ಜನಮನ

ಗಂಡ, ಹೆಂಡತಿ ಜಗಳಕ್ಕೆ ಮಗು ಬಲಿ? ಕೊನೆಗೂ ಬಯಲಾಯ್ತು ಕೊಲೆ ರಹಸ್ಯ!

Views: 293

ಬೆಂಗಳೂರು: ಪುಟ್ಟ ಮಗುವನ್ನು ಕೊಲೆ ಮಾಡಿ ತಾಯಿ ಸೂಟ್‌ಕೇಸ್‌ನಲ್ಲಿ ಸಾಗಿಸಿದ ಪ್ರಕರಣದ ರಹಸ್ಯ ಬಯಲಾಗಿದೆ.

ಸ್ಟಾರ್ಟ್‌ ಅಪ್ ಫೌಂಡರ್‌ ಹಾಗೂ ಸಿಇಒ ಸುಚನಾ ಸೇಠ್‌ ಅವರು ಗೋವಾದ ಹೋಟೆಲ್‌ನಲ್ಲಿ ಮಗುವನ್ನು ಉಸಿರುಗಟ್ಟಿಸಿ ಕೊಲೆ ಗೈದಿರುವ ಶಂಕೆ ವ್ಯಕ್ತವಾಗಿದೆ.

ಮಗುವಿನ ಕೊರಳಿನ ಭಾಗದಲ್ಲಿ ನರಗಳು ಊದಿಕೊಂಡಿರೋದು ಅನುಮಾನ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ.

ಕಳೆದ ಜನವರಿ 6ರಂದು ಸುಚೇನಾ ಸೇಠ್‌ ಅವರು ತನ್ನ ಮಗನ ಜೊತೆ ಗೋವಾಕ್ಕೆ ತೆರಳಿದ್ದರು. ಉತ್ತರ ಗೋವಾದ ಹೋಟೆಲ್‌ನಲ್ಲಿ ತಂಗಿದ್ದ ಸುಚೇನಾ ಸೇಠ್ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಬೆಂಗಳೂರಲ್ಲಿದ್ದ ಸ್ಟಾರ್ಟ್ ಅಪ್ ಫೌಂಡರ್ ಹಾಗೂ ಸಿಇಒ ಸುಚೇನಾ ಸೇಠ್‌ ಅವರು ಪಶ್ಚಿಮ ಬಂಗಾಳದ ಕೊಲ್ಕತ್ತಾ ಮೂಲದವರು. 2008-09ರಲ್ಲಿ ಸುಚೇನಾ ಅವರು ಬೆಂಗಳೂರಿನಲ್ಲಿ ತಮಿಳುನಾಡಿನ ಟೆಕ್ಕಿ ವೆಂಕಟರಮಣ ಜೊತೆ ವಿವಾಹವಾಗಿದ್ದರು. ಈ ಇಬ್ಬರ ನಡುವೆ ದಾಂಪತ್ಯ ಕಲಹ ಉಂಟಾಗಿ ಸುಚೇನಾ ಕಳೆದ 2 ವರ್ಷಗಳಿಂದ ಗಂಡನಿಂದ ದೂರವಿದ್ದರು. ಗಂಡ- ಹೆಂಡ್ತಿ ನಡುವಿನ ಈ ಡಿವೋರ್ಸ್ ಕೇಸ್ ಕೋರ್ಟ್‌ ಮೆಟ್ಟಿಲೇರಿತ್ತು.

ಡಿವೋರ್ಸ್ ಕೇಸ್ ವಿಚಾರಣೆ ನಡೆಸಿದ ಕೋರ್ಟ್, ಪ್ರತಿ ಭಾನುವಾರ ಮಗುವನ್ನು ನೋಡಲು ತಂದೆಗೆ ಕೋರ್ಟ್ ಅವಕಾಶ ನೀಡಿತ್ತು. ಗಂಡ ವೆಂಕಟರಮಣ, ವಿಡಿಯೋ ಕಾಲ್ ಮೂಲಕ ಪ್ರತಿ ಭಾನುವಾರ ಮಗುವನ್ನು ಸಂಪರ್ಕ ಮಾಡುತ್ತಿದ್ದ. ಈ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸುಚೇನಾ ಸೇಠ್ ಮಾನಸಿಕ ಒತ್ತಡದಲ್ಲಿದ್ದರು.

ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ ಸ್ಟಾರ್ಟ್ ಅಪ್ ಸಿಇಒ ಸುಚೇನಾ ಸೇಠ್‌ ಅವರು ತನ್ನ ಮಾಜಿ ಪತಿಯ ಜೊತೆ ಜಗಳದಿಂದ ಮಗು ಕೊಂದಿರುವ ಶಂಕೆ ವ್ಯಕ್ತವಾಗಿದೆ.

ಪ್ರತಿ ಭಾನುವಾರ ಮಗುವನ್ನು ನೋಡುವುದಕ್ಕೆ ಮಾಜಿ ಪತಿಗೆ ಕೋರ್ಟ್ ಅವಕಾಶ ನೀಡಿತ್ತು. ಇದೇ ಕಾರಣಕ್ಕೆ ಬೇಸರಗೊಂಡಿದ್ದ ಸುಚನಾ ಸೇಠ್ ಮಗುವನ್ನು ಕೊಂದಿರುವ ಶಂಕೆ ವ್ಯಕ್ತವಾಗಿದೆ. ಗಂಡ, ಹೆಂಡತಿಯ ಜಗಳಕ್ಕೆ ಮಗು ಬಲಿಯಾಗಿರುವುದು ದುರಂತವೇ ಸರಿ.

ಸುಚೇನಾ ಸೇಠ್ ಅವರನ್ನು ಬಂಧಿಸಿರುವ ಚಿತ್ರದುರ್ಗ ಪೊಲೀಸರು, ಮಗುವಿನ ಮೃತದೇಹವನ್ನು ಹಿರಿಯೂರು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿದ್ದಾರೆ. ಮಗುವಿನ ಕೊರಳಿನ ಭಾಗದಲ್ಲಿ ನರಗಳು ಊದಿಕೊಂಡಿದ್ದು, ಮಗುವನ್ನ ಕತ್ತು ಹಿಸುಕಿ ಸುಚನಾ ಸೇಠ್ ಸಾಯಿಸಿರುವ ಶಂಕೆ ವ್ಯಕ್ತವಾಗಿದೆ. 4 ವರ್ಷದ ಪುಟಾಣಿ ಮಗನನ್ನು ಕೊಲೆ ಮಾಡಿದ ಸುಚೇನಾ ಸೇಠ್ ಕೈ ಕೊಯ್ದುಕೊಂಡು ತಾನು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಶವಾಗಾರಕ್ಕೆ ಭೇಟಿ ನೀಡಿದ ವೈದ್ಯಾಧಿಕಾರಿ ಕುಮಾರ್ ನಾಯಕ್ ಅವರು ಗೋವಾ ಪೊಲೀಸರು ಆಗಮಿಸಿದ ಮೇಲೆ ಮುಂದಿನ ಕಾರ್ಯ ಮಾಡಲಾಗುತ್ತೆ. ಮರಣೋತ್ತರ ಪರೀಕ್ಷೆ ವೇಳೆ ಗೋವಾ ಪೊಲೀಸರು ಇರಬೇಕು ಎಂದಿದ್ದಾರೆ.

Related Articles

Back to top button
error: Content is protected !!