ಇತರೆ

9ನೇ ತರಗತಿ ಬಾಲಕನಿಗೆ 6ನೇ ತರಗತಿ ಬಾಲಕ ಚೂರಿ ಇರಿತ: ವಿದ್ಯಾರ್ಥಿ ಸಾವು

Views: 239

ಕನ್ನಡ ಕರಾವಳಿ ಸುದ್ದಿ: ಕ್ಷುಲ್ಲಕ ಕಾರಣಕ್ಕೆ 9ನೇ ತರಗತಿ ಓದುತ್ತಿದ್ದ ಬಾಲಕನಿಗೆ 6ನೇ ತರಗತಿ  ಬಾಲಕ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಬಾಲಕ‌ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ಕಮರಿಪೇಟೆಯಲ್ಲಿ ನಡೆದಿದೆ.

ಚೇತನ ರಕ್ಕಸಗಿ (14 )ಎಂಬಾತ ಚಾಕು ಇರಿತಕ್ಕೆ ಒಳಗಾಗಿ ಮೃತಪಟ್ಟ ಬಾಲಕ. ಸಾಯಿ ಹಬೀಬ್ ಎಂಬಾತ ಚಾಕು ಇರಿದ ಬಾಲಕ ಎಂದು ತಿಳಿದು ಬಂದಿದೆ.

ಚೇತನ ತಮ್ಮ ಮನೆಯಲ್ಲಿ ಚಹಾ ಕುಡಿದು, ತನಗೆ ಹೊಸ ಬಟ್ಟೆ ತರುವಂತೆ ತನ್ನ ತಾಯಿಗೆ ತಿಳಿಸಿ ಹೊರಗಡೆ ಹೋಗಿದ್ದ. ಈ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಸಾಯಿ ಹಬೀಬ್ ಜೊತೆಗೆ ಜಗಳ ಏರ್ಪಟ್ಟಿದೆ. ಈ ವೇಳೆ ಸಾಯಿ ಹಬೀಬ್ ರೇಡಿಯಂ ಕಟರ್ನಿಂದ ಇರಿದಿದ್ದಾನೆ. ಪರಿಣಾಮ ಚೇತನ್ ಗಂಭೀರವಾಗಿ ಗಾಯಗೊಂಡಿದ್ದು, ಕಿಮ್ಸ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ.

ಹೃದಯ ವಿದ್ರಾವಕ ಘಟನೆ: ಮೃತ ಬಾಲಕ ಸಹ 8ನೇ ತರಗತಿ ಪಾಸ್ ಆಗಿದ್ದು, 9ನೇ ತರಗತಿಗೆ ಅಡ್ಮಿಶನ್ ತೆಗೆದುಕೊಳ್ಳಬೇಕಿತ್ತು. ಮೃತಪಟ್ಟ ಬಾಲಕ ಒಬ್ಬನೇ ಮಗನಾಗಿದ್ದಾನೆ. ತಂದೆ ರೊಟ್ಟಿ ವ್ಯಾಪಾರ ಮಾಡ್ತಿದ್ದಾರೆ. ಆರೋಪಿ ಬಾಲಕನ ಕುಟುಂಬವು ಬಡ ಕುಟುಂಬವಾಗಿದೆ.

ಕಾನೂನು ಪ್ರಕಾರ ಏನೂ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ತಿಳಿಸಿದ್ದಾರೆ.

Related Articles

Back to top button