ಜನಮನ

ಹಾಳು ಬಿದ್ದ ಮನೆಯಲ್ಲಿ 3 ಅಲ್ಲ 5 ಅಸ್ಥಿ ಪಂಜರಗಳು; ಆತ್ಮಹತ್ಯೆಯಾ? ಕೊಲೆಯಾ?

Views: 89

ಚಿತ್ರದುರ್ಗ: ಕೋಟೆನಾಡಿನ ಪಾಳುಬಿದ್ದ ಮನೆಯೊಂದರಲ್ಲಿ ಪತ್ತೆಯಾಗಿರುವುದು 3 ಅಸ್ಥಿಪಂಜರಗಳಲ್ಲ ಒಟ್ಟು 5 ಅಸ್ತಿಪಂಜರ ಎಂಬ ರೋಚಕ ಮಾಹಿತಿ ಬಹಿರಂಗವಾಗಿದೆ. ಪತ್ತೆಯಾದ 5 ಅಸ್ತಿಪಂಜರಗಳು ಚಳ್ಳಕೆರೆ ಗೇಟ್ ಬಳಿ ವಾಸವಿದ್ದ ಜಗನ್ನಾಥ್​ ರೆಡ್ಡಿ ಕುಟುಂಬದವರೇ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಮನೆಯಲ್ಲಿ 5 ಅಸ್ಥಿಪಂಜರಗಳು ಪತ್ತೆಯಾದ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಪಟ್ಟಂತೆ ಜಗನ್ನಾಥ್ ರೆಡ್ಡಿ ಸಂಬಂಧಿ ಲಲಿತಮ್ಮ ಎನ್ನುವವರು ಪ್ರತಿಕ್ರಿಯೆ ನೀಡಿ, ಕಳೆದ 8 ವರ್ಷದಿಂದ ಅವರು ಸಂಪರ್ಕದಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ.

ಈ ಸಾವಿನ ಬಗ್ಗೆ ಮಾತನಾಡಿರುವ ಲಲಿತಮ್ಮನವರು ಜಗನಾಥ್ ರೆಡ್ಡಿ ಅವರ ಪತ್ನಿ ಪ್ರೇಮಾ ಅವರು ನನಗೆ ತಂಗಿ ಆಗಬೇಕು. 8 ವರ್ಷದ ಮುಂಚೆ ಎಲ್ಲಿ ಹೋದರು ಫೋನ್​ ಮೂಲಕ ಸಂಪರ್ಕದಲ್ಲಿ ಇರುತ್ತಿದ್ದರು. ಆ ಮೇಲೆ ಎಲ್ಲಿ ಹೋದರು ಎಂದು ಗೊತ್ತಿಲ್ಲ. ಎಲ್ಲಿಯಾದರು ಅನಾಥಾಶ್ರಮ ಸೇರಿಕೊಂಡಿದ್ದಾರೆ ಎಂದುಕೊಂಡಿದ್ದೆ. ಇವರ ಮನೆಗೆ ಬಂದು ರಾತ್ರಿ ಮಲಗಿಕೊಂಡು ಬೆಳಗ್ಗೆ 6 ಗಂಟೆಗೆಲ್ಲ ಎದ್ದು ಹೋಗುತ್ತಿದ್ದೆ. ಅವರೆಲ್ಲ ಚೆನ್ನಾಗಿದ್ದರು. ಮನೆಯಲ್ಲಿ ಏನಾದರು ಮಾಡಿದರೆ ಬಾ.. ದೊಡ್ಡಮ್ಮ. ಅಮ್ಮ ಕರೆಯುತ್ತಾರೆ ಎಂದು ಮಕ್ಕಳು ಕರೆಯುತ್ತಿದ್ದರು. ಮಕ್ಕಳಿಗೆ ಮದುವೆಯಾಗಿಲ್ಲ ಎನ್ನುವುದು ಮಾವ ಜಗನಾಥ್​ಗೆ ಮಾನಸಿಕವಾದ ನೋವಾಗಿತ್ತು ಎಂದು ಹೇಳಿದ್ದಾರೆ.

ಒಬ್ಬರಿಗೂ ಮದುವೆ ಮಾಡಲಿಲ್ಲಂತ ಮಾವ ಸಿಡುಕುತ್ತಿದ್ದರು. ತಂಗಿ ಪ್ರೇಮಾ ಕೂಡ ಬೇಸರವಾಗಿದ್ದಳು. ದೊಡ್ಡ ಮಗ ಹಾಸನದಲ್ಲಿ ಡಾಕ್ಟರ್ ಆಗಿದ್ದ. ಆದರೆ ಅವನಿಗೆ ಹಾರ್ಟ್​ ಅಟ್ಯಾಕ್ ಆಗಿ ಮೊದಲೇ ತೀರಿ ಹೋಗಿದ್ದನು. ಕೃಷ್ಣಾ ರೆಡ್ಡಿ ಹೊಲಗಳನ್ನು ಮಾಡುತ್ತಿದ್ದನು. ಸಣ್ಣವ ನರೇಂದ್ರ ಎಂಜಿನಿಯರ್‌ ಆಗಿದ್ದನು. ಇವರು ಒಂದೆರಡು ವರ್ಷ ಎಂಜಿನಿಯರ್‌ ಕೆಲಸ ಮಾಡಿದ. ಅಲ್ಲೇನು ಕಂಪನಿಯ ಕಬ್ಬಿಣದ ಕೇಸ್​ನಲ್ಲಿ ಸಿಕ್ಕಿ ಹಾಕಿಕೊಂಡಿದ್ದನು ಅಷ್ಟೇ ನಮಗೆ ಗೊತ್ತಿರೋದು. 1 ವರ್ಷ ಜೈಲಿಗೆ ಹೋಗಿ ಬಂದ ಮೇಲೆ ಚೆನ್ನಾಗಿದ್ದರು. ಅದರದೇನು ಇರಲಿಲ್ಲ. ಆ ಮೇಲೆ ಅವರ ಮನೆ ಕಡೆ ನಾನು ಹೋಗುತ್ತಿರಲಿಲ್ಲ ಎಂದು ಹೇಳಿದರು

ಏನಾದರೂ ತೊಂದರೆ ಆಗಿದ್ದಾಗ ತಂಗಿ, ಮಗಳು ಅಳುತ್ತಾ ಫೋನ್ ಮಾಡಿ ಬಾ ಎಂದು ಹೇಳುತ್ತಿದ್ದರು. ನನ್ನ ಯಜಮಾನನು ಅವರ ಮನೆಗೆ ನನ್ನನ್ನು ಬಿಟ್ಟು ಬರುತ್ತಿದ್ದರು. ಇತ್ತೀಚೆಗೆ ಏನಾಗಿತ್ತೋ ಗೊತ್ತಿಲ್ಲ ಫೋನ್ ಮಾಡೋದೆ ಬಿಟ್ಟಿದ್ದರು. ನಾವು ಫೋನ್ ಮಾಡಿದರು ರಿಸೀವ್ ಮಾಡುತ್ತಿರಲಿಲ್ಲ. ಇಬ್ಬರಿಗೂ ಚೆನ್ನಾಗಿಲ್ಲದ ಕಾರಣ ಎಲ್ಲಿಯಾದರು ಅನಾಥಾಶ್ರಮಕ್ಕೆ ಸೇರಿದ್ದಾರೆ ಎಂದುಕೊಂಡಿದ್ದೇವು. ತುಮಕೂರು, ಗುಬ್ಬಿ ಸೇರಿ ಎಲ್ಲ ಕಡೆ ಕೇಳಿದ್ವಿ. ಆದರೆ ಅವರು ಎಲ್ಲಿಯೂ ಪತ್ತೆಯಾಗಿರಲಿಲ್ಲ. ಜಮೀನಿನ ಪಾಣಿ ಅವರ ಹೆಸರಿಗೆ ಬರುತ್ತಿದ್ದರಿಂದ ಫೋನ್ ಮಾಡಿದ್ರೆ ಫೋನ್​ ರಿಸೀವ್ ಮಾಡುತ್ತಿರಲಿಲ್ಲ. ಅವರ ಜಮೀನು ಇಲ್ಲೇ ಇದೆ. ಆದರೆ ಅದು ಸಂಪೂರ್ಣ ಅವರ ಹೆಸರಿಗೆ ಆಗಿಲ್ಲ ಎಂದು ಹೇಳಿದ್ದಾರೆ.

ಪಾಳು ಬಿದ್ದ ಮನೆಯಲ್ಲಿ ಮೃತರನ್ನು ಜಗನ್ನಾಥ್​ ರೆಡ್ಡಿ, ಪತ್ನಿ ಪ್ರೇಮಾ ರೆಡ್ಡಿ, ಮಕ್ಕಳಾದ ತ್ರಿವೇಣಿ ರೆಡ್ಡಿ, ನರೇಂದ್ರ ರೆಡ್ಡಿ, ಕೃಷ್ಣಾ ರೆಡ್ಡಿ ಎಂದು ಅಂದಾಜಿಸಲಾಗಿದೆ. ಮೊದಲ ಬಾರಿಗೆ ಒಂದು ಬೆಡ್ ರೂಮ್​ನಲ್ಲಿ ಮೂರು ಅಸ್ಥಿಪಂಜರಗಳು ಪತ್ತೆ ಆಗಿದ್ದವು. ಕೆಲ ಸಮಯದ ನಂತರ ಮತ್ತೊಂದರಲ್ಲಿ 2 ಅಸ್ಥಿಪಂಜರ ಪತ್ತೆಯಾಗಿವೆ. ಜಗನ್ನಾಥ್ ರೆಡ್ಡಿಯವರು ದೊಡ್ಡ ಸಿದ್ದವ್ವನಹಳ್ಳಿ ಮೂಲದವರಾಗಿದ್ದು ಮನೆಯಲ್ಲಿ ಪತ್ತೆಯಾದ ಅಸ್ಥಿಪಂಜರಗಳು ಇವರ ಕುಟುಂಬದ್ದೇ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಸದ್ಯ ವಿಧಿ ವಿಜ್ಞಾನ ತಜ್ಞರು ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.

ಜಗನ್ನಾಥ್​ ರೆಡ್ಡಿ ಹಾಗೂ ಪತ್ನಿ ಪ್ರೇಮಾ ಅವರಿಗೆ ಮೂವರು ಗಂಡು ಮಕ್ಕಳಿದ್ದು, ಓರ್ವ ಮಗಳಿದ್ದಳು. ಒಟ್ಟು 6 ಮಂದಿ ಕುಟುಂಬದಲ್ಲಿದ್ದರು. ಇವರ ಹಿರಿಯ ಮಗ ಡಾ.ಮಂಜುನಾಥ್ ರೆಡ್ಡಿ ಈ ಹಿಂದೆಯೇ ಮೃತಪಟ್ಟಿದ್ದನು. 2ನೇ ಮಗ ಕೃಷ್ಣಾ ರೆಡ್ಡಿ, ಮಗಳು ತ್ರಿವೇಣಿ ರೆಡ್ಡಿ ಹಾಗೂ 4ನೇ ಮಗ ನರೇಂದ್ರ ರೆಡ್ಡಿ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಈ ಕೊನೆ ಮಗನ ವಿರುದ್ಧ ಸಾಕಷ್ಟು ವಂಚನೆ ಆರೋಪ ಕೇಳಿ ಬಂದಿದ್ದವು. ಮಗನ ಕೃತ್ಯಕ್ಕೆ ಬೇಸತ್ತು ಕುಟುಂಬವು ಸಮಾಜದಿಂದ ದೂರ ಉಳಿದಿತ್ತು. ಇಂತಹ ಆರೋಪಗಳು ಹಿನ್ನೆಲೆಯಲ್ಲಿ ಕುಟುಂಬ ಸಮೇತ ತುಮಕೂರಿಂದ ಚಿತ್ರದುರ್ಗಕ್ಕೆ ಬಂದಿದ್ದರು.

ಮನೆಯಲ್ಲಿ ಪತ್ತೆಯಾದ ಅಸ್ಥಿಪಂಜರಗಳ ಬಗ್ಗೆ ಜಗನಾಥ್​ ಸಂಬಂಧಿಯಾದ ಪವನ್ ಕುಮಾರ್ ಎಂಬುವರಿಂದ ಬಡಾವಣೆ ಠಾಣೆಗೆ ದೂರು ನೀಡಿದ್ದರು. ಸಂಬಂಧಿ ಜಗನ್ನಾಥ್​ ರೆಡ್ಡಿ ಮತ್ತು ಕುಟುಂಬ ವಾಸವಾಗಿದ್ದರು. 3 ವರ್ಷದ ಹಿಂದೆಯೇ ಮನೆಯಲ್ಲಿ ಮೃತಪಟ್ಟಿರಬಹುದು. ಮೃತರ ಸಾವಿನ ಬಗ್ಗೆ ಅನುಮಾನ ಇದೆ ಎಂದು ಅವರು ಪ್ರಕರಣ ದಾಖಲು ಮಾಡಿದ್ದಾರೆ.

ಪತ್ತೆಯಾದ ಅಸ್ಥಿಪಂಜರದ ಸುತ್ತ ಹಲವು ಅನುಮಾನಗಳಿವೆ. ಸುಮಾರು ವರ್ಷಗಳಿಂದ ಜಗನ್ನಾಥ್​ ರೆಡ್ಡಿ ಕುಟುಂಬ ಯಾರ ಸಂಪರ್ಕದಲ್ಲಿ ಇಲ್ಲ. ನಮ್ಮ ಮನೆಗೆ ಅವರು ಬರ್ತಿರಲಿಲ್ಲ, ಅವರ ಮನೆಗೆ ನಾವು ಹೋಗ್ತಿರಲಿಲ್ಲ. ಕೆಲ ವರ್ಷಗಳಿಂದ ಜಗನ್ನಾಥ್​ ರೆಡ್ಡಿ ಮತ್ತು ಕುಟುಂಬದವರು ಕಂಡಿಲ್ಲ. ಮನೆಯಲ್ಲಿ ಪತ್ತೆ ಆಗಿರುವುದು ಅವರವೇ ಅಸ್ಥಿಪಂಜರ ಆಗಿರಬಹುದು. 3 ವರ್ಷದ ಹಿಂದೆ ಅವರು ಮನೆಯಲ್ಲಿ ಮೃತಪಟ್ಟಿರಬಹುದು. ಮೃತರ ಸಾವಿನ ಬಗ್ಗೆ ಪವನ್ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

 

 

 

Related Articles

Back to top button
error: Content is protected !!