ಜನಮನ

ಮನೆ ಮುಂದೆ ಆಟವಾಡುತ್ತಿದ್ದಾಗ ಸಂಪ್‌ಗೆ ಆಯತಪ್ಪಿ ಮಗು ಬಿದ್ದು ಸಾವು 

Views: 0

ಬೆಂಗಳೂರು: ಆಟ ಆಡುತ್ತಿದ್ದ ವೇಳೆ ಸಂಪ್​ಗೆ ಮಗು ಬಿದ್ದು ಸಾವನ್ನಪ್ಪಿರೋ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಯಿದಾ (5) ಮೃತ ಮಗು.

ಮೃತ ಆಯಿದಾ ಮನೆ ಮುಂದೆ ಆಟವಾಡುತ್ತಿತ್ತು. ನೀರು ಸಂಪ್ ಕ್ಯಾಪ್ ಓಪನ್ ಮಾಡಿ ಮಗುವಿನ ತಾಯಿ ಮನೆ ಒಳಗಡೆ ಹೋಗಿದ್ದಾರೆ. ಈ ವೇಳೆ ಮಗು ಆಟವಾಡಲು ಹೋಗಿ ಆಯತಪ್ಪಿ ಸಂಪ್​​ನಲ್ಲಿ ಬಿದ್ದಿದೆ. ತುಂಬಾ ಸಮಯದ ಬಳಿಕ ಮಗು ಕಾಣುತ್ತಿಲ್ಲ ಎಂದು ತಾಯಿ ಅಲ್ಲಿ ಇಲ್ಲಿ ಹುಡುಕಾಡಿದ್ದಾರೆ. ಬಳಿಕ ಸಂಪ್​​ನಲ್ಲಿ ಬಗ್ಗಿ ನೋಡಿದಾಗ ಮಗುವಿನ ಶವ ಕಂಡು ಅಚ್ಚರಿಯಲ್ಲಿ ತಾಯಿ ಕೂಗಾಡಿದ್ದಾರೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

Related Articles

Back to top button
error: Content is protected !!