ಜ್ಯುವೆಲ್ಲರಿ ಶಾಪ್ಗೆ ಗ್ರಾಹಕರ ಸೋಗಿನಲ್ಲಿ ಎಂಟ್ರಿ ಕೊಟ್ಟ ತಾಯಿ, ಮಗಳು.. 32 ಗ್ರಾಂ ಚಿನ್ನದ ಸರ ಕದ್ದು ಪರಾರಿ!

Views: 0
ತುಮಕೂರು: ಗಾಯನದಲ್ಲಿ, ನಟನೆಯಲ್ಲಿ, ಡ್ಯಾನ್ಸ್ನಲ್ಲಿ ಇನ್ನಿತರ ಕಾರ್ಯ ವೈಖರಿಗಳಲ್ಲಿ ತಾಯಿ-ಮಗಳು ಸೇರಿದರೆ ಏನ್ ಬೇಕಾದ್ರು ಸಾಧಿಸುತ್ತಾರೆ. ಈ ಬಗ್ಗೆ ತಾಯಿ ಮಗಳು ಪ್ರೂವ್ ಮಾಡಿದ್ದಾರೆ ಸಹ ತೋರಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ತಾಯಿ-ಮಗಳು ಗ್ರಾಹಕರ ಸೋಗಿನಲ್ಲಿ ಬಂದು 32 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾಗಿದ್ದಾರೆ.
ಹೌದು, ಗ್ರಾಹಕರಂತೆ ಬಂದ ತಾಯಿ-ಮಗಳು 32 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾಗಿರೋ ಘಟನೆ ತುಮಕೂರಿನಲ್ಲಿ ನಡೆದಿದೆ. ನಗರದ ಗುಂಚಿ ಸರ್ಕಲ್ ಬಳಿಯಿರುವ ಎಸ್.ಎನ್.ಡಿ ಜ್ಯುವೆಲ್ಲರಿ ಶಾಪ್ಗೆ ಗ್ರಾಹಕರ ಸೋಗಿನಲ್ಲಿ ಎಂಟ್ರಿ ಕೊಟ್ಟ ಯುವತಿ ಹಾಗೂ ಮಹಿಳೆ, ಚಿನ್ನದ ಸರ ಖರೀದಿ ಮಾಡುವುದಾಗಿ ಸರಗಳನ್ನು ಎತ್ತಿ ಎತ್ತಿ ನೋಡಿದ್ದಾರೆ. ಈ ವೇಳೆ, ಯುವತಿ ಮಾತಿನ ಮೂಲಕ ಮಾಲೀಕನ ಗಮನವನ್ನು ಬೇರೆಡೆಗೆ ಸೆಳೆದ್ರೆ, ಅತ್ತ ಮಹಿಳೆ ಚಿನ್ನದ ಸರವನ್ನು ಕದ್ದಿದ್ದಾಳೆ.

ಇನ್ನು, ಈ ಇಬ್ಬರು ಚಿನ್ನದ ಸರ ಕಳ್ಳತನ ಮಾಡುತ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






