ಜನಮನ

ವಾಂತಿ ಎಂದು ಆಸ್ಪತ್ರೆಗೆ ಹೋಗಿದ್ದ ಗೃಹಿಣಿ ಹಠಾತ್ ಸಾವು: ಆಸ್ಪತ್ರೆ ಮುಂದೆಯೇ ಧರಣಿ 

Views: 0

ಬೆಂಗಳೂರು: ವಾಂತಿ ಅಂತ ಆಸ್ಪತ್ರೆ ಸೇರಿದ ಗೃಹಿಣಿ ಇದ್ದಕ್ಕಿದಂತೆ ಸಾವನ್ನಪ್ಪಿರೋ ಘಟನೆ ಪದ್ಮನಾಭ ನಗರದ ಮಹಾರಾಜ್ ಅಗ್ರಸೇನ್ ಆಸ್ಪತ್ರೆಯಲ್ಲಿ ನಡೆದಿದೆ. ದೇವಿ (26) ಮೃತ ಗೃಹಿಣಿ.

ಬನಶಂಕರಿಯಲ್ಲಿ ವಾಸವಿದ್ದ ಮಹಿಳೆ ದೇವಿಗೆ ದಿಢೀರ್ ವಾಂತಿ ಹೆಚ್ಚಾಗಿದೆ. ತಕ್ಷಣವೇ ಆಕೆಯನ್ನು ಮಹಾರಾಜ್ ಅಗ್ರಸೇನ್ ಆಸ್ಪತ್ರೆಗೆ ದೇವಿಯನ್ನು ಕುಟುಂಬಸ್ಥರು ದಾಖಲಿಸಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಪ್ಲೇಟ್ಲೆಟ್ ಕಡಿಮೆ ಆಗಿ ಡೆಂಗ್ಯೂ ಬಂದಿರುವುದು ಗೊತ್ತಾಗಿದೆ. ಡೆಂಗ್ಯೂ ಇರೋದು ಖಚಿತವಾದ್ರೂ ಸೂಕ್ತ ಚಿಕಿತ್ಸೆ ಸಿಗದ ಕಾರಣ ನಿನ್ನೆ ಸಂಜೆ 4 ಗಂಟೆಯೊಳಗೆ ಗೃಹಿಣಿ ಮೃತಪಟ್ಟಿದ್ದಾರೆ.

ಇದರಿಂದ ರೊಚ್ಚಿಗೆದ್ದ ಕುಟುಂಬಸ್ಥರು ಆಸ್ಪತ್ರೆ ಮುಂದೆಯೇ ಧರಣಿ ಕುಳಿತ್ತಿದ್ದಾರೆ. ಪುಟ್ಟ ಕಂದಮ್ಮಗಳು ಅಮ್ಮನನ್ನು ಕಳೆದುಕೊಂಡು ಏನು ತಿಳಿಯದೇ ಅನಾಥವಾಗಿವೆ. ದೇವಿ ಪತಿ ಸಹ ಆಸ್ಪತ್ರೆ ವಿರುದ್ಧ ರೊಚ್ಚಿಗೆದ್ದು ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದಾರೆ.

Related Articles

Back to top button
error: Content is protected !!