ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಲಷ್ಕರ್-ಎ-ತೋಯ್ಬಾದ ಅದ್ನಾನ್ ಅಹ್ಮದ್ ಪಾಕಿಸ್ತಾನದಲ್ಲಿ ಗುಂಡಿಟ್ಟು ಫಿನಿಶ್!

Views: 0
ಭಾರತಕ್ಕೆ ಬೇಕಾಗಿದ್ದ ಮತ್ತೊಬ್ಬ ಮೋಸ್ಟ್ ವಾಂಟೆಡ್ ಭಯೋತ್ಪಾದಕನನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ. ಲಷ್ಕರ್-ಎ-ತೋಯ್ಬಾದ ಪ್ರಮುಖ ಭಯೋತ್ಪಾದಕ ಅದ್ನಾನ್ ಅಹ್ಮದ್ ಅಲಿಯಾಸ್ ಹಾಂಜಾಲಾ ಅದ್ನಾನ್ನನ್ನು ಕರಾಚಿಯಲ್ಲಿ ಅಪರಿಚಿತರು ಗುಂಡಿಟ್ಟು ಹತ್ಯೆಗೈದಿದ್ದಾರೆ.
2016ರಲ್ಲಿ ಪಾಂಪೋರ್ನಲ್ಲಿ ಸಿಆರ್ಪಿಸಿ ಬೆಂಗಾವಲು ಪಡೆಯ ಮೇಲೆ ನಡೆದ ದಾಳಿಯ ಮಾಸ್ಟರ್ ಮೈಂಡ್ ಈ ಹಂಜಾಲಾ ಅದ್ನಾನ್. ದಾಳಿಯಲ್ಲಿ 8 ಯೋಧರು ಹುತಾತ್ಮರಾಗಿ 22ಕ್ಕೂ ಹೆಚ್ಚು ಸೇನಾ ಸಿಬ್ಬಂದಿ ಗಾಯಗೊಂಡಿದ್ದರು. 2015ರಲ್ಲಿ ಉಧಂಪುರದಲ್ಲಿ ಬಿಎಫ್ಎಸ್ ಬೆಂಗಾವಲು ವಾಹನದ ಮೇಲೂ ದಾಳಿ ಮಾಡಿದ್ದ. ಹಾಂಜಾಲಾನ ಪೈಶಾಚಿಕ ಕೃತ್ಯದಿಂದ ಇಬ್ಬರು ಬಿಎಸ್ಎಫ್ ಯೋಧರು ಹುತಾತ್ಮರಾಗಿ, 13 ಸೈನಿಕರು ಗಾಯಗೊಂಡಿದ್ದರು. ಈ ದಾಳಿಯ ತನಿಖೆ ನಡೆಸಿದ್ದ ರಾಷ್ಟ್ರೀಯ ಭದ್ರತಾ ಸಂಸ್ಥೆ 2015, ಆಗಸ್ಟ್ 6 ರಂದು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿತ್ತು. ಜಾರ್ಜ್ಶೀಟ್ನಲ್ಲಿ ಹಾಂಜಾಲಾ ಪಾತ್ರ ಇರೋದನ್ನು ಖಚಿತ ಪಡಿಸಿತ್ತು.
ಜಮ್ಮು ಕಾಶ್ಮೀರದ ಶ್ರೀನಗರ ಮತ್ತು ಪುಲ್ವಾಮಾದಲ್ಲಿ ನಡೆದ ವಿವಿಧ ಆತ್ಮಾಹುತಿ ಬಾಂಬ್ ದಾಳಿಯಲ್ಲೂ ಈತನ ಪಾತ್ರ ಇರೋದು ಖಚಿತವಾಗಿತ್ತು. ಪಾಕ್ನಿಂದ ಉಗ್ರರನ್ನು ಭಾರತಕ್ಕೆ ನುಸುಳಿಸುತ್ತಿದ್ದ. ಲಷ್ಕರ್ ಉಗ್ರರು ಈತನನ್ನು ಸಂವಹನ ತಜ್ಞ ಎಂದು ಕರೆಯುತ್ತಿದ್ದರು.
ಡಿಸೆಂಬರ್ 2-3 ಮಧ್ಯರಾತ್ರಿ ಅಪರಿಚಿತರು ಹಾರಿಸಿದ ಗುಂಟೇಟಿಗೆ ಸಾವನ್ನಪ್ಪಿದ್ದಾನೆ. ಈತನ ದೇಹವನ್ನು ನಾಲ್ಕು ಗಂಡುಗಳು ಛೇದಿಸಿವೆ. ಮನೆಯ ಹೊರಗೆ ನಿಂತಿದ್ದ ವೇಳೆ ಫೈರಿಂಗ್ ಮಾಡಿದ್ದಾರೆ. ಗುಂಡೇಟು ತಿಂದ ಉಗ್ರ ಸ್ವಾಧೀನ ಕಳೆದುಕೊಂಡು ನೆಲಕ್ಕೆ ಬಿದ್ದಿದ್ದ. ಕೂಡಲೇ ಆತನನ್ನು ರಹಸ್ಯವಾಗಿ ಕರಾಚಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ನಿನ್ನೆ ಚಿಕಿತ್ಸೆ ಫಲಿಸದೇ ಉಗ್ರ ಸತ್ತಿದ್ದಾನೆ. ಈತ ತನ್ನ ಕಾರ್ಯಾಚರಣೆಯ ನೆಲೆಯನ್ನು ರಾವಲ್ಪಿಂಡಿಯಿಂದ ಕರಾಚಿಗೆ ಸ್ಥಳಾಂತರಿಸಿದ್ದ






