ಜನಮನ

ವಿದ್ಯುತ್ ಪ್ರವಹಿಸಿದ ಫ್ಯಾನ್‌ ಸ್ಪರ್ಶಿಸಿ ಒಂದೇ ಕುಟುಂಬದ ನಾಲ್ವರ ಸಾವು

Views: 57

ಉನ್ನಾವೋ:ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ವಿದ್ಯುತ್ ಸ್ಪರ್ಶದಿಂದ ಒಂದೇ ಕುಟುಂಬದ ನಾಲ್ವರು ಅಮಾಯಕ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ.

ಮನೆಯಲ್ಲಿ ಇರಿಸಲಾಗಿದ್ದ ಫ್ಯಾನ್‌ಗೆ ವಿದ್ಯುತ್ ಪ್ರವಹಿಸಿದ ನಂತರ ಎಲ್ಲಾ ನಾಲ್ವರು ಮಕ್ಕಳು ವಿದ್ಯುತ್ ಸ್ಪರ್ಶಕ್ಕೆ ಬಲಿಯಾಗಿದ್ದಾರೆ ಎಲ್ಲಾ ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಏಕಕಾಲಕ್ಕೆ ನಡೆದ ನಾಲ್ಕು ಮಕ್ಕಳ ಸಾವಿನಿಂದ ಇಡೀ ಗ್ರಾಮವೇ ದಿಗ್ಭ್ರಮೆ ಗೊಂಡಿದೆ.ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಅವಘಡದ ಬಗ್ಗೆ ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತ ಮಕ್ಕಳ ಶವಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಉನ್ನಾವೋ ಜಿಲ್ಲೆಯ ಬರಸ್‌ಗವಾರ್ ಪೊಲೀಸ್ ಠಾಣೆಯ ಲಾಲ್ಮನ್ ಖೇಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಿದ್ಯುದಾಘಾತದಿಂದ ಪ್ರಾಣ ಕಳೆದುಕೊಂಡ ಮಕ್ಕಳು 9 ವರ್ಷದ ಮಯಾಂಕ್, 6 ವರ್ಷದ ಹಿಮಾಂಕ್, 4 ವರ್ಷದ ಮಾನ್ಸಿ ಹಾಗೂ ಇನ್ನೊಂದು ಮಗು ಸಾವನ್ನಪ್ಪಿದೆ.ಈ ಘಟನೆಯಿಂದ ಕುಟುಂಬಸ್ಥರ ಸ್ಥಿತಿ ಚಿಂತಾಜನಕವಾಗಿದೆ. ವೀರೇಂದ್ರ ಸಿಂಗ್ ತನ್ನ ಪತ್ನಿಯೊಂದಿಗೆ ಹೊಲಕ್ಕೆ ಹೋಗಿದ್ದಾರೆ.ಮನೆಯಲ್ಲಿ ಮಕ್ಕಳು ಇದ್ದಾರೆ ಮನೆಯಲ್ಲಿ ಫ್ಯಾನ್ ಅಳವಡಿಸಿದ್ದು, ಅದರ ಮೂಲಕ ಕರೆಂಟ್ ಹರಿದಿದೆ.

ಆಟವಾಡುತ್ತಿದ್ದ ಸಮಯದಲ್ಲಿ ನಾಲ್ಕು ಮಕ್ಕಳಲ್ಲಿ ಒಂದು ಮಗು ಫ್ಯಾನ್ ಮುಟ್ಟಿದೆ ತಕ್ಷಣವೇ ವಿದ್ಯುತ್ ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿದೆ.

ವಿದ್ಯುತ್ ಶಾಕ್ ತಗುಲಿ ಕಿರುಚಲು ಆರಂಭಿಸಿದೆ. ಮತ್ತೊಂದು ಮಗು ಆತನನ್ನು ರಕ್ಷಿಸಲು ಯತ್ನಿಸಿದಾಗ ಆತನಿಗೂ ವಿದ್ಯುತ್ ಸ್ಪರ್ಶವಾಗಿದೆ. ಇದಾದ ಬಳಿಕ ಒಬ್ಬೊಬ್ಬರಾಗಿ ನಾಲ್ವರು ಮಕ್ಕಳು ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

Related Articles

Back to top button
error: Content is protected !!