ಜನಮನ

ಹೆಂಡತಿ ಸಾವಿನ ನೋವಲ್ಲೇ.. ಸ್ಮಶಾನದ ಬಳಿ ಇರುವ ಮರಕ್ಕೆ ನೇಣು ಹಾಕಿಕೊಂಡ ಪತಿ

Views: 31

ಚಿಕ್ಕಬಳ್ಳಾಪುರ: ಹೆಂಡತಿ ಸಾವಿನ ನೋವಿನಲ್ಲಿ ಗಂಡ ಆತ್ಮಹತ್ಯೆಗೆ ಶರಣಾದ‌ ಘಟನೆ ಬಾಗೇಪಲ್ಲಿ ಪಟ್ಟಣದ ತೀಮಾಕಹಳ್ಳಿ ಬಳಿ ಸ್ಮಶಾನದಲ್ಲಿ ಬೆಳಕಿಗೆ ಬಂದಿದೆ. ಪತ್ನಿಯ ಸಮಾಧಿಯ ಬಳಿಯೇ ನೇಣು ಬಿಗಿದುಕೊಂಡು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ನಡೆದ ಘಟನೆ ಇದಾಗಿದ್ದು, ಗುರುಮೂರ್ತಿ(38) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಮದು ಗುರುತಿಸಲಾಗಿದೆ.

ಪತ್ನಿ ಮೌನಿಕಾಳ ಸಮಾಧಿಗೆ ಪೂಜೆ ‌ಮಾಡಿ ನಂತರ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿ ಮೌನಿಕಾ ಸಮಾಧಿ ಬಳಿ ಇರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾನೆ. ಸ್ಥಳಕ್ಕೆ ಬಾಗೇಪಲ್ಲಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button
error: Content is protected !!