ಜನಮನ

ಕುಂದಾಪುರ:ಹಳ್ನಾಡ್ ಹೊಳೆಯ ಹೊಯ್ಗೆ ತೆಗೆಯುವ ವ್ಯಕ್ತಿ ಸಿಡಿಲು ಬಡಿದು ಸಾವು

Views: 7

ಕುಂದಾಪುರ: ತಾಲೂಕಿನ ಕಂಡ್ಲೂರು ಸಮೀಪ ಹಳ್ನಾಡ್ ಹೊಳೆಯ ಹೊಯ್ಗೆ ತೆಗೆಯುವ ವ್ಯಕ್ತಿ ಸಿಡಿಲು ಬಡಿದು ಮೃತಪಟ್ಟ ಘಟನೆ ಶನಿವಾರ ಸಂಜೆ 5 ಗಂಟೆಗೆ ನಡೆದಿದೆ.

ಸಿಡಿಲು ಬಡಿದು ಮೃತಪಟ್ಟ ಕಾರ್ಮಿಕ ಉತ್ತರ ಪ್ರದೇಶದ ದೀಪ್ ಚಂದ್ (38) ಎಂದು ಗುರುತಿಸಲಾಗಿದೆ.

ಹಳ್ನಾಡ್ ಹೊಳೆಯ ಹೊಯ್ಗೆ ದಕ್ಕೆಯಲ್ಲಿ ಉತ್ತರ ಪ್ರದೇಶದ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಸಂಜೆ ವೇಳೆ ದೀಪ್ ಚಂದ್ ರವರು ದೋಣಿಯಿಂದ ಹೊಯ್ಗೆ ಖಾಲಿ ಮಾಡುತ್ತಿದ್ದ ಸಂದರ್ಭ ಸಿಡಿಲು ಬಡಿದು ಸ್ಥಳದಲ್ಲೇ ಮೃತ ಪಟ್ಟಿರುತ್ತಾರೆ. ಮತ್ತೊರ್ವ ಕಾರ್ಮಿಕ ಅಲ್ಲೇ ನೀರಿಗೆ ಬಿದ್ದು ಪ್ರಾಣಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.

ಮೃತದೇಹವನ್ನು ಯಂಗ್ ಸ್ಟಾರ್ ಕಂಡ್ಲೂರು ಆಂಬುಲೆನ್ಸ್ ನಲ್ಲಿ ಚಾಲಕ ಐಮಾನ್ ಕಂಡ್ಲೂರುರವರು ಕುಂದಾಪುರ ಶವಗಾರಕ್ಕೆ ಸಾಗಿಸಿರುತ್ತಾರೆ.

ಕಂಡ್ಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Related Articles

Back to top button
error: Content is protected !!