ಶರೀರ ಮಾಧ್ಯಂ ಖಲು ಧರ್ಮ ಸಾಧನಮ್

Views: 223
ಮಾನವನಿಗೆ ಆತನ ಶರೀರ ಪರಮಾತ್ಮನಲ್ಲಿ ಐಕ್ಯನಾಗಲು ಒಂದು ಸಾಧನೆ. ಈ ಶರೀರವು ಯಾವುದರಿಂದ ಮಾಡಲಾಗಿದೆ? ಇದರ ಸೃಷ್ಟಿ ಹೇಗೆ ಆಯಿತು? ನಮ್ಮ ಶರೀರವನ್ನು ಸೃಷ್ಟಿಸಿದ ದೇವರು ಸೃಷ್ಟಿ ಹೇಗಾಯಿತು? ದೇವರೆಂಬುದು ಜ್ಞಾನವೇ ವಿಜ್ಞಾನವೇ? ತಿಳಿಯೋಣ…
“ಹಿಂದೂ ಪುರಾಣಗಳಲ್ಲಿ, ಪವಿತ್ರ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶರ ಉಲ್ಲೇಖವಿದೆ. ಅವುಗಳನ್ನು ಕ್ರಮವಾಗಿ ಎಲೆಕ್ಟ್ರಾನ್, ಪ್ರೋಟಾನ್ ಮತ್ತು ನ್ಯೂಟ್ರಾನ್ ಎಂದು ಪರಿಗಣಿಸಬಹುದು. ಬ್ರಹ್ಮವು ಎಲೆಕ್ಟ್ರಾನ್, ಋಣಾತ್ಮಕ ಆವೇಶವನ್ನು ಹೊಂದಿದೆ. ಬ್ರಹ್ಮನು ಮಾಯೆಯನ್ನು ಸೃಷ್ಟಿಸಿದನೆಂದು ಹೇಳಲಾಗುತ್ತದೆ, ಸೃಷ್ಟಿಕರ್ತನಾಗಿ ಕಾರ್ಯನಿರ್ವಹಿಸುತ್ತದೆ. ವಿಷ್ಣುವು ಪ್ರೋಟಾನ್, ಧನಾತ್ಮಕ ಆವೇಶವನ್ನು ಹೊಂದಿದೆ. ಅವರು ಸೃಷ್ಟಿಯನ್ನು ಉಳಿಸಿಕೊಳ್ಳುತ್ತಾರೆ ಮತ್ತು ಮಾನವ ಅಭಿವೃದ್ಧಿಯನ್ನು ನೋಡಿಕೊಳ್ಳುತ್ತಾನೆ ಎಂದು ಹೇಳಲಾಗುತ್ತದೆ. ಶಿವನು ನ್ಯೂಟ್ರಾನ್ ಅನ್ನು ಪ್ರತಿನಿಧಿಸುತ್ತಾನೆ, ತಟಸ್ಥವಾಗಿ ಆವೇಶವನ್ನು ಹೊಂದಿದೆ. ನ್ಯೂಟ್ರಾನ್‌ಗಳು ಮಾನವರಲ್ಲಿ ಅಪಾರ ವಿನಾಶವನ್ನು ಉಂಟುಮಾಡಬಹುದು, ಅಲ್ಲಿ ಶಿವನನ್ನು ವಿಧ್ವಂಸಕ ಎಂದು ಸೂಚಿಸುತ್ತದೆ. ತ್ರಿಮೂರ್ತಿಗಳ ಹೊರಹೊಮ್ಮುವಿಕೆಯನ್ನು ಬೆಂಬಲಿಸುವ ಗ್ರಂಥಗಳು ಇವೆ, ಭಗವಾನ್ ಶಿವನು ಜ್ಯೋತಿರ್ಲಿಂಗವಾಗಿ ಅಸ್ತಿತ್ವದಲ್ಲಿದ್ದನು (ಅಂತರದಲ್ಲಿ ಇರುವವನು) ವಿಷ್ಣುವು ಲಿಂಗದಿಂದ (ನೀರಿನಲ್ಲಿ ಉಳಿಯುವವನು) ಹೊರಹೊಮ್ಮಿದನು ಮತ್ತು ಬ್ರಹ್ಮನು ವಿಷ್ಣುವಿನ ಹೊಕ್ಕುಳದಿಂದ ಹೊರಬಂದನು (ಅವನು ಕಮಲದ ಮೇಲೆ ಉಳಿಯುತ್ತಾನೆ. )
ಬಿಗ್ ಬ್ಯಾಂಗ್ ಸಿದ್ಧಾಂತದ ಪ್ರಕಾರ, 460,ಕೋಟಿ ವರ್ಷಗಳ ಹಿಂದೆ ಏಕತ್ವದ (ಜ್ಯೋತಿರ್ಲಿಂಗ) ವಿಸ್ತರಣೆ ಸಂಭವಿಸಿತು. ಮೂರು ಶಕ್ತಿಗಳ ರಚನೆ ಆಯಿತು – ಬೆಂಕಿ, ಶಾಖ ಮತ್ತು ಧ್ವನಿ. ಅದು ಶಾಂತವಾಗಲು 100 ಕೋಟಿ ವರ್ಷಗಳನ್ನು ತೆಗೆದುಕೊಂಡಿತು. ಏಕಕೋಶೀಯ ಆಮ್ಲಜನಕರಹಿತ ಹೆಟೆರೊಟ್ರೋಫಿಕ್ ಬ್ಯಾಕ್ಟೀರಿಯಾದ ಮೂಲಕ ಸಾಗರದಲ್ಲಿ ಜೀವನ ಪ್ರಾರಂಭವಾಯಿತು. ಅವರು ನೀರಿನಲ್ಲಿ ದೀರ್ಘಕಾಲ ಇದ್ದರು ಮತ್ತು ಜೀವನದ ಆಧಾರವಾಯಿತು (ವಿಷ್ಣು). 2% ರಷ್ಟು ಅನಿಲವನ್ನು ಉತ್ಪಾದಿಸುವ ಬ್ಯಾಕ್ಟೀರಿಯಾವು ಇತರ ಎಲ್ಲಾ ಸೃಷ್ಟಿಗಳಿಗೆ ಕಾರಣವಾಯಿತು(ಬ್ರಹ್ಮ). ಮತ್ತು ಶಿವನು ಸಮುದ್ರ ಮಟ್ಟದಿಂದ 6000 ಅಡಿಗಳಷ್ಟು ಕೈಲಾಸ ಪರ್ವತದ ಮೇಲೆ ಕುಳಿತಿದ್ದಾನೆ, ಅಲ್ಲಿ ಆಮ್ಲಜನಕ (ಪ್ರಾಣ/ಕರ್ಮ) ಇಲ್ಲ. ಅವನು ಅಂತಿಮ ನಾಯಕನಾಗಿ ಕಾರ್ಯನಿರ್ವಹಿಸುತ್ತಾನೆ.
ಮಾನವ ಜನ್ಮಕ್ಕೆ ಹೇಗೆ ಬರುವುದು ಎಂಬುದರ ಬಗ್ಗೆ ಹೇಳುತ್ತೇನೆ… ಹುಟ್ಟಿಗೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಇದು ಕೇವಲ ಕಾಲಚಕ್ರದ ಪ್ರಭಾವ. ಎಂಭತ್ನಾಲ್ಕು ಲಕ್ಷ ಯೋನಿಗಳ ಜೀವನವನ್ನು ದಾಟಿದ ನಂತರ ಒಬ್ಬರು ಮಾನವ ಜೀವನವನ್ನು ಪಡೆಯುತ್ತಾರೆ. ಮಾನವರು ಬ್ರಹ್ಮಾಂಡದೊಂದಿಗೆ ಮತ್ತೆ ಒಂದಾಗುವ ಅವಕಾಶವನ್ನು (ಏಳು ಜನ್ಮಗಳು) ಪಡೆಯುತ್ತಾರೆ. ಹಾಗೆ ಮಾಡಲು ವಿಫಲವಾದರೆ, ಅವರು ಮತ್ತೆ ಎಂಬತ್ತನಾಲ್ಕು ಲಕ್ಷ ಜಾತಿಗಳಾಗಿ ಪುನರ್ಜನ್ಮ ಪಡೆಯಬೇಕು. ಆದ್ದರಿಂದ, ಮಾನವನ ಜೀವನವು ಇತರರಿಗಿಂತ ಅತ್ಯಂತ ಅಮೂಲ್ಯವಾಗಿದೆ.
ಪ್ರತಿಯೊಬ್ಬ ಮನುಷ್ಯನ ಮಹದಾಸೆ ಏನಾದರೂ ಸಾಧಿಸಬೇಕೆಂಬ ಉತ್ಕಟ ಬಯಕೆ ಇದ್ದೇ ಇರುತ್ತದೆ.ಅದು ಸಂತೋಷಕರ ಸಂಗತಿಯೇ.ಈ ಕಾಲದಲ್ಲಿಯ ಜೀವನ ಆನಂದಮಯ ಹಾಗೂ ತೃಪ್ತಿಕರವಾಗಿರದೇ ಎಲ್ಲೊ ಕಳೆದುಕೊಂಡಹಾಗೆ,ಏನೊ ಹುಡುಕುತ್ತಿರುವ ಹಾಗೆ ಬಹಳ ಜನರನ್ನು ಕಾಣುತ್ತೇವೆ.ಯಾವದರಲ್ಲಿಯೂ ಸಮಧಾನ ಇಲ್ಲ.ಇನ್ನು ಕೆಲವರಿಗಂತೂ ಭಯವೇ ಜೀವನದಲ್ಲಿ ಆವರಿಸಿದೆ.ಚಿಕ್ಕವರಿಗೆ ಶಾಲಾ,ಕಾಲೇಜಿನಲ್ಲಿ ಅಂಕಗಳಿಸುವ ತುಡಿತವಿದ್ದರೆ,ಯುವಕರಿಗೆ ಜೀವನೋಪಾಯದ ಚಿಂತೆ ವಯಸ್ಕರಿಗೆ ಅನಾರೋಗ್ಯದ ಛಾಯೆ ಅಷ್ಟೇ ಅಲ್ಲದೇ ತಪ್ಪಿಸಲಾಗದ ಮರಣ ಹತ್ತಿರವಾದಂತೆ ಅವರದೇ ಬೇರೆ ದುಗುಡ,ಆತಂಕ.ಹೀಗಾಗಿ ದೊರಕಿರುವ ಆಯುಷ್ಯದಲ್ಲಿ ಮನುಷ್ಯನಿಗೆ ಕ್ರಮಬದ್ಧವಾಗಿ,ಶಿಸ್ತಿನ ಜೀವನ ಶೈಲಿ ಇದ್ದರೆ ಒಳ್ಳೆಯ ಆರೊಗ್ಯ ಲಭಿಸಿ ಅಂದು ಕೊಂಡ ಸಾಧನೆ ಸಾಧ್ಯ.
ಸಾಧನೆ ಮಾಡಬೇಕಿದ್ದರೆ ಆರೋಗ್ಯಕರ ಶರೀರದ ಅತ್ಯವ ಶ್ಯಕತೆ ಇರುತ್ತದೆ.ಒಟ್ಟಿನಲ್ಲಿ ರೋಗ ರಹಿತವಾಗಿರುವದೆಂದ ರೆ,ಮಾನಸಿಕ ಹಾಗೂ ದೈಹಿಕಸ್ವಾಸ್ಥ್ಯಕಾಪಾಡಿಕೊಳ್ಳುವು ದು.ಹಾಗಾದರೆ ಅನಾರೋಗ್ಯ ಇರದೇ ಆರೋಗ್ಯ ಭಾಗ್ಯ ದೊರಕುವ ಬಗೆಯನ್ನು ತಿಳಿಯಲು ಪ್ರಯತ್ನ ಮಾಡೋಣ
ನಮ್ಮ ಭಾರತೀಯ ಸಂಸ್ಕ್ರತಿಯಲ್ಲಿ ಪ್ರತಿ ಮನುಷ್ಯನ ಮೂಲ ಉದ್ದೇಶ ಧರ್ಮ,ಅರ್ಥ,ಕಾಮ ಮತ್ತು ಮೋಕ್ಷವ ನ್ನುಪಡೆಯುವದು.ಈ ನಾಲ್ಕು ಮನುಷ್ಯನ ವಶವಾಗಬೇಕಾದರೆ ಎಲ್ಲಕ್ಕಿಂತ ಅತಿ ಮುಖ್ಯವಾಗಿ ಬೇಕಾಗಿರುವದು ಒಳ್ಳೆಯ ಆರೋಗ್ಯ.ಅನಾರೋಗ್ಯ ವ್ಯಕ್ತಿಗೆ ಧರ್ಮಕರ್ಮ ಗಳಾಗಲೀ ಸಾಧಿಸುವುದಿಲ್ಲ ಹಾಗೂ ಅರ್ಥವ್ಯವಸ್ಥೆಯೂ ದೊರಕುವದಿಲ್ಲ.ಜೀವನದ ಸುಖ ಸಂತೋಷಗಳಿಂದ ಅವನು ದೂರವೇ ಉಳಿಯಬೇಕಾಗುತ್ತದೆ.
ಮೋಕ್ಷವಂತು ದೂರವೇ ಉಳಿಯಿತು.ಜೀವನದಲ್ಲಿ ಆರೋಗ್ಯ ಒಂದು ಕಡೆಯಾದರೆ ಉಳಿದೆಲ್ಲಸುಖ,ಸಂಪತ್ತು,ಧನ,ಕೀರ್ತಿ,ಜನಮನ್ನಣೆ ಇತ್ಯಾದಿಗಳೆಲ್ಲವೂ ಇನ್ನೊಂದು ಕಡೆ ತೂಗುತ್ತವೆ.”ಆರೋಗ್ಯವಂತ ಬಡವನ ಬಾಳು ಸಿರಿವಂತ ರೋಗಿಯ ಅಳು” ಇವೆರಡರಲ್ಲಿ ಆರೋಗ್ವಂತನ ಬಾಳೇ ಶ್ರೇಷ್ಠ.ಅನಾದಿ ಕಾಲದಿಂದಲೂ ಭಾರತೀಯರಿಗೆ ಆರೋಗ್ಯ ದ ಕಾಳಜಿ,ಅರಿವು,ಪಾಲಿಸುವ ಸದಭಿರುಚಿ ಇದ್ದೇ ಇತ್ತು. ಅವೆಲ್ಲ ಜೀವನದ ಅವಿಭಾಜ್ಯ ಅಂಗಗಳಾಗಿಯೂ ಇತ್ತು.
ಆರೋಗ್ಯವಂತನ ಆರೋಗ್ಯವನ್ನು ಕಾಪಾಡಿ ಕೊಂಡು ಹೋಗುವದು ಹಾಗೂ ರೋಗ ಬಂದಾಗ ಅದನ್ನು ಶಮನಗೊಳಿಸುವದು ಎಂದರ್ಥ.
ಆದರೆ ಇಂದಿನ ದಿನಗಳಲ್ಲಿ ಎಲ್ಲರ ಮನೋಭಿಲಾಷೆಗಳು ಶೀಘ್ರಹಣ ಮಾಡುವದು, ಹೆಚ್ಚು ಹಣ ಮಾಡುವದು ಇತ್ಯಾದಿ ಕ್ಷುಲ್ಲಕ ಆಮಿಷಗಳಿಗೆ ಬಿದ್ದು ಆರೋಗ್ಯದ ಪರಿವೆ ಇಲ್ಲದೆ ನಿತ್ಯ ನರಕ ಅನುಭವಿಸುತ್ತಾರೆ.ಅಷ್ಟೇ ಅಲ್ಲದೆ ಬೇ ಗ ಗುಣವಾಗಬೇಕು,ಯಾರಿಗೂ ರಜೆ ಇಲ್ಲ,ಮತ್ತೆ ಮಾರನೆ ದಿನ ಎಂದಿನಂತೆ ಕೆಲಸಗಳಿಗೆ ಹಾಜರಾಗಬೇಕೆಂಬ ಅನಿ ವಾರ್ಯತೆಯೂ ಇರುವದರಿಂದ ತಮ್ಮ ದೇಹದ ಮಾತನ್ನು ಆಲಿಸುವ ಸಹನೆ,ವೇಳೆ ಯಾರಲ್ಲಿಯೂ ಇಲ್ಲ.ಆತುರದ ಮನಸ್ಸಿನಲ್ಲಿ ಯಾವ ಔಷಧಿ ಸೂಕ್ತ ಅಂತ ಯೋಚಿಸದೇ, ಆದರ ಅಡ್ಡಪರಿಣಾಮಗಳನ್ನು ತಿಳಿಯದೇ ಸಧ್ಯಕ್ಕೆ ಆರಾ ಮ ಆದರೆ ಆಯಿತು ಅನ್ನುವ ಮನೋಭಾವದಲ್ಲಿ ನಾವೆಲ್ಲ ಇದ್ದೆವೆ.