ನಿಯತ್ತಿನ ನಾಯಿ ಮೇಕೆ ಮರಿಗೆ ಹಾಲುಣಿಸುವ ಮಾತೃತ್ವದ ಪ್ರೀತಿಗೆ ಮಾರು ಹೋದ ಜನ!

Views: 35
ದೊಡ್ಡಬಳ್ಳಾಪುರ: ಸಾಕು ಪ್ರಾಣಿಗಳಲ್ಲಿ ನಿಯತ್ತಿನ ಪ್ರಾಣಿ ಎಂದರೆ ನಾಯಿ ಇಲ್ಲೊಂದು ಅಪರೂಪದ ನಾಯಿಯೊಂದು ಕೆಲವು ದಿನಗಳ ಹಿಂದಷ್ಟೇ ಮೂರು ಮರಿಗಳಿಗೆ ಜನ್ಮ ನೀಡಿತ್ತು. ಆದರೆ ದುರಾದೃಷ್ಟವಶಾತ್ ಅದರ ಮೇಲೆ ಒಂದು ನಾಯಿ ಮರಿ ಅಸುನೀಗಿತ್ತು. ಉಳಿದೆರಡು ನಾಯಿಮರಿಗಳು ತಾಯಿಯಿಂದ ಬೇರ್ಪಟ್ಟಿತ್ತು. ಕರುಳಿನ ಬಳ್ಳಿಗಳನ್ನು ಕಳೆದುಕೊಂಡಳು ತಾಯಿ ಶ್ವಾನವಿತ್ತು. ಇದರ ನೋವು ಅರಿತೋ ಏನೋ ವಾರದ ಹಿಂದಷ್ಟೇ ಜನಿಸಿದ ಮೇಕೆ ಮರಿಯೊಂದು ಶ್ವಾನದೊಂದಿಗೆ ಆತ್ಮೀಯತೆಯನ್ನು ಬೆಳೆಸಿಕೊಂಡಿದೆ. ಎಷ್ಟರ ಮಟ್ಟಿಗೆ ಎಂದರೆ ತನ್ನ ಕಂಡು ಓಡೋಡಿ ಬರುವ ಮೇಕೆ ಮರಿಗೆ ಶ್ವಾನವು ಹಾಲುಣಿಸುತ್ತಿದೆ. ಈ ಅಪರೂಪದ ಮಾತೃತ್ವಕ್ಕೆ ಜನರು ನಾಯಿ ಪ್ರೀತಿಗೆ ಮಾರುಹೋಗಿದ್ದಾರೆ.
ದೊಡ್ಡಬಳ್ಳಾಪುರದ ರಘುನಾಥಪುರದಲ್ಲಿ ಈ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಗ್ರಾಮದ ಕೃಷ್ಣಪ್ರಸಾದ್ ಎಂಬುವವರ ಮನೆಯ ಶ್ವಾನವು ಮೇಕೆ ಮರಿಗೆ ಹಾಲುಣಿಸುತ್ತಿದೆ. ಮೇಕೆ ಮರಿಯು ಜನ್ಮ ನೀಡಿದ ತಾಯಿಗಿಂತ ನಾಯಿಯೊಂದಿಗೆ ಹೆಚ್ಚು ಒಡನಾಟವನ್ನು ಹೊಂದಿದೆ. ಶ್ವಾನದ ಮೊಲೆಹಾಲು ಕುಡಿಯುವ ಮೇಕೆ ಮರಿಯನ್ನು ನೋಡುವುದೇ ಜನರಿಗೆ ಆಶ್ಚರ್ಯದ ಸಂಗತಿಯಾಗಿದೆ. ಕಳೆದ ಒಂದು ವಾರದಿಂದ ಮೇಕೆಮರಿ ಮತ್ತು ಶ್ವಾನದ ವಾತ್ಸಲ್ಯವು ಮುಂದುವರಿದಿದೆ.
ಮೇಕೆಗೆ ಆಹಾರ ನೀಡುವ ನಾಯಿ ಮಾತೃತ್ವದತ್ತ ಆಕರ್ಷಿತರಾದ ಜನರು ಅಂದಹಾಗೆ ಕೃಷ್ಣಪ್ರಸಾದ್ ಅವರು ಕಾಶ್ಮೀರದಿಂದ 30ಕ್ಕೂ ಹೆಚ್ಚು ಗಿಡ್ಡ ಮೇಕೆಗಳನ್ನು ತಂದು ಸಾಕುತ್ತಿದ್ದಾರೆ. ಈ ಮೇಕೆಗಳ ಕಾವಲಿಗೆಂದು ಈ ಶ್ವಾನವನ್ನು ಕೃಷ್ಣಪ್ರಸಾದ್ ಸಾಕಿದ್ದು, ಕಳೆದ ಎರಡು ವರ್ಷಗಳಿಂದಲೂ ಶ್ವಾನ ಕಾಯುತ್ತಿದೆ. ಹೀಗಿದ್ದಾಗ ವಾರದ ಹಿಂದಷ್ಟೇ ಮೇಕೆಯೊಂದು ಮರಿಗೆ ಜನ್ಮ ನೀಡಿತ್ತು. ಇತ್ತ ಶ್ವಾನವು ಹದಿನೈದು ದಿನಗಳ ಹಿಂದೆ ಮೂರು ಮರಿಗೆ ಜನ್ಮ ನೀಡಿತ್ತು. ಕಾರಣಾಂತರಗಳಿಂದ ಒಂದು ಶ್ವಾನ ಸತ್ತು, ಎರಡು ಮರಿ ಮಾತ್ರ ಉಳಿದುಕೊಂಡಿದ್ದವು. ಎರಡೂ ನಾಯಿ ಮರಿಗಳು ಮುದ್ದಾಗಿದ್ದ ಕಾರಣಕ್ಕೆ ಯಾರೋ ಸಾಕಲು ಹೋಗಿದ್ದರು
ಶ್ವಾನಕ್ಕೆ ತನ್ನ ಮರಿಗಳಿಲ್ಲ ಎಂಬ ಕೊರಗು ಒಂದು ಕಡೆಯಾದರೆ ಹಾಲುಣಿಸದೆ ಪರದಾಡುತ್ತಿತ್ತು. ಹೀಗಿದ್ದಾಗ ಪುಟ್ಟ ಹೆಜ್ಜೆ ಇಟ್ಟು ಬಂದ ಮೇಕೆಮರಿಯು ಶ್ವಾನದೊಂದಿಗೆ ಆತ್ಮೀಯತೆಯನ್ನು ಬೆಳೆಸಿಕೊಂಡಿದೆ. ಕರುಳಿನ ಸಂಬಂಧವಿಲ್ಲದ ಮೇಕೆ ಮರಿಗೆ ಶ್ವಾನವು ಹಾಲುಣಿಸುತ್ತಿದೆ. ಶ್ವಾನದ ಈ ಅಪರೂಪದ ತಾಯಿ ವಾತ್ಸಲ್ಯಕ್ಕೆ ಜನರು ಅಚ್ಚರಿಗೊಂಡು ಸಂತಸ ಪಡುತ್ತಿದ್ದಾರೆ. ಸದ್ಯ ಬೆಂಗಳೂರು ಗ್ರಾಮಾಂತರ ಪ್ರದೇಶದ ದೊಡ್ಡಬಳ್ಳಾಪುರದ ರಘುನಾಥಪುರ ಸೇರಿ ಈ ತಾಯಿ-ಮಗು ಪ್ರೀತಿಯನ್ನು ಕಣ್ತುಂಬಿಕೊಳ್ಳುವುದೇ ಕಾಯಕವಾಗಿದೆ.






