ಪ್ರವಾಸೋದ್ಯಮ

ಚಿಕ್ಕಮಗಳೂರು: ಡಿ.17 ರಿಂದ 26 ಪ್ರವಾಸಿಗರಿಗೆ ನಿರ್ಬಂಧ; ರಜೆಗೆ ಸುತ್ತಾಡುವ ಪ್ರವಾಸಿಗರಿಗೆ ಇಲ್ಲಿದೆ ಮಾಹಿತಿ

Views: 2

ಚಿಕ್ಕಮಗಳೂರು ಜಿಲ್ಲಾಡಳಿತ ಡಿಸೆಂಬರ್ 22 ರಿಂದ 26ರವರೆಗೆ ಚಂದ್ರದ್ರೋಣ ಪರ್ವತಗಳ ಸಾಲಿನ ಪ್ರಮುಖ ತಾಣಗಳಿಗೆ ಪ್ರವಾಸಿಗರನ್ನು ನಿಷೇಧಿಸಿದೆ.

ಡಿ.17 ರಿಂದ 26 ರವರೆಗೆ ಚಿಕ್ಕಮಗಳೂರಿನಲ್ಲಿ ನಡೆಯುವ ದತ್ತ ಜಯಂತಿ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ದತ್ತಪೀಠ, ಮುಳ್ಳಯ್ಯನಗಿರಿ, ಗಾಳಿಕೆರೆ, ಮಾಣಿಕ್ಯದಾರ ಸೀತಾಳ್ಳಯ್ಯನಗಿರಿ ಸೇರಿದಂತೆ ಹಲವು ತಾಣಗಳಿಗೆ ಜಿಲ್ಲಾಡಳಿತ ಪ್ರವಾಸಿಗರನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ.

ಡಿ.22ರಿಂದ 26 ರ ವರೆಗೆ ನಗರದಾದ್ಯಂತ ಶೋಭಾ ಯಾತ್ರೆ, ದತ್ತ ಪೀಠದಲ್ಲಿ ಸಾವಿರಾರು ಮಾಲಾಧಾರಿಗಳು ಆಗಮಿಸುವ ಹಿನ್ನೆಲೆ ಜಿಲ್ಲಾಡಳಿತ ಆರು ದಿನಗಳ ಕಾಲ ಪ್ರವಾಸಿಗರನ್ನು ಬ್ಯಾನ್ ಮಾಡಿದೆ.

Related Articles

Back to top button