ಜನಮನ

ಬಸ್ಸು ಹತ್ತುವಾಗ ವ್ಯಾನಿಟಿ ಬ್ಯಾಗ್‍ನಲ್ಲಿದ್ದ 2.35 ಲಕ್ಷ ರೂ.ಮೌಲ್ಯದ 5 ತೊಲೆಯ ಬಂಗಾರದ ಆಭರಣ ಮಂಗಮಾಯೆ..! 

Views: 0

ಕಲಬುರಗಿ :-ಬಸ್ಸು ಹತ್ತುವಾಗ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‍ನಲ್ಲಿದ್ದ 2.35 ಲಕ್ಷ ರೂ.ಮೌಲ್ಯದ 5 ತೊಲೆಯ ಬಂಗಾರದ ಆಭರಣಗಳು ಕಳವಾಗಿರುವ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.

ಬೀದರ್ ಜಿಲ್ಲೆಯ ಹುಮನಾಬಾದ ಪಟ್ಟಣದ ನ್ಯೂ ಹೌಸಿಂಗ್ ಬೋರ್ಡ್ ಟೀಚರ್ಸ್ ಕಾಲೋನಿಯ ಅಖಿಲಾಬೀ ಎಂಬುವವರೆ ಚಿನ್ನಾಭರಣ ಕಳೆದುಕೊಂಡು ಕಂಗಾಲಾಗಿದ್ದಾರೆ.

ಸಂಬಂಧಿಕರ ಮದುವೆ ಸಮಾರಂಭಕ್ಕೆಂದು ಕಲಬುರಗಿಗೆ ಬಂದಿದ್ದ ಇವರು ಮದುವೆ ಸಮಾರಂಭ ಮುಗಿದ ಮೇಲೆ ಮರಳಿ ಹುಮನಾಬಾದಗೆ ಹೋಗಲೆಂದು ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ಹುಮನಾಬಾದಗೆ ಹೋಗುವ ಬಸ್ಸು ಹತ್ತುತ್ತಿದ್ದ ವೇಳೆ ಅವರ ವ್ಯಾನಿಟಿ ಬ್ಯಾಗ್‍ನಲ್ಲಿದ್ದ 1 ಲಕ್ಷ ರೂ.ಮೌಲ್ಯದ 2 ತೊಲೆ ಬಂಗಾರದ ನೆಕ್ಲೆಸ್ ಮತ್ತು 1.35 ಲಕ್ಷ ರೂ.ಮೌಲ್ಯದ 3 ತೊಲೆಯ ಬಂಗಾರದ ಹಾರ ಸೇರಿ 2.35 ಲಕ್ಷ ರೂ.ಮೌಲ್ಯದ 5 ತೊಲೆಯ ಬಂಗಾರದ ಆಭರಣ ಕಳವಾಗಿವೆ. ಈ ಸಂಬಂಧ ಅವರು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.

Related Articles

Back to top button
error: Content is protected !!