ಜನಮನ

ಬ್ರಹ್ಮಾವರ: ಬಸ್‌ನಲ್ಲಿ ಪ್ರಯಾಣಿಸುವಾಗ ಚಿನ್ನದ ಸರ ಕಳವು 

Views: 78

ಬ್ರಹ್ಮಾವರ: ಬಸ್‌ನಲ್ಲಿ ಪ್ರಯಾಣಿಸುವಾಗ ಚಿನ್ನದ ಸರ ಕಳವಾದ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.

ಕುಂದಾಪುರದ ಶಕುಂತಳಾ ಅವರು ಗುರುವಾರ ಬ್ರಹ್ಮಾವರದಲ್ಲಿ ನಡೆಯುವ ಮದುವೆಗೆ ಬಸ್‌ನಲ್ಲಿ ಆಗಮಿಸಿದ್ದರು.

ಬಸ್‌ಸ್ಟ್ಯಾಂಡ್ ದಾಟಿದಾಗ ಎದ್ದು ನಿಂತು ಬಾಗಿಲ ಬಳಿ ಬಂದಿದ್ದರು. ಈ ಸಂದರ್ಭ ಬಹಳಷ್ಟು ಮಂದಿ ಮಹಿಳೆಯರು ಇದ್ದು, ಇವರ ಹಿಂದೆ ಮತ್ತು ಮುಂದೆ ಈರ್ವರು ಅಪರಿಚಿತ ಮಹಿಳೆಯರಿದ್ದರು. ಎಸ್‌.ಎಂ.ಎಸ್‌. ಬಸ್‌ಸ್ಟ್ಯಾಂಡ್ ನ‌ಲ್ಲಿ ಇಳಿದು ಸಭಾಂಗಣಕ್ಕೆ ತೆರಳುವಾಗ ಧರಿಸಿದ್ದ 35 ಗ್ರಾಂನ ಗೋಧಿಮಣಿಯ ಚಿನ್ನದ ಸರ ಕಳವಾಗಿರುವುದು ಗಮನಕ್ಕೆ ಬಂದಿದೆ.

ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿದೆ ದಾಖಲಾಗಿದೆ.

Related Articles

Back to top button
error: Content is protected !!