ಜನಮನ

ಸ್ನೇಹಿತನ ಜೀವ ಉಳಿಸಲು ರಕ್ತದಾನ ಮಾಡಿದ ಶ್ವಾನ; ಮಾನವೀಯತೆ ಮೆಚ್ಚುಗೆಗೆ ಪಾತ್ರವಾದ ಸಾಕು ನಾಯಿ!

Views: 46

ಮನುಷ್ಯ ತುರ್ತು ಸಂದರ್ಭದಲ್ಲಿ ರಕ್ತ ನೀಡಿ ಮತ್ತೊಬ್ಬನಿಗೆ ಜೀವದಾನ ನೀಡಿರುವ ಸಂಗತಿಯನ್ನು ಕೇಳಿರಬಹುದು. ಇಂತಹ ಹಲವು ಘಟನೆಗಳು ದಿನನಿತ್ಯ ನಡೆಯುತ್ತಲೇ ಇರುತ್ತವೆ ಮತ್ತು ಬೆಳಕಿಗೆ ಬರುತ್ತಲೇ ಇರುತ್ತವೆ. ಆದರೆ ಶ್ವಾನವೊಂದು ರಕ್ತದಾನ ಮಾಡಿದ ಸಂಗತಿ ಬಗ್ಗೆ ಕೇಳಿದ್ದೀರಾ..ಇಲ್ಲಿದೆ ಮಾಹಿತಿ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿ ಆಲೂರು ಗ್ರಾಮದಲ್ಲಿ ಶ್ವಾನವೊಂದು, ಮತ್ತೊಂದು ಶ್ವಾನಕ್ಕೆ ರಕ್ತದಾನ ಮಾಡಿ ಮಾನವೀಯತೆ ಮೆರೆದಿದೆ. ಬಮ್ಮನಹಳ್ಳಿ ಗ್ರಾಮದ ರಂಜಿತ್ ಎಂಬುವರಿಗೆ ಸೇರಿದ ಸಿರಿ ಎಂಬ ಹೆಸರಿನ ಶ್ವಾನ ಅನಾರೋಗ್ಯದಿಂದ ಬಳಲುತ್ತಿದ್ದ ಶ್ವಾನಕ್ಕೆ ರಕ್ತದಾನ ಮಾಡಿದೆ.

ಹಾನಗಲ್ ತಾಲೂಕಿನ ಹುಲ್ಲತ್ತಿ ಗ್ರಾಮದ ನಿವಾಸಿ ನಾಗರಾಜ್ ಗೊಲ್ಲರ ಎಂಬುವರ ಶ್ವಾನವೊಂದು ಅಕ್ಯೂಟ್ ಲೆಪ್ಟೊಸ್ಪೈರೋಸಿಸ್ ರೋಗದಿಂದ ಬಳಲುತ್ತಿತ್ತು. ಈ ಶ್ವಾನಕ್ಕೆ ರಕ್ತದಾನ ಮಾಡಿದ ಸಿರಿ ಎಂಬ ಸಾಕು ನಾಯಿ ಎಲ್ಲರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

Related Articles

Back to top button
error: Content is protected !!