ಜನಮನ

ಅಪಾರ್ಟ್ಮೆಂಟ್ ನಲ್ಲಿ ಮಗುವಿನ ಮೇಲೆಯೇ ಕಾರು ಹತ್ತಿಸಿದ ಚಾಲಕ, ದುರಂತದ ದೃಶ್ಯ ಸಿಸಿ ಕ್ಯಾಮೆರಾ ದಿಲ್ಲಿ ಸೆರೆ 

Views: 0

ಬೆಂಗಳೂರು: ಕಾರು ಚಾಲಕನೋರ್ವ ಅಪಾರ್ಟ್ಮೆಂಟ್ ನಿಂದ ಕಾರನ್ನ ಹೊರತೆಗೆಯುವ ವೇಳೆ ಹೆಣ್ಣು ಮಗುವಿನ ಮೇಲೆ ಕಾರು ಹತ್ತಿಸಿದ ಘಟನೆ ಬೆಳ್ಳಂದೂರು ವ್ಯಾಪ್ತಿಯ ಕಸವನಹಳ್ಳಿ ಬಳಿಯ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ. ಈ ಭಯಾನಕ ದೃಶ್ಯ ಹತ್ತಿರದ ಕಟ್ಟಡದ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಗು  ಸಾವನ್ನಪ್ಪಿದ್ದಾಳೆ.

ಅಪಾರ್ಟ್ಮೆಂಟ್ ಸೆಕ್ಯೂರಿಟಿ ಗಾರ್ಡ್ ನ ಒಂದೂವರೆ ವರ್ಷದ ಹೆಣ್ಣು ಮಗು ಅರ್ಬೀನನ ಮೇಲೆ ಚಾಲಕ ಕಾರು ಹತ್ತಿಸಿದ್ದಾನೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆದರೆ ಮಗು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.

ಕಾರು ಬೆನ್ನ ಮೇಲೆ ಹತ್ತಿಸಿದಾಗ ಮೇಲೆ ಏಳಲು ಸಾಧ್ಯವಾಗದೆ ಮಗು ನೋವಿನಿಂದ ನರಳಾಡುತ್ತಿತ್ತು. ಈ ವೇಳೆ ಮಗುವನ್ನು ಪಾಲಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೋಷಕರಿಗೆ ಘಟನೆ ಬಗ್ಗೆ ಅರಿವಿಗೆ ಬಾರದೆ ಕಟ್ಟಡ ಮೇಲಿಂದ ಬಿದ್ದಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಮಗುವಿನ ದೇಹದಲ್ಲಿ ಆಂತರಿಕ ರಕ್ತಸ್ರಾವವಾಗಿರುವುದು ತಿಳಿದುಬಂದ ಮೇಲೆ ಪೊಲೀಸರು ಸಿಸಿಟಿವಿ ಪರಿಶೀಲನೆ ಮಾಡಿದ್ದಾರೆ. ಆಗ ಅಪಘಾತದ ಭಯನಕ ದೃಶ್ಯ ಸಿಕ್ಕಿದೆ.

ಸದ್ಯ ಕೃತ್ಯದ ಸಂಬಂಧ ಬೆಳ್ಳಂದೂರು ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಆದರೆ ಅಪಘಾತ ಪ್ರಕರಣವಾದ್ದರಿಂದ ಪ್ರಕರಣ ಬೆಳ್ಳಂದೂರು ಸಂಚಾರಿ ಠಾಣೆಗೆ ವರ್ಗಾಯಿಸಲಾಗಿದೆ.

ಮಗುವಿನ ಮೇಲೆ ಕಾರು ಹತ್ತಿಸಿರುವ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

 

Related Articles

Back to top button
error: Content is protected !!