ಜನಮನ

ಆನ್​ಲೈನ್​ ಡೇಟಿಂಗ್ ಆ್ಯಪ್:​ ಹೆಣ್ಣಿನ ಹಿಂದೆ ಹೋದ ಯುವಕನೋರ್ವ ಮಣ್ಣಾಗಿ ಹೋದ ಕಥೆ!

Views: 266

ಹೆಣ್ಣಿನ ಹಿಂದೆ ಹೋದ ಯುವಕನೋರ್ವ ಮಣ್ಣಾಗಿ ಹೋದ ಘಟನೆಯ ಸತ್ಯಾಂಶ ಬಹು ವರ್ಷಗಳ ಬಳಿಕ ಹೊರಬಿದ್ದಿದೆ. ಡೇಟಿಂಗ್​ ಆ್ಯಪ್​, ಪ್ರೀತಿ, ಪ್ರಣಯ ಎಂದು ಹೋದವನ ಕೊಲೆಗೆ ನಿಜವಾದ ಕಾರಣ ಏನೆಂಬುದು ಬೆಳಕಿಗೆ ಬಂದಿದೆ. 5 ವರ್ಷದ ಹಿಂದೆ ಕೊಂದು ಸೂಟ್​ಗೇಸ್​ನಲ್ಲಿಟ್ಟು ಬಿಸಾಕಿ ಹೋಗಿದ್ದ ಆರೋಪಿಗಳಿಗೆ ಕೋರ್ಟ್​ ಜೀವಾವಧಿ ಶಿಕ್ಷೆ ನೀಡಿದೆ. ಅಷ್ಟಕ್ಕೂ ಈ ಕೊಲೆಗೆ ಕಾರಣವೇನು ಗೊತ್ತಾ?

ಅಂದಹಾಗೆಯೇ ಇದು 2018ರಲ್ಲಿ ನಡೆದ ಘಟನೆ. ದುಶ್ಯಂತ್​ ಎಂಬ ದೆಹಲಿ ಮೂಲದ ವಿವಾಹಿತ ಆನ್​ಲೈನ್​ ಡೇಟಿಂಗ್ ಆ್ಯಪ್​ ಟಿಂಡರ್​ ​ಮೂಲಕ ಪ್ರೀಯಾ ಸೇಠ್ ಎಂಬಾಕೆಯನ್ನು ಪರಿಚಯ ಮಾಡಿಕೊಂಡಿದ್ದ. ಅಚ್ಚರಿಯ ಸಂಗತಿ ಎಂದರೆ ದುಶ್ಯಂತ್​ ನಕಲಿ ಖಾತೆ ತೆರೆದು ವಿವಾನ್​ ಕೊಹ್ಲಿ ಎಂಬ ಖಾತೆ ಮೂಲಕ ಪ್ರೀಯಾ ಸೇಠ್​ ಪರಿಚಯ ಮಾಡಿಕೊಂಡಿದ್ದಲ್ಲದೆ, ತಾನು ಶ್ರೀಮಂತ ಉದ್ಯಮಿ ಎಂದು ಹೇಳಿಕೊಂಡಿದ್ದ.

ಹೀಗೆ ಸುಳ್ಳು ಹೇಳಿ ನಂಬಿಸಿದ್ದ ಪ್ರೀಯಾ ಸೇಠ್​ ಬಳಿ ಚಾಟಿಂಗ್​, ಡೇಟಿಂಗ್​ ನಡೆಸಿದ್ದ ದುಶ್ಯಂತ್​ 3 ತಿಂಗಳ ಕಾಲ ಭೇಟಿ ಆಗಲು ಪ್ಲಾನ್​ ಮಾಡಿದ್ದ. ಒಂದು ದಿನ ಇಬ್ಬರು ಭೇಟಿ ಮಾಡಲು ನಿರ್ಧಾರ ಮಾಡಿದರು.

ನನ್ನ ರೂಂಗೆ ಬಾ ಎಂದು ಕರೆದ ಪ್ರೀಯಾ ಸೇಠ್

ಕೊನೆಗೆ ಪ್ರೀಯಾ ಸೇಠ್​​ ಆತನನ್ನು ದೆಹಲಿಯಿಂದ ಜೈಪುರದತ್ತ ಬರಮಾಡಿಕೊಂಡಿದ್ದಳು. ಜೈಪುರಲ್ಲಿ ತನ್ನ ಬಾಡಿಗೆ ರೂಂ ಇದೆ. ಅಲ್ಲಿ ಭೇಟಿಯಾಗೋಣ ಎಂದಿದ್ದರು. ಆದರೆ ಆಕೆಯ ಮಾತಿನಂತೆಯೇ ಅಡ್ರೆಸ್​ ಹುಡುಕಿಕೊಂಡಿದ್ದ ದುಶ್ಯಂತ್​ಗೆ ಅಲ್ಲಿ ಆಗಿದ್ದೇ ಬೇರೆ.

ಕಿಡ್ನಾಪ್​ ಪ್ಲಾನ್​ ಮಾಡಿದ್ದ ಖತರ್ನಾಕ್​ ಪ್ರೀಯಾ

ದುಶ್ಯಂತ್​ ಪ್ರೀಯಾ ಕಳುಹಿಸಿದ ಅಡ್ರೆಸ್​​ ಹುಡುಕಿಕೊಂಡು ಜೈಪುರದ ರೂಂಗೆ ಬಂದನು. ಆದರೆ ಆತ ಬರುತ್ತಾನೆ ಎಂದು ತಿಳಿದು ಪ್ರೀಯಾ ಅಪಹರಣಕ್ಕೆ ಪ್ಲಾನ್​ ಮಾಡಿದ್ದಳು. ಸ್ನೇಹಿತರಾದ ದೀಕ್ಷಾಂತ್​ ಮತ್ತು ಲಕ್ಷ್ಯ ವಾಲಿಯಾ ಎಂಬವರನ್ನು ಕರೆಸಿಕೊಂಡಿದ್ದಳು. ಬಳಿಕ ದುಶ್ಯಂತ್​ನನ್ನು ಕಿಡ್ನಾಪ್​ ಮಾಡಿದ್ದಲ್ಲದೆ, ಆತನನ್ನು ಬೇರೆಡೆ ಕರೆದುಕೊಂಡು ಹೋಗಿದ್ದಾರೆ.

ಮೊದಲೇ ಶ್ರೀಮಂತ ವ್ಯಕ್ತಿ ಎಂದು ಸುಳ್ಳು ಹೇಳಿದ್ದ ದುಶ್ಯಂತ್​ನನ್ನು ಕಿಡ್ನಾಪ್​ ಮಾಡಿದ್ದಲ್ಲದೆ ಆತನಿಗೆ ಚಿತ್ರಹಿಂಸೆ ನೀಡಿದ್ದರು. ಬಳಿಕ ಆತನ ತಂದೆ ರಾಮೇಶ್ವರ್​ ಪ್ರಸಾದ್​​ ಶರ್ಮಾಗೆ ಕರೆ ಮಾಡಿದ್ದಾರೆ. ಕರೆ ಬಳಿಕ ಆತ ಶ್ರೀಮಂತ ವ್ಯಕ್ತಿ ಅಲ್ಲ ಅನ್ನೋದು ಗೊತ್ತಾಗಿದೆ. ನಂತರ ತಂದೆಯ ಬಳಿ ದುಶ್ಯಂತ್​ ನನ್ನನ್ನು ಕೊಲ್ಲುತ್ತಾರೆ, ಬೇಗ 10 ಲಕ್ಷ ಕೊಟ್ಟು ಕರೆದುಕೊಂಡು ಹೋಗಿ ಎಂದು ಕಣ್ಣೀರು ಹಾಕಿದ್ದಾನೆ.

10 ಲಕ್ಷಕ್ಕೆ ಬೇಡಿಕೆ ಇಟ್ಟ ಪಾಪಿಗಳು!

ಇಷ್ಟಾದ ಬಳಿಕ ಪೋನ್​ ಕಸಿದ ಪ್ರೀಯಾ ಸೇಠ್​ ಸಂಜೆಯೊಳಗೆ 10 ಲಕ್ಷ ಕೊಡಲು ದುಶ್ಯಂತ್​ ತಂದೆ ಬಳಿ ಹೇಳಿದ್ದಾಳೆ. ಆದರೆ ರಾಮೇಶ್ವರ್​ ಪ್ರಸಾದ್ ನನ್ನ ಬಳಿ ಅಷ್ಟೊಂದು ಹಣವಿಲ್ಲ. 3 ಲಕ್ಷ ಅಡ್ಜೆಸ್ಟ್​ ಮಾಡಲು ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.

ಕೊಂದು ಸೂಟ್​ಗೇಸ್​ನಲ್ಲಿಟ್ಟು ಎಸೆದು ಹೋದರು 

ಮಗನ ಅಪಹರಣದಿಂದ ಕಂಗೆಟ್ಟ ತಂದೆ ಸಂಜೆ ಅವರ ಖಾತೆಗೆ ಹಣ ಹಾಕಿದ್ದಾರೆ. ಆದರೆ ಅತ್ತ ದುಷ್ಕರ್ಮಿಗಳು ಆತನಿಗೆ ಸರಿಯಾಗಿ ಬಾರಿಸಿ ಕೊಂದು ಹಾಕಿದ್ದಾರೆ. ನಂತರ ಶವವನ್ನು ಸೂಟ್​ಕೇಸ್​ನಲ್ಲಿಟ್ಟು ಎಸೆದು ಎಸ್ಕೇಪ್​ ಆಗಿದ್ದರು. ಬಳಿಕ ಈ ಕೊಲೆ ಕೇಸ್​ ಅನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳನ್ನು ಅರೆಸ್ಟ್​ ಮಾಡಿದ್ದರು.

ಕೊಲೆ ಮಾಡಲು ಕಾರಣ ಬಿಚ್ಚಿಟ್ಟ ಆರೋಪಿಗಳು

ಪ್ರೀಯಾ ತನ್ನ ಸ್ನೇಹಿತರ ಜೊತೆಗೆ ದುಶ್ಯಂತ್​ ಕೊಲೆ ಮಾಡಲು ಕಾರಣವನ್ನು ಬಿಚ್ಚಿಟ್ಟಿದ್ದಾಳೆ. ದೀಕ್ಷಾಂತ್​ ಜೊತೆ ಲೀವ್​ ಇನ್​ ಸಂಬಂಧದಲ್ಲಿದ್ದ ಪ್ರೀಯಾ ಆತನಿಗಾಗಿ ಈ ಕೃತ್ಯ ಎಸೆದಳು. ಪ್ರಿಯಕರ 21 ಲಕ್ಷ ಸಾಲ ಮಾಡಿದ್ದು, ಆತನ ಸಾಲ ತೀರಿಸಲು ಅಪಹರಣ ಮತ್ತು ಕೊಲೆ ಮಾಡಿದ್ದರು. ಆದರೀಗ 2018ರಲ್ಲಿ ಮಾಡಿದ ಕೊಲೆಗೆ ಕಾರಣ ಬಿಚ್ಚಿಟ್ಟಿದ್ದಾಳೆ ಪ್ರೀಯಾ ಸೇಠ್​. ಸದ್ಯ ಮೂವರು ಅಪರಾಧಿಗಳಿಗೆ ಕೋರ್ಟ್​ ಜೀವಾವಧಿ ಶಿಕ್ಷೆ ವಿಧಿಸಿದೆ.

Related Articles

Back to top button
error: Content is protected !!