ತಳ್ಳೋ ಗಾಡಿಯಲ್ಲಿ ತರಕಾರಿ ಮಾರುವ ನೆಪದಲ್ಲಿ ಮಕ್ಕಳಿಲ್ಲದವರಿಗೆ ಹಸುಗೂಸು ಮಾರುತ್ತಿದ್ದ ಗ್ಯಾಂಗ್ ಪೊಲೀಸ್ ವಶಕ್ಕೆ

Views: 0
ಬೆಂಗಳೂರು:ಹಸುಗೂಸುಗಳ ಮಾರಾಟ ದಂಧೆ ನಗರದಲ್ಲಿ ಎಗ್ಗಿಲ್ಲದೇ ನೆಡೆಯುತ್ತಿದೆ ಎನ್ನುವ ವಿಚಾರ ಬಯಲಾಗಿದ್ದೇ ತಡ ರಾಜ್ಯದ ಜನರಲ್ಲಿ ಆತಂಕ ಮೂಡಿಸಿತ್ತು. ಇದೀಗ ಈ ದಂಧೆಯಲ್ಲಿ ಜೈಲು ಸೇರಿರುವ ಕಿಂಗ್ ಪಿನ್ ಒಬ್ಬಳ ಕರಾಳ ಮುಖದ ಅನಾವರಣವಾಗಿದೆ.
ಆರೋಪಿಗಳಾದ ಶರಣ್ಯ, ಹೇಮಲತಾ, ಕಣ್ಣನ್ ಸ್ವಾಮಿ, ಸುಹಾಸಿನಿ, ರಾಧಾ, ಮಹಾಲಕ್ಷ್ಮಿ, ಗೋಮತಿ ಹಸುಗೂಸನ್ನು ಮಾರಾಟ ಮಾಡುತ್ತಿದ್ದವರು ಸದ್ಯ ಜೈಲು ಸೇರಿದ್ದಾರೆ.
ಹಸುಗೂಸುಗಳ ಮಾರಾಟ ಜಾಲದಲ್ಲಿ ಭಾಗಿಯಾಗಿರುವ ತಮಿಳುನಾಡು ಮೂಲದ ಏಜೆಂಟ್ಸ್ ಆಗಿದ್ದಾರೆ. ಇದೀಗ ಇದೇ ಖತರ್ನಾಕ್ ಗ್ಯಾಂಗ್ನ ಕಿಂಗ್ ಪಿನ್ ಮಹಾಲಕ್ಷ್ಮಿಯ ಕರಾಳ ಮುಖ ಬಯಲಾಗಿದೆ.
ಸಿಸಿಬಿ ತನಿಖೆ ವೇಳೆ ಒಂದೊಂದೇ ಸ್ಫೋಟಕ ವಿಚಾರಗಳು ಬಯಲಾಗ್ತಾಯಿವೆ. ಹೌದು, ಈ ಗ್ಯಾಂಗ್ನ ಕಿಂಗ್ಪಿನ್ ಮಹಾಲಕ್ಷ್ಮಿ ಹಸುಗೂಸುಗಳ ಮಾರಾಟಕ್ಕೆ ಸಿನಿಮೀಯ ರೀತಿಯಲ್ಲಿ ಕಾಂಟ್ಯಾಕ್ಟ್ ಮಾಡ್ತಿದ್ಲು ಅನ್ನೋ ಮಾಹಿತಿ ಬಯಲಾಗಿದೆ. ಬಡವರಂತೆ ಬಟ್ಟೆ ಹಾಕ್ಕೊಂಡು, ತಳ್ಳೋ ಗಾಡಿಯಲ್ಲಿ ತರಕಾರಿ ಮಾರುತ್ತಾ ರಸ್ತೆಗಳನ್ನ ಸುತ್ತುತ್ತಿದ್ದ ಈಕೆ ತರಕಾರಿ ಮಾರುವ ನೆಪದಲ್ಲಿ ಮಕ್ಕಳಿಲ್ಲದೋರನ್ನು ಪರಿಚಯ ಮಾಡಿಕೊಳ್ತಿದ್ಳು. ನಂತರ ಸಲುಗೆ ಬೆಳಸಿಕೊಂಡು ಮಕ್ಕಳ ಸೇಲ್ಗೆ ಡೀಲ್ ಮಾಡ್ತಿದ್ಲು.
ಹೀಗೆ ಮಾತಿನ ಬಲೆಯಿಂದ ಮಕ್ಕಳಿಲ್ಲದ ನೀರನ್ನು ಬುಟ್ಟಿಗೆ ಬೀಳಿಸಿಕೊಳ್ತಿದ್ದವಳು ಡೀಲ್ ಮಾಡಿ ಲಕ್ಷ ಲಕ್ಷ ಸಂಪಾದಿಸುತ್ತಿದ್ಲು ಎನ್ನಲಾಗ್ತಿದೆ. ಅದೇನೇ ಇರಲಿ, ಜನರ ಎಮೋಷನ್ ಜೊತೆ ಆಟ ಆಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದ ಮಹಾಲಕ್ಷ್ಮಿ ಅಂಡ್ ಗ್ಯಾಂಗ್ ಸದ್ಯ ಜೈಲು ಸೇರಿದ್ದು, ಇನ್ನಾದ್ರು ಇಂತವರ ಗಾಳಕ್ಕೆ ಬೀಳೋ ಮುನ್ನ ಎಚ್ಚರದಿಂದ ಇರಬೇಕಿದೆ.






