72 ವರ್ಷಗಳಿಗೊಮ್ಮೆ ಆಚರಣೆಯ ದಿನಾಂಕ ಬದಲಾಗುವ ಮಕರ ಸಂಕ್ರಾಂತಿ!

Views: 47
2007 ಕ್ಕೂ ಮುಂಚೆ ನಾವೆಲ್ಲ ಜನವರಿ 14ರಂದು ಮಕರ ಸಂಕ್ರಾಂತಿ ಆಚರಿಸುತ್ತಿದ್ದೇವು
2008ರಿಂದ ಜನವರಿ 15ರಂದು ಮಕರ ಸಂಕ್ರಾಂತಿ ಹಬ್ಬ ಆಚರಣೆ ಮಾಡಲು ಶುರು ಮಾಡಿದ್ದೇವೆ.
ಸಾಮಾನ್ಯವಾಗಿ ಸೂರ್ಯನು ಧನುರ್ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಆಚರಿಸುವುದು ವಾಡಿಕೆ.
ಇಂದಿನಿಂದ ಮಿಥುನ ರಾಶಿಗೆ ಪ್ರವೇಶದ ‘ಉತ್ತರಾಯಣ ಪುಣ್ಯಕಾಲ’ ಎಂದು ಕರೆಯಲಾಗುತ್ತದೆ ಮತ್ತು ಪ್ರತಿವರ್ಷ ಸೂರ್ಯನು ಮಕರ ರಾಶಿಗೆ ಪ್ರವೇಶಿಸಲು ತೆಗೆದುಕೊಳ್ಳುವ ಕಾಲ 20 ನಿಮಿಷ ಬೇಕಾಗುತ್ತದೆ ಇದರ ಗಣನೆಯ ಆಧಾರದ ಮೇಲೆ ಇದು ಪ್ರತಿ ಮೂರು ವರ್ಷಗಳಿಗೊಮ್ಮೆ ಒಂದು ಗಂಟೆ ಮತ್ತು ಪ್ರತಿ 72 ವರ್ಷಗಳಿಗೊಮ್ಮೆ ಒಂದು ದಿನ ಆಗುತ್ತದೆ
ಈ ಲೆಕ್ಕಾಚಾರ ಅನ್ವಯ ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಪ್ರತಿ 72 ವರ್ಷಗಳಿಗೊಮ್ಮೆ ಒಂದು ದಿನ ಬದಲಾಗುತ್ತದೆ ಮುಂದಿನ 2080ರ ನಂತರ ಸಂಕ್ರಾಂತಿ ಹಬ್ಬವು ಜನವರಿ 16ರಂದು ಆಚರಿಸಲಿದ್ದೇವೆ.
1935 ರಿಂದ 2007 ರವರೆಗೆ ಹಬ್ಬವು ಜನವರಿ 14ರಂದು ಆಚರಿಸುತ್ತಿದ್ದೆವು 2008ರಿಂದ 2080ರ ವರೆಗೆ ಜನವರಿ 15ರಂದು ಸಂಕ್ರಾಂತಿ ಹಬ್ಬ ಆರಂಭಿಸಲಾಯಿತು.
ಪ್ರತಿ 72 ವರ್ಷಗಳಿಗೊಮ್ಮೆ ಹಬ್ಬವು ಒಂದು ದಿನದ ನಂತರ ಬದಲಾಗುತ್ತದೆ.






