ಕೃಷಿ

ರೈತ ಯುವಕರನ್ನು ಮದುವೆಯಾಗೋರಿಗೆ 5 ಲಕ್ಷ ರೂ.ಕೊಡಿ ಎಂದು ರೈತ ಸಂಘದ ಅಧ್ಯಕ್ಷ  ಮುಖ್ಯಮಂತ್ರಿಗೆ ಮನವಿ

Views: 40

ಬೆಂಗಳೂರು, ರೈತ ಯುವಕರಿಗೆ ಮದುವೆ ಆಗಲು ಹುಡುಗಿಯರು ಸಿಗುತ್ತಿಲ್ಲ. ರೈತ ಯುವಕರನ್ನು ಮದುವೆಯಾಗೋರಿಗೆ 5 ಲಕ್ಷ ರೂ. ಕೊಡಿ ಎಂದು ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಸಿಎಂ ಸಿದ್ದರಾಮಯ್ಯ ಗೆ ಮನವಿ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಮಾತನಾಡಿ, ಬಡಗಲಪುರ ನಾಗೇಂದ್ರ ಅವರು ಇಂದು ಹಕ್ಕೊತ್ತಾಯ ಮಂಡಿಸಿದ್ದಾರೆ. ರೈತರಿಗೆ ಮದುವೆ ಆಗಲು ಹುಡುಗಿಯರು ಸಿಗುವುದು ಕಷ್ಟ ಅಂತ ಮನವಿ ಸಲ್ಲಿಸಿದ್ದಾರೆ. ನಾವೆಲ್ಲರೂ ರೈತರ ಮನೆತನದವರು. ರೈತರ ಮಕ್ಕಳೇ ಈಗ ಎಲ್ಲಾ ಕಡೆ ಇರುವುದು. ಕೃಷಿನ ಲಾಭದಾಯಕ ಮಾಡಿದರೆ ಹೆಣ್ಣು ಸಿಗುವುದು ಕಷ್ಟ ಆಗುವುದಿಲ್ಲ. ಶೇ.80 ರಷ್ಟು ಜನ‌ ಹಳ್ಳಿಗಳಲ್ಲಿದ್ದರು. ಈಗ ಶೇ.60 ರಷ್ಟು ಜನ ಇಲ್ಲೇ ಜೀವನ ಮಾಡುತ್ತಿದ್ದಾರೆ

ಪಟ್ಟಣಗಳಲ್ಲಿ ಈಗ ಸಮಸ್ಯೆ ಹೆಚ್ಚಾಗುತ್ತಿದೆ. ನಿಮ್ಮ ಹಕ್ಕೊತ್ತಾಯಗಳನ್ನು ಗಂಭೀರವಾಗಿ ಪರಿಗಣಿಸುತ್ತೇನೆ ಎಂದರು ಸಿಎಂ

Related Articles

Back to top button