ಸಾಮಾಜಿಕ

ಇಲ್ಲಿದೆ ವರರನ್ನು ಮಾರುವ ಮಾರುಕಟ್ಟೆ,50 ಸಾವಿರದಿಂದ 3ಲಕ್ಷದ ವರೆಗೆ  ಖರೀದಿಸಬಹುದಂತೆ ವರನನ್ನು ! 

ವರ್ಷದಲ್ಲಿ ಒಂಬತ್ತು ದಿನಗಳ ಕಾಲ ಈ ಮಾರುಕಟ್ಟೆ ನಡೆಯುತ್ತದೆ. ಈ ಸಮಯದಲ್ಲಿ, ಅನೇಕ ಅವಿವಾಹಿತ ಹುಡುಗರು ಇಲ್ಲಿಗೆ ಬರುತ್ತಾರೆ. ಯಾವುದಾದರೂ ಹುಡುಗಿ ತಮ್ಮನ್ನು ಇಷ್ಟಪಡುತ್ತಾರೆ, ಮದುವೆಯಾಗುತ್ತಾರೆ ಎನ್ನುವ ಉದ್ದೇಶದಿಂದಲೇ ಹುಡುಗರು ಈ ಮಾರುಕಟ್ಟೆಗೆ ಬರುತ್ತಾರೆ.

Views: 0

ಬಿಹಾರ : ಜಗತ್ತಿನಲ್ಲಿ ಹಲವು ರೀತಿಯ ಮಾರುಕಟ್ಟೆಗಳಿವೆ. ಕೆಲವೆಡೆ ತರಕಾರಿಗಳು, ಕೆಲವೆಡೆ ಹಣ್ಣುಗಳು ಮತ್ತು ಕೆಲವೆಡೆ ಹಳೆಯ ಸಾಮಾನುಗಳನ್ನು ಮಾರಾಟ ಮಾಡಲಾಗುತ್ತದೆ. ಅನೇಕ ಮಾರಾಟಗಾರರು ಮಾರಾಟಗಾರರು ಒಂದೇ ರೀತಿಯ ಸರಕುಗಳನ್ನು ಮಾರಾಟ ಮಾಡುತ್ತಾರೆ. ಈ ಮಾರುಕಟ್ಟೆಗೆ ಭೇಟಿ ನೀಡುವವರು ಮಾರಟಕ್ಕೆ ಇಟ್ಟಿರುವ ವಸ್ತುಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರವೇ ಖರೀದಿಸುತ್ತಾರೆ.

ಕೆಲವು ನಿರ್ದಿಷ್ಟ ಮಾರುಕಟ್ಟೆಗಳಲ್ಲಿ ಕಡಿಮೆ ಬೆಲೆಯಲ್ಲಿ ಸರಕುಗಳನ್ನು ಮಾರಾಟ ಮಾಡಲಾಗುತ್ತದೆ. ಇತ್ತೀಚೆಗೆ, ಬಲ್ಗೇರಿಯಾದಲ್ಲಿ ವಧು ಮಾರುಕಟ್ಟೆ ಎನ್ನುವ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗಿತ್ತು. ವಧುಗಳನ್ನು ಖರೀದಿಸಲು ಜನರು ಈ ಮಾರುಕಟ್ಟೆಗೆ ಬರುತ್ತಾರೆ ಎನ್ನಲಾಗಿತು. ಆದರೆ ವರರನ್ನು ಮಾರಾಟ ಮಾಡುವ ಮಾರುಕಟ್ಟೆಯೂ ಇದೆ.

ಆದರೆ,ಈ ಮಾರುಕಟ್ಟೆಯಲ್ಲಿ ಅರ್ಹತೆಯ ಆಧಾರದ ಮೇಲೆ ವರಗಳನ್ನು ಮಾರಾಟ ಮಾಡಲಾಗುತ್ತದೆ. ಹುಡುಗ ಎಷ್ಟು ವಿದ್ಯಾವಂತ, ಎಲ್ಲಿ ಕೆಲಸ ಮಾಡುತ್ತಾನೆ? ಕುಟುಂಬ ಹಿನ್ನೆಲೆ ಏನು ಎಲ್ಲವನ್ನೂ ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ವರನನ್ನು ಕುಟುಂಬದ ಪರಂಪರೆಯ ಆಧಾರದ ಮೇಲೆ ಮೌಲ್ಯೀಕರಿಸಲಾಗುತ್ತದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ಮಾರುಕಟ್ಟೆ ಇರುವುದು ನಮ್ಮದೇ ದೇಶದಲ್ಲಿ.

ಪ್ರತಿ ವರ್ಷ, ಬಿಹಾರದ ಮಧುಬನಿಯಲ್ಲಿ ವರ ಮಾರುಕಟ್ಟೆಯನ್ನು ಆಯೋಜಿಸಲಾಗುತ್ತದೆ. ಇಲ್ಲಿ ವರನ ಮೇಲೆ ಬಿಡ್ ಮಾಡಲಾಗುತ್ತದೆ. ವರ್ಷದಲ್ಲಿ ಒಂಬತ್ತು ದಿನಗಳ ಕಾಲ ಈ ಮಾರುಕಟ್ಟೆ ನಡೆಯುತ್ತದೆ. ಈ ಸಮಯದಲ್ಲಿ, ಅನೇಕ ಅವಿವಾಹಿತ ಹುಡುಗರು ಇಲ್ಲಿಗೆ ಬರುತ್ತಾರೆ. ಯಾವುದಾದರೂ ಹುಡುಗಿ ತಮ್ಮನ್ನು ಇಷ್ಟಪಡುತ್ತಾರೆ, ಮದುವೆಯಾಗುತ್ತಾರೆ ಎನ್ನುವ ಉದ್ದೇಶದಿಂದಲೇ ಹುಡುಗರು ಈ ಮಾರುಕಟ್ಟೆಗೆ ಬರುತ್ತಾರೆ. ಧೋತಿ-ಕುರ್ತಾ ಅಥವಾ ಜೀನ್ಸ್-ಶರ್ಟ್ ಧರಿಸಿ ಈ ಮಾರುಕಟ್ಟೆಗೆ ಬರುತ್ತಾರೆ.

ವರದಕ್ಷಿಣೆ ಪದ್ಧತಿಯನ್ನು ಕೊನೆಗಾಣಿಸುವ ಉದ್ದೇಶದಿಂದ ಈ ಮಾರುಕಟ್ಟೆ ಆಯೋಜಿಸಲಾಗಿತ್ತು. ಆದರೆ ಈ ಮಾರುಕಟ್ಟೆಗೆ ಬರುವ ಕೆಲವು ಹುಡುಗರು ಕೂಡಾ ವರದಕ್ಷಿಣೆಗೆ ಬೇಡಿಕೆಯಿಡುತ್ತಾರೆ ಎನ್ನಲಾಗಿದೆ.

ಇಲ್ಲಿ ಹುಡುಗರ ವಿದ್ಯಾರ್ಹತೆಗೆ ಅನುಗುಣವಾಗಿ ಅವರ ವಯಸ್ಸು 35 ವರ್ಷಕ್ಕಿಂತ ಹೆಚ್ಚಿದ್ದರೆ ಅವರ ಬೆಲೆ ಐವತ್ತು ಸಾವಿರ ರೂಪಾಯಿಗಳಿಗೆ ಆರಂಭವಾಗುತ್ತದೆ. ವಯಸ್ಸು ಕಡಿಮೆಯಿದ್ದರೆ ಬೆಲೆ ಎರಡರಿಂದ ಮೂರು ಲಕ್ಷದವರೆಗೆ ಏರುತ್ತದೆ. ಮಾರುಕಟ್ಟೆಯಲ್ಲಿ ಈ ಸಂಬಂಧಗಳನ್ನು ಸರಿಪಡಿಸಲು ಸಹಾಯ ಮಾಡುವ ಪಂಡಿತರೂ ಸಿಗುತ್ತಾರಂತೆ.

Related Articles

Back to top button
error: Content is protected !!