ಜನಮನ

ವಿಮಾನ ಅಪಘಾತದಲ್ಲಿ ಹಾಲಿವುಡ್ ಖ್ಯಾತ ನಟ, ಇಬ್ಬರು ಪುತ್ರಿಯರೂ ಸಾವು

Views: 113

ಹಾಲಿವುಡ್ ನಟ ಕ್ರಿಸ್ಟಿಯನ್ ಆಲಿವರ್ ಮತ್ತು ಅವರ ಇಬ್ಬರು ಪುತ್ರಿಯರು ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಪೂರ್ವ ಕೆರಿಬಿಯನ್ ದ್ವೀಪದ ಬಳಿ ವಿಮಾನ ಪತನಗೊಂಡು ಸ್ಟಾರ್ ನಟ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

51 ವರ್ಷದ ನಟ ಸಣ್ಣ ವಿಮಾನದ ಮೂಲಕ ಸೇಂಟ್ ಲೂಸಿಯಾಗೆ ಹೋಗುತ್ತಿದ್ದಾಗ ಬೆಕ್ವಿಯಾ ಬಳಿಯ ಐಲ್ಯಾಂಡ್​​ ಬಳಿ ಪತನವಾಗಿದೆ. ದುರಂತದಲ್ಲಿ ಅವರ ಇಬ್ಬರು ಹೆಣ್ಮಕ್ಕಳು ಸಾವನ್ನಪ್ಪಿದ್ದಾರೆ. 10 ವರ್ಷದ ಮದಿತಾ ಕ್ಲೆಪ್ಸರ್ ವರ್ಷದ ಆನಿಕ್ ಕ್ಲೆಪ್ಸರ್ ಜೊತೆಗೆ ಪೈಲಟ್ ರಾಬರ್ಟ್ ಸ್ಯಾಚ್ಸ್ ಕೂಡ ಮೃತಪಟ್ಟಿದ್ದಾರೆ.

ಅಪಘಾತಕ್ಕೆ ಕಾರಣ ತಿಳಿದುಬಂದಿಲ್ಲ. ಅಪಘಾತ ಆಗಿರೋದನ್ನು ಅಲ್ಲಿರುವ ಮೀನುಗಾರರು ನೋಡಿದ್ದಾರೆ. ಕೂಡಲೇ ಅವರನ್ನು ರಕ್ಷಣೆ ಮಾಡಲು ಮುಂದಾಗಿದ್ದರು, ಆದರೆ ಅವರ ಪ್ರಯತ್ನ ಫಲಿಸಲಿಲ್ಲ ಎಂದು ವರದಿಯಾಗಿದೆ. ಅಮೆರಿಕದ ಈ ನಟ ಮೂಲತಃ ಜರ್ಮನ್. 2008ರಲ್ಲಿ ತೆರೆ ಕಂಡಿದ್ದ ಸ್ಪೀಡ್ ರೇಸರ್ ಚಿತ್ರವು ಸಾಕಷ್ಟು ಮೈಲೇಜ್ ತಂದುಕೊಟ್ಟಿತ್ತು. ದಿ ಗುಡ್ ಜರ್ಮನ್, ಸೇವ್ಡ್ ಬೈ ದಿ ಬೆಲ್: ದಿ ನ್ಯೂ ಕ್ಲಾಸ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು.

Related Articles

Back to top button
error: Content is protected !!