ಜನಮನ

ಶಿವಮೊಗ್ಗ ಲಾಡ್ಜ್‌ನಲ್ಲಿ ಅನೈತಿಕ ಚಟುವಟಿಕೆ ಜಾಲ, ವಿದ್ಯಾರ್ಥಿಗಳನ್ನು ಕಂಡು ಬೇಸತ್ತು ದೂರು ನೀಡಿದ ಸ್ಥಳೀಯರು: ಪೊಲೀಸರ ದಾಳಿ

Views: 0

ಶಿವಮೊಗ್ಗ: ಶಿವಮೊಗ್ಗ ನಗರದ ಲಾಡ್ಜ್ ವೊಂದರಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗಳಿಂದ ಸ್ಥಳೀಯ ನಾಗರಿಕರು ಇದೀಗ ಪೊಲೀಸರ ಮೊರೆ ಹೋಗಿ ದೂರು ನೀಡಿದ ಪರಿಣಾಮ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿ ವೇಳೆ ಲಾಡ್ಜ್ ನಲ್ಲಿ ಕಾಲೇಜು ವಿದ್ಯಾರ್ಥಿಗಳು ಕೂಡ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಶಿವಮೊಗ್ಗ ನಗರದ ಕೆ ಆರ್ ಪುರಂ ರಸ್ತೆಯಲ್ಲಿರುವ ಬ್ಲೂ ಕ್ರಿಸ್ಟಲ್ ಎಂಬ ಹೆಸರಿನ ಲಾಡ್ಜ್ ಇದಾಗಿದ್ದು, ಇಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವುದು ಸ್ಥಳೀಯ ನಾಗರಿಕರ ಮಾಹಿತಿಯಿಂದ ಪೊಲೀಸರಿಗೆ ವಿಷಯ ಗೊತ್ತಾಗಿತ್ತು. ಈ ಹಿನ್ನಲೆಯಲ್ಲಿ ಶಿವಮೊಗ್ಗ ಪೊಲೀಸರು ಏಕಾಏಕಿ ದಾಳಿ ನಡೆಸಿದ್ದು, ಈ ವೇಳೆ ಲಾಡ್ಜ್ ನ ಕೊಠಡಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ಪತ್ತೆಯಾಗಿದ್ದಾರೆ. ಅಲ್ಲದೇ, ಇನ್ನೂ ಅನೇಕ ಯುವಕ-ಯುವತಿಯರು ಈ ಲಾಡ್ಜ್ ಗೆ ಬಂದು ಹೋಗುತ್ತಿದ್ದರು. ಹೀಗಾಗಿ, ಇಲ್ಲಿನ ಅನೈತಿಕ ಚಟುವಟಿಕೆಗಳನ್ನ ಕಂಡು ಬೇಸತ್ತು ದೂರು ನೀಡಿದ್ದೇವೆ ಎಂದು ಸ್ಥಳೀಯರು ಹೇಳುತ್ತಾರೆ.

ಲಾಡ್ಜ್ ಗೆ ಬರುವ ಮತ್ತು ಹೋಗುವವರ ಬಗ್ಗೆ ವಿಡಿಯೋಗಳನ್ನು ತೆಗೆದು ಪೊಲೀಸರಿಗೆ ಸಾಕ್ಷಿಗಳನ್ನು ನೀಡಿದ್ದರು. ಇದಾದ ಬಳಿಕ ದಾಳಿ ನಡೆಸಿದ್ದು, ದಾಳಿ ವೇಳೆ ಲಾಡ್ಜ್ ನಲ್ಲಿ ವಿದ್ಯಾರ್ಥಿಗಳಾಗಿರುವ ಯುವಕ ಮತ್ತು ಯುವತಿ ಇರುವುದು ಪತ್ತೆಯಾಗಿದೆ. ಇನ್ನು, ಬಳಿಕ ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ವಿದ್ಯಾರ್ಥಿಗಳು ಪರಸ್ಪರ ಒಪ್ಪಿಗೆ ಮೇರೆಗೆಯೇ ಲಾಡ್ಜ್ ಗೆ ಬಂದಿದ್ದಾರೆ ಎಂಬ ಮಾಹಿತಿ ವಿಚಾರಣೆ ವೇಳೆ ತಿಳಿದು ಬಂದಿದೆ. ಈ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಲಾಡ್ಜ್ ನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಯಾವುದೇ ಕಾರಣಕ್ಕು ಲಾಡ್ಜ್ ಮತ್ತೆ ಪುನಾರಂಭ ಮಾಡದಂತೆ ಸ್ಥಳೀಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಾಡ್ಜ್ ತೆರೆಯದಂತೆ ರಹದಾರಿ ರದ್ದು ಮಾಡುವಂತೆಯೂ ಪೊಲಿಸರಿಗೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.

ಈ ಪ್ರದೇಶದಲ್ಲಿ ಜನರು ವಾಸಿಸುವ ಮನೆಗಳಿದ್ದು, ಇದರ ಮಧ್ಯದಲ್ಲಿಯೇ ಲಾಡ್ಜ್ ನಲ್ಲಿ ಅಕ್ರಮ ಚಟುವಟಿಕೆಗಳನ್ನ ನಡೆಸಲಾಗುತ್ತಿದೆ. ಇದರಿಂದ ಬೇರೆಯವರಿಗೂ ತೊಂದರೆಯಾಗುತ್ತದೆ.ಈ ಬಗ್ಗೆ ಪೊಲೀಸರು ಸೂಕ್ತ ಪರಿಶೀಲನೆ ನಡೆಸುವಂತೆ ಮನವಿ ಮಾಡಿಕೊಂಡಿದ್ದಾರೆ.

Related Articles

Back to top button
error: Content is protected !!