ಜನಮನ

ಮನೆಯೊಂದರ ಮಂಚದಲ್ಲಿ ಬೆಡ್‌ಶೀಟ್‌ ಒಳಗೆ ಬುಸ್ ಎಂದ ನಾಗಪ್ಪ!  ಮುಂದೇನಾಯಿತು..? 

Views: 12

ತುಮಕೂರು:  ಮನೆಯಲ್ಲಿರುವ ಮಂಚದ ಮೇಲೆ ಒಂದು ಬೆಡ್‌ ಶೀಟ್‌ ಇತ್ತು. ಅದನ್ನು ಮೇಲೆತ್ತಿ ಮಡಚಿ ಇಡೋಣ ಎಂದು ಮೆಲ್ಲನೆ ಎತ್ತಿದರೆ ಎದೆ ಧಸಕ್ಕೆಂದಿತ್ತು. ಯಾಕೆಂದರೆ, ಬೆಡ್‌ ಶೀಟ್‌ ಒಳಗೆ ಇದ್ದಿದ್ದು ಬುಸ್‌ ಬುಸ್‌ ಎಂದು ನಾಗಪ್ಪ!

ಈ ಘಟನೆ ನಡೆದಿರುವುದು ತುಮಕೂರು ತಾಲೂಕಿನ ಕಂಬಾಳಪುರ ಗ್ರಾಮದಲ್ಲಿ ಇಲ್ಲಿನ ಮುನಿಯಪ್ಪ ಅವರ ಮನೆಯ ಮಂಚದ ಮೇಲೆ ಹಾವು‌ ಇತ್ತು ಮೆಲ್ಲಗೆ ಬೆಡ್‌ ಶೀಟ್‌ ಎತ್ತಿದ್ದರಿಂದ ಹಾವು ಇರುವುದು ಗೊತ್ತಾಯಿತು. ಒಂದು ವೇಳೆ ಜೋರಾಗಿ ಎತ್ತಿ ಕೊಡವಿಬಿಟ್ಟಿದ್ದರೆ ಏನಾಗುತ್ತಿತ್ತೋ ಎಂದು ಭಯದಲ್ಲೇ ಆ ಮನೆ ನಡುಗಿಹೋಗಿತ್ತು. ಅಬ್ಬಾ ಅಪಾಯ ಜಸ್ಟ್‌ ಮಿಸ್‌!

ಆಯಿತು ಅಂತ ನೂರು ದೇವರನ್ನು ನೆನಪಿಸಿಕೊಂಡ ಅವರು ಕೂಡಲೇ ಉರಗ ತಜ್ಞ ದಿಲೀಪ್‌ಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಭೇಟಿ ನೀಡಿದ ವಾರಂಗಲ್ ಫೌಂಡೇಷನ್ ವನ್ಯ ಜೀವಿ ಹಾಗೂ ಉರಗ ತಜ್ಞ ದಿಲೀಪ್ ಮತ್ತು ಕಿರಣ್ ಅವರು ಮೆಲ್ಲನೆ ಬೆಡ್‌ಶೀಟ್‌ ಮೇಲೆತ್ತಿದರು. ಅದುವರೆಗೆ ಏನೂ ಆಗಿಲ್ಲ ಎಂಬಂತೆ ಬೆಚ್ಚಗೆ ಮಲಗಿದ್ದ ಹಾವು ಇವರನ್ನು ನೋಡಿದ್ದೇ ತಡ ಬುಸುಗುಡಲು ಆರಂಭ ಮಾಡಿತು. ಹಿಡಿಯಲು ಹೋದಾಗ ಹೆದರಿಸಿ ಕಚ್ಚಲು ಬಂತು.

ಅಂತಿಮವಾಗಿ ಹೆಡೆ ಎತ್ತಿ ಬುಸುಗುಡುತ್ತಿದ್ದ ಸುಮಾರು ಐದು ಅಡಿ ಉದ್ದದ ನಾಗರ ಹಾವನ್ನು ಹೇಗೋ ರಕ್ಷಣೆ ಮಾಡಲಾಯಿತು. ಮನೆ ಮಂದಿ ನೆಮ್ಮದಿಯ ನಿಟ್ಟುಸಿರುಬಿಟ್ಟರು. ಕೊನೆಗೆ ನಾಗರಹಾವನ್ನು ಸಮೀಪದ ಕಾಡಿಗೆ ಬಿಡಲಾಯಿತು.

Related Articles

Back to top button
error: Content is protected !!