ಜನಮನ

ಪ್ರೀತಿಸಿ ಮದುವೆಯಾಗಿದ್ದ ಯುವತಿ ಸಾವು, ವರದಕ್ಷಿಣೆ ಕಿರುಕುಳ,ಸಾವಿನ ಸುತ್ತ ಹಲವು ಅನುಮಾನ

Views: 0

ಮಂಡ್ಯ: ಕೇವಲ 2 ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ಯುವತಿ ಒಬ್ಬಳು ಅನುಮಾನಸ್ಪಾದವಾಗಿ ನೇಣು ಬಿಗಿದು ಸಾವನ್ನಪ್ಪಿರುವ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅನುಷಾ (23) ಅನುಮಾನಸ್ಪಾದವಾಗಿ ಸಾವನ್ನಪ್ಪಿರುವ ಯುವತಿ. ಕೇವಲ 2 ತಿಂಗಳ ಹಿಂದಷ್ಟೇ ಪ್ರವೀಣ್​ ಎನ್ನುವ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದಳು. ಈ ಇಬ್ಬರು ಮಂಡ್ಯದ ಮಳ್ಳವಳ್ಳಿ ಮೂಲದವರಾಗಿದ್ದಾರೆ. ಆದ್ರೆ ಮದುವೆ ಆದ ಬಳಿಕ ಗಂಡನ ಮನೆಯವರು ವರದಕ್ಷಿಣೆಗಾಗಿ ಕಿರುಕುಳ ಕೊಡಲು ಪ್ರಾರಂಭಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ.

ಅತ್ತೆ ನಾಗಮ್ಮ ಮತ್ತು ಸೋದರ ಮಾವ ರಾಜೇಶ್​ ಸೇರಿ ವರದಕ್ಷಿಣೆ ತರುವಂತೆ ಕಿರುಕುಳ ಕೊಡುತ್ತಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. ಅಲ್ಲದೇ ಈ ಸಂಬಂಧ ಹಲ್ಲೆ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ವರದಕ್ಷಿಣೆ ಕಿರುಕುಳದಿಂದಲೇ ಬೇಸತ್ತು ಯುವತಿ ನೇಣಿಗೆ ಶರಣಾಗಿದ್ದಾಳೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

Related Articles

Back to top button
error: Content is protected !!