ಜನಮನ

ದಾವೂದ್​ ಇಬ್ರಾಹಿಂ ಸಾವನ್ನಪ್ಪಿದ್ದಾನೆ, ಭೂಗತ ಪಾತಕಿ ಸಾವಿನ ಬಗ್ಗೆ ವೈರಲ್​ ಆಗುತ್ತಿವೆ ಟ್ವೀಟ್​!?

Views: 3

ಮೋಸ್ಟ್​ ವಾಂಟೆಡ್​​ ಭೂಗತ ಪಾತಕಿ ದಾವೂದ್​ ಇಬ್ರಾಹಿಂನನ್ನು ವಿಷ ಹಾಕಿ ಕೊಲ್ಲಲಾಗಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಆದರೀಗ ಈ ಭೂಗತ ಪಾತಿ ಸಾವನ್ನಪ್ಪಿದ್ದಾನೆ ಎಂಬ ಎಕ್ಸ್​ (ಟ್ವೀಟ್​) ವೈರಲ್​ ಆಗಿದೆ.

ಪೊಲಿಟಿಕಲ್​ ಮಸ್ತಿ ಎಂಬ ಟ್ವಿಟ್ಟರ್​ ಖಾತೆಯು ಟ್ವೀಟ್​ ಮಾಡಿದ್ದು, ಅದರಲ್ಲಿ ಪಾಕ್​ ಸರ್ಕಾರ- ಕರಾಚಿ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಾವೂದ್​ ಇಬ್ರಾಹಿಂ ಸಾವನ್ನಪ್ಪಿದ್ದಾನೆ. ಈ ಟ್ವೀಟ್​ ಭಾರೀ ವೈರಲ್​ ಆಗಿದೆ.

ಇದಲ್ಲದೆ, ಮತ್ತೊಂದು ಟ್ವೀಟ್​ ವೈರಲ್​ ಆಗಿದೆ. ಡಾಕ್ಟರ್​. ಸೈಯದ್​​ ರಿಜ್ವಾನ್​ ಅಹ್ಮದ್​ ಎಂಬ ಟ್ವಿಟ್ಟಿಗ ಕೂಡ ಅನ್ವರ್​ ಉಲ್​ ಹಕ್​ ಕಾಕರ್​ ಎಂಬ ಟ್ವಿಟ್ವಿಗ ಬರೆದ ಟ್ವೀಟ್​ ಅನ್ನು ರಿಪೋಸ್ಟ್​ ಮಾಡಿದ್ದಾರೆ.

ದಾವೂದ್ ಇಬ್ರಾಹಿಂ ಅಪರಿಚಿತರಿಂದ ವಿಷ ಸೇವಿಸಿ ನಿಧನರಾದರು. ಅವರು ಕರಾಚಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅಲ್ಲಾಹು ಅವರಿಗೆ ಜನ್ನತ್ ನಲ್ಲಿ ಅತ್ಯುನ್ನತ ಸ್ಥಾನವನ್ನು ನೀಡಲಿ ಎಂದು ಬರೆದುಕೊಂಡಿದ್ದಾರೆ.

ಸಹೋದರಿ ಮಗನಿಂದ ಹೊರಬಿತ್ತು ಸತ್ಯ

2ನೇ ಮದುವೆಯಾದ ಬಳಿಕ ದಾವೂದ್​ ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿದ್ದು, ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ದಾವೂದ್​ ಸಹೋದರಿ ಮಗನ ಆತನ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡ ಕಾರಣ ಈ ಸಂಗತಿ ಬೆಳಕಿಗೆ ಬಂದಿದೆ.

ಪಾಕ್​ನಲ್ಲಿ ಇಂಟರ್​ನೆಟ್​​ ಸ್ಥಗಿತ

ಸದ್ಯ ಪಾಕಿಸ್ತಾನದಲ್ಲಿ ದಾವೂದ್​ ಸಾವನ್ನಪ್ಪಿರುವ ಸುದ್ದಿಯೊಂದು ಹರಿದಾಡುವುದರ ಜೊತೆಗೆ ಇಂಟರ್​ನೆಟ್​ ಸ್ಥಗಿತಗೊಂಡಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಆದರೆ ಡಿಸೆಂಬರ್​ 17ರಿಂದ ಪಾಕ್​ನಲ್ಲಿ ಇಂಟರ್​ನೆಟ್​ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳಲಾಗುತ್ತದೆ.

Related Articles

Back to top button
error: Content is protected !!