ಜನಮನ

ಆ್ಯಂಕರ್ ಅನುಶ್ರೀ ನಟ ರಕ್ಷಿತ್‌ ಶೆಟ್ಟಿ ಮದುವೆ? ಜಾಲತಾಣದಲ್ಲಿ ಹರಿದು ಬಂತು ತಾಳಿ ಕಟ್ಟುವ ಪೋಟೋ!!

Views: 247

ನಗು ಮೊಗದ ಚೆಲುವೆ ಆ್ಯಂಕರ್ ಅನುಶ್ರೀ ಮದುವೆ ವದಂತಿ ಹಬ್ಬಿದ್ದು ಇದೇನೂ ಮೊದಲಲ್ಲ. ಹಿಂದೆಯೂ ಅನೇಕ ಬಾರಿ ಈ ರೀತಿಯ ಗಾಳಿಸುದ್ದಿಗಳು ಕೇಳಿಬಂದಿದೆ.ಇದೆಲ್ಲಾ ಸುಳ್ಳಾಗಿದ್ದು. ಇದೀಗ ಕನ್ನಡದ ಸ್ಟಾರ್‌ ನಟ ಅನುಶ್ರೀ ಜೊತೆಗಿನ ಮದುವೆ ಕುರಿತು ಒಂದು ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸುದ್ಧಿ ವೈರಲ್‌ ಆಗಿದೆ.

ಇನ್ನೂ ನಟ ರಕ್ಷಿತ್‌ ಶೆಟ್ಟಿ ಸ್ಯಾಂಡಲ್‌ವುಡ್‌  ಬ್ಯಾಚುಲರ್‌ ಆಗಿದ್ದಾರೆ. ಇವರ ಫ್ಯಾನ್ಸ್‌ ಕೂಡ ರಕ್ಷಿತ್‌ ವಿವಾಹ ನೋಡಲು ಕಾದು ಕುಳಿತಿದ್ದಾರೆ. ಈ ಮಧ್ಯೆ ಇವರ ತಾಳಿ ಕಟ್ಟುವ ಪೋಟೋ ಹರಿದು ಬಂದಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಒಂದು ಫೋಟೋ ವೈರಲ್‌ ಆಗಿದ್ದು, ಇದರಲ್ಲಿ ರಕ್ಷಿತ್‌ ಶೆಟ್ಟಿ ಮತ್ತು ಅನುಶ್ರೀ ವಧು – ವರರಂತೆ ಕಾಣುತ್ತಿದ್ದಾರೆ. ರಕ್ಷಿತ್‌ ಕೈಯಲ್ಲಿ ತಾಳಿಯೂ ಇದೆ.

ಈ ವೈರಲ್‌ ಫೋಟೋ ನೋಡಿದವರಿಗೆ ಸಹಜವಾಗಿಯೇ ಇವರಿಬ್ಬರೂ ಮದುವೆಯಾಗ್ತಿದ್ದಾರೆ ಎಂದು ಅನಿಸುತ್ತದೆ.  ಅನುಶ್ರೀ ಮತ್ತು ನಟ ರಕ್ಷಿತ್‌ ಶೆಟ್ಟಿ ಮದುವೆಯಾಗಿದ್ದಾರೆ ಎಂದು ವದಂತಿ ಹರಡಲಾಗ್ತಿದೆ.

ಆದರೆ ಅಸಲಿ ವಿಚಾರವೇ ಬೇರೆಯಾಗಿದೆ. ಆ್ಯಂಕರ್ ಅನುಶ್ರೀ ಮತ್ತು ನಟ ರಕ್ಷಿತ್‌ ಶೆಟ್ಟಿ ಮದುವೆಯ ಈ ಫೋಟೋ ಎಡಿಟ್‌ ಆಗಿದೆ. ಇಬ್ಬರ ಫೋಟೋವನ್ನು ತೆಗೆದುಕೊಂಡು ಈ ರೀತಿ ಎಡಿಟ್‌ ಮಾಡಲಾಗಿದ್ದು, ಇದು ಸತ್ಯಕ್ಕೆ ದೂರವಾದ ಸಂಗತಿ ಆಗಿದೆ ತಿಳಿದು ಬಂದಿದೆ.

Related Articles

Back to top button
error: Content is protected !!