ವರ್ಷದ ಬಾಲಕ :ನಿರಂತರ ರಕ್ಷಣಾ ಕಾರ್ಯಚರಣೆ

Views: 78
ಮದ್ಯಪ್ರದೇಶ : ಮಯೂರ್ ಎಂಬ ಆರು ವರ್ಷದ ಬಾಲಕ ಕೊಳವೆ ಬಾವಿಗೆ ಬಿದ್ದಿದ್ದಾನೆ. 70 ಫೀಟ್ ಆಳದ ಕೊಳವೆ ಬಾವಿಯಲ್ಲಿ ಸಿಲುಕಿಕೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಆತನ ಉಳಿವಿಗಾಗಿ ರಾಜ್ಯ ವಿಪತ್ತು ತುರ್ತು ನಿರ್ವಹಣಾ ಪಡೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹೋರಾಟ ನಡೆಸುತ್ತಿದೆ. ಆದರೆ ಅಕಾಲಿಕ ಮಳೆ ಇವರ ರಕ್ಷಣಾ ಕಾರ್ಯಕ್ಕೆ ತೊಂದರೆಯಾಗುತ್ತಿದೆ.
ಮಧ್ಯಪ್ರದೇಶದ ರೇವಾದಲ್ಲಿ ನಿನ್ನೆ ಮದ್ಯಾಹ್ನ ಮಯೂರ್ ಎಂಬ ಬಾಲಕ ಸುಮಾರು 3:30ರ ಸುಮಾರಿಗೆ ಕೊಳವೆ ಬಾವಿಗೆ ಬಿದ್ದಿದ್ದಾನೆ. ಗೋಧಿ ಕಟಾವು ವೇಳೆ ಸ್ನೇಹಿತರೊಂದಿಗೆ ಆಟವಾಡುತ್ತಾ ಹೋಗಿ ಬೋರ್ವೇಲ್ಗೆ ಬಿದ್ದಿದ್ದಾನೆ. ಸದ್ಯ ಆತನನ್ನು ಮೇಲೆತ್ತಲು ನಿನ್ನೆಯಿಂದ ಕಾರ್ಯಚರಣೆ ನಡೆಯುತ್ತಿದೆ. 26 ಗಂಟೆಗಳ ನಿರಂತರ ಕಾರ್ಯಾಚರಣೆ ಮುಂದುವರೆದಿದೆ.
ಹೆಚ್ಚುವರಿ ಪೊಲೀಸ್ ಅಧಿಕಾರಿ ಅನಿಲ್ ಸೋಂಕರ್ ಮಾತನಾಡಿದ್ದು, ಬೋರ್ವೆಲ್ ಸುಮಾರು 70 ಅಡಿ ಅಳವಿದೆ. ಬಾಲಕ 40 ಅಡಿಯಲ್ಲಿ ಸಿಲುಕಿದ್ದಾನೆ. ಆತನಿಗೆ ಆಮ್ಲಜನಕ ಒದಗಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಬಾಲಕನ ಚಲನೆಯನ್ನು ಗಮನಿಸಲು ಸಿಸಿಟಿವಿ ಸಹ ಬೋರ್ವೆಲ್ ಒಳಕ್ಕೆ ಇಳಿಸಲಾಗಿದೆ. ಸದ್ಯ ಬಾಲಕನ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಆತನ ಉಳಿವಿಗಾಗಿ ಟ್ವಿಟ್ಟಗರು ಪ್ರಾರ್ಥನೆ ಮಾಡುತ್ತಿದ್ದಾರೆ.






