ಜನಮನ

ಪೋಷಕರೇ ಮಕ್ಕಳನ್ನು ಎಲ್ಲಿಗಾದ್ರೂ ಕರ್ಕಂಡು ಹೋಗೋ ಮುನ್ನ ಎಚ್ಚರ!  3 ವರ್ಷದ ಪುಟ್ಟ ಬಾಲೆಯೊಬ್ಬಳ ಮೇಲೆ ಗ್ಲಾಸ್​ ಡೋರ್ ಬಿದ್ದು ಸಾವು

Views: 0

ಮಕ್ಕಳ ದೇವರು ಇದ್ದಂತೆ. ಇವರನ್ನು ಜವಾಬ್ದಾರಿಯಿಂದ ನೋಡಿಕೊಳ್ಳೋ ಹೊಣೆ ಪೋಷಕರದ್ದು. ಮಕ್ಕಳು ಬೇಕು ಎಂದು ಮಾಡಿಕೊಳ್ಳುವುದು ಎಷ್ಟು ಮುಖ್ಯವೋ, ಅಷ್ಟೇ ಜವಾಬ್ದಾರಿಯಿಂದ ಅವರನ್ನು ನೋಡಿಕೊಳ್ಳುವುದು ಇಂಪಾರ್ಟೆಂಟ್​​. ಸ್ವಲ್ಪ ಯಾಮಾರಿದ್ರೂ ಮಕ್ಕಳ ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಆಟ ಆಡುವಾಗ ದಿಢೀರ್​​ ಗಾಡಿಗೆ ಅಡ್ಡ ಹೋಗುವುದು, ಕಣ್ಣಿಗೆ ಕಾಣುವುದು ತಿನ್ನುವುದು, ಗುಂಡಿಗೆ ಆಯತಪ್ಪಿ ಬೀಳುವುದು ಹೀಗೆ ಹಲವು ಸಮಸ್ಯೆಗಳು. ಹೀಗಾಗಿ ಅವರನ್ನು ತುಂಬಾ ಎಚ್ಚರದಿಂದಲೇ ಕೇರ್​ ಮಾಡಬೇಕು.

ಹೌದು, ಇಷ್ಟು ಮಾತ್ರವಲ್ಲ ಮಕ್ಕಳನ್ನ ಯಾವುದೇ ಶಾಪ್​ಗೆ ಕರೆದುಕೊಂಡು ಹೋದ್ರೂ ಪೋಷಕರು ಜಾಗರೂಕರಾಗಿ ಇರಬೇಕು ಅನ್ನೋದಕ್ಕೆ ಇದೊಂದು ನಿದರ್ಶನ. 3 ವರ್ಷದ ಪುಟ್ಟ ಬಾಲೆಯೊಬ್ಬಳ ಮೇಲೆ ಗ್ಲಾಸ್​ ಡೋರ್ ಬಿದ್ದು ಮೃತಪಟ್ಟ ಘಟನೆ ಪಂಜಾಬ್​​ನ ಲೂದಿಯಾನದಲ್ಲಿ ನಡೆದಿದೆ.

ಗಾರ್ಮೆಂಟ್​​​ ಶೋರೂಮ್​​ ಬಾಗಿಲ ಬಳಿ ಬಂದ ಪುಟ್ಟ ಬಾಲಕಿ, ಗ್ಲಾಸ್​​ ಡೋರ್​ ಮೇಲೆ ತನ್ನ ಕೈಯಿಟ್ಟಿದ್ದಾಳೆ. ಈ ವೇಳೆ ಸಡನ್ ​ಆಗಿ ಗ್ಲಾಸ್​ ಡೋರ್​ ಮಗು ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದೆ. ಕೂಡಲೇ ಅಲ್ಲಿದ್ದವರು ಮಗುವನ್ನ ಆಸ್ಪತ್ರೆಗೆ ಕರೆದೊಯ್ದರೂ ಬದುಕುಳಿದಿಲ್ಲ.

Related Articles

Back to top button
error: Content is protected !!