ಸೆಲೆಬ್ರಿಟಿಗಳ ಮುಖಕ್ಕೆ ಇನ್ನಾರದೋ ವಿಡಿಯೋಗೆ ಮುಖ ಅಂಟಿಸಿ ಅವಮಾನ ಮಾಡುವ ಡೀಪ್‌ಫೇಕ್‌ಗೆ ಅಂಕುಶ ಹಾಕಲು ಕೇಂದ್ರ ಸರ್ಕಾರ ಕಠಿಣ ನಿರ್ಧಾರ

Views: 0
ನವದೆಹಲಿ:ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದ ಡೀಪ್‌ಫೇಕ್‌ಗೆ ಮೂಗುದಾರ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ದೇಶದಲ್ಲಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ,ಬಾಲಿವುಡ್ ನಟಿಯರಾದ ರಶ್ಮಿಕಾ ಮಂದಣ್ಣ , ಕಾಜೋಲ್, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಹಲವು ಸೆಲೆಬ್ರಿಟಿಗಳ ಮುಖಕ್ಕೆ ಇನ್ನಾರದೋ ವಿಡಿಯೋಗೆ ಮುಖ ಅಂಟಿಸಿ ಅವಮಾನ, ಅವಹೇಳನ ಮಾಡುವ ” ಡೀಪ್‌ಫೇಕ್‌ಗೆ ಅಂಕುಶ ಹಾಕಲು ಕೇಂದ್ರ ಸರ್ಕಾರ, ಮುಂದಾಗಿದೆ.
ಈ ರೀತಿಯ ಪೋಸ್ಟ್ ಮಾಡುವ ವೇದಿಕೆಗಳ ವಿರುದ್ದ ದಂಡ, ಶಿಕ್ಷೆ ವಿಧಿವಿಧಿಸಲು ಕಠಿಣ ಮಾರ್ಗಸೂಚಿ ರೂಪಿಸುವುದು ಸೇರಿದಂತೆ ಈ ರೀತಿ ಮಾಡುವ ಮಂದಿಗೆ ಎಡೆ ಮುರಿ ಕಟ್ಟಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಸಾಮಾಜಿಕ ಜಾಲತಾಣದ ಪ್ರಮುಖರೊಂದಿಗೆ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಸಭೆ ನಡೆಸಿದ ಬಳಿಕ ಈ ವಿಷಯ ಪ್ರಕಟಿಸಿದ್ದು ಇನ್ನು ಮುಂದೆ ಈ ರೀತಿಯ ಡೀಪ್ ಫೇಕ್ ಮಾಡುವ ಮಂದಿಯ ವಿರುದ್ದ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.
ಡಿಫ್‌ಫೇಕ್ ವಿಡಿಯೋಗಳಿಗೆ ನಿಯಂತ್ರಣ ಹಾಕಲು ಕೇಂದ್ರ ಸರ್ಕಾರ ಡೀಪ್‌ಫೇಕ್‌ಗಳು ಮತ್ತು ಅವುಗಳನ್ನು ಹೋಸ್ಟ್ ಮಾಡುವ ಪ್ಲಾಟ್‌ಫಾರ್ಮ್‌ಗಳನ್ನು ರಚಿಸುವ ಮತ್ತು ಹಂಚಿಕೊಳ್ಳುವರ ವಿರುದ್ಧ ದಂಡ ಶಿಕ್ಷೆ ಸೇರಿ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದಿದ್ಧಾರೆ.
ಸರ್ಕಾರ ಮತ್ತು ಸಾಮಾಜಿಕ ಮಾಧ್ಯಮ ಕಂಪನಿಗಳು ಪತ್ತೆ, ತಡೆಗಟ್ಟುವಿಕೆ ಮತ್ತು ಹರಡುವಿಕೆಯ ಕುರಿತು ವಿವರವಾದ ಮಾರ್ಗಸೂಚಿಗಳನ್ನು ಹೊರತರಲು ಕೇಂದ್ರ ಮಾಹಿತಿ ಮತ್ತು ವಿದ್ಯುನ್ಮಾನ ಸಚಿವಾಲಯ ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಶೀಘ್ರ ಕರಡು ಸಿದ್ದತೆ:
ಡೀಪ್ ಫೇಕ್‌ಗೆ ಕಡಿವಾಣ ಹಾಕಲು ಶೀಘ್ರದಲ್ಲಿ ಕರಡು ನಿಯಮ ಸಿದ್ಧಪಡಿಸಲಾಗುತ್ತಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಕೃತಕ ಬುದ್ಧಿಮತ್ತೆ ಉಪಕರಣಗಳ ಮೇಲೆ ಕೆಲಸ ಮಾಡುವ ಕಂಪನಿಗಳೊಂದಿಗಿನ ಸಭೆಯ ನಂತರ ಮಾತನಾಡಿ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಿ ಇಲ್ಲದಿದ್ದರೆ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಡೀಪ್‌ಫೇಕ್‌ಗಳನ್ನು ಹೇಗೆ ಕಂಡುಹಿಡಿಯಬಹುದು; ಡೀಪ್‌ಫೇಕ್‌ಗಳನ್ನು ಪೋಸ್ಟ್ ಮಾಡುವ ಮಂದಿಯ ವಿರುದ್ದ ಕ್ರಮ, ಕಾರ್ಯವಿಧಾನ, ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ಬಳಕೆದಾರರು ಪ್ಲಾಟ್‌ಫಾರ್ಮ್ ಮತ್ತು ಅಧಿಕಾರಿಗಳಿಗೆ ಡೀಪ್‌ಫೇಕ್ ಬಗ್ಗೆ ಎಚ್ಚರಿಕೆ ನೀಡುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಲಾಗಿದೆ ಎಂದಿದ್ದಾರೆ.
ಡೀಪ್ ಪೇಕ್ ತಡೆಯಲು ಸಾರ್ವಜನಿಕರಲ್ಲಿ ಜಾಗೃತಿಯನ್ನು ಹೆಚ್ಚಿಸುವುದು, ಇದಕ್ಕಾಗಿ ಸರ್ಕಾರ, ಉದ್ಯಮ ಮತ್ತು ಮಾಧ್ಯಮಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದ್ಧಾರೆ.
ಪ್ರಜಾಪ್ರಭುತ್ವಕ್ಕೆ ಬೆದರಿಕೆ
ಡೀಪ್‌ಫೇಕ್‌ಗಳು ಪ್ರಜಾಪ್ರಭುತ್ವಕ್ಕೆ ಹೊಸ ಬೆದರಿಕೆಯಾಗಿ ಹೊರಹೊಮ್ಮಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದರ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆಗಳೊಂದಿಗಿನ ಸಭೆಯ ನಂತರ ಮಾತನಾಡಿದ ಅವರು ಡೀಪ್ ಫೇಕ್ ಮಾಡುವ ಮಂದಿ ಮತ್ತು ಅದನ್ನು ಹಂಚಿಕೊಳ್ಳುವ ವಿವಿಧ ಸಾಮಾಜಿಕ ಜಾಲಜಾಣಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಚಿನ್ ಪುತ್ರಿ ಆಕ್ರೋಶ

ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಕೂಡ ಡೀಪ್‌ಫೇಕ್ ತಂತ್ರಜ್ಞಾನಕ್ಕೆ ಬೇಸತ್ತಿದ್ದಾರೆ. ಅವರ ಡೀಪ್ ಫೇಕ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಹೆಸರಿನಲ್ಲಿ ಅನೇಕ ನಕಲಿ ಖಾತೆಗಳನ್ನು ತೆರೆಯಲಾಗಿದೆ ಎಂದು ದೂರಿದ್ದಾರೆ. ತಂತ್ರಜ್ಞಾನ ದುರ್ಬಳಕೆಯಾಗುತ್ತಿದ್ದು, ಇದು ಒಳ್ಳೆಯದಲ್ಲ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ನಮ್ಮ ದೈನಂದಿನ ಚಟುವಟಿಕೆಗಳು, ಸಂತೋಷ ಮತ್ತು ದುಃಖಗಳನ್ನು ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮವು ಒಂದು ಅದ್ಭುತ ವೇದಿಕೆಯಾಗಿದೆ. ಆದರೆ, ಕೆಲವರು ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಖೇದಕರ ಸಂಗತಿಯಾಗಿದೆ.ನನ್ನ ಡೀಪ್‌ಫೇಕ್ ಫೋಟೋಗಳು ವೈರಲ್ ಆಗುತ್ತಿರುವುದನ್ನು ನಾನು ನೋಡಿದ್ದೇನೆ. ಕೆಲವರು ಎಕ್ಸ್ ನಲ್ಲಿ ನನ್ನ ಹೆಸರಿನಲ್ಲಿ ನಕಲಿ ಖಾತೆಗಳನ್ನು ರಚಿಸಿದ್ದಾರೆ. ಎಕ್ಸ್ ಸಂಸ್ಥೆಯು ನಕಲಿ ಖಾತೆಗಳನ್ನು ಗುರುತಿಸುತ್ತದೆ ಮತ್ತು ಅವುಗಳನ್ನು ನಿಷ್ಕ್ರಿಯಗೊಳಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಸತ್ಯವನ್ನು ಮುಚ್ಚಿಟ್ಟು ಮನರಂಜನೆ ಮಾಡಬೇಡಿ. ಪ್ರಾಮಾಣಿಕ, ನಿಜವಾದ ಸಂವಹನವನ್ನು ಪ್ರೋತ್ಸಾಹಿಸಿ ಎಂದು ಸಾರಾ ತೆಂಡೂಲ್ಕರ್ ಮನವಿ ಮಾಡಿದ್ದಾರೆ.
ಇತ್ತೀಚೆಗಷ್ಟೇ ಟೀಂ ಇಂಡಿಯಾ ಓಪನರ್ ಶುಭ್ಮನ್ ಗಿಲ್ ಜೊತೆ ಸಾರಾ ತೆಂಡೂಲ್ಕರ್ ಇರುವ ವಿಕೃತ ಫೋಟೋ ವೈರಲ್ ಆಗಿದೆ. ಸಾರಾ ಅವರ ಸಹೋದರ ಅರ್ಜುನ್ ತೆಂಡೂಲ್ಕರ್ ಅವರೊಂದಿಗಿನ ಫೋಟೋವನ್ನು ಕೆಲವು ಕಿಡಿಗೇಡಿಗಳು ಡೀಪ್‌ಫೇಕ್ ಮಾಡಿದ್ದಾರೆ. ಅರ್ಜುನ್ ಮುಖದ ಬದಲು ಗಿಲ್ ಮುಖವನ್ನು ಎಡಿಟ್ ಮಾಡಲಾಗಿದೆ. ಈ ಹಿಂದೆ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿದ್ದವು. ಇದರೊಂದಿಗೆ ಇತ್ತೀಚಿನ ಡೀಪ್‌ಫೇಕ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.







