8 ವರ್ಷದ ವೈವಾಹಿಕ ಜೀವನ ಅಂತ್ಯಗೊಳಿಸಿದ ರಂಗೀಲಾ ಬೆಡಗಿ.. ಊರ್ಮಿಳಾ ಮಾತೋಂಡ್ಕರ್!

Views: 178
ನವದೆಹಲಿ:ಕಾಲಿವುಡ್ ನಟ ಜಯಂರವಿ ಅವರ ಡೈವೋರ್ಸ್ ವಿಚಾರ ಭಾರೀ ಸದ್ದು ಮಾಡುತ್ತಿರುವಾಗಲೇ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಅವರು ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿರುವ ಸುದ್ದಿ ಬಿಗ್‌ಟೌನ್‌ನಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
2016ರಲ್ಲಿ ರಂಗೀಲಾ ಬೆಡಗಿ ಊರ್ಮಿಳಾ ಮಾತೋಂಡ್ಕರ್ ಅವರು ಕಾಶ್ಮೀರಿ ಮೂಲದ ಮೋಸಿನ್ ಅವರು ವಿವಾಹವಾದಾಗ ಅನ್ಯಕೋಮಿನ ವರನನ್ನು ಸ್ಟಾರ್ ನಟಿ ವರಿಸಿದ್ದರಿಂದ ಬಾಲಿವುಡ್ ಅಂಗಳದಲ್ಲಿ ಸಾಕಷ್ಟು ಚರ್ಚೆಗಳಾಗಿದ್ದವು.
ತಮ್ಮ ಎಂಟು ವರ್ಷಗಳ ವೈವಾಹಿಕ ಜೀವನವನ್ನು ಅಂತ್ಯಗೊಳಿಸುವ ಸಲುವಾಗಿ ನಟಿ ಊರ್ಮಿಳಾ ಮಾಂತೋಡ್ಕರ್ ಅವರು ಮುಂಬೈ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರೆ. ಇದಕ್ಕೆ ಸೂಕ್ತ ಕಾರಣ ನಟಿ ತಿಳಿಸಿಲ್ಲ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಚರ್ಚೆ ಮಾಡದ ರಂಗೀಲಾ ನಟಿ ಊರ್ಮಿಳಾ ಮಾಂತೋಡ್ಕರ್ ತಾವು ತಮ್ಮ ಪತಿ ಮೋಸಿನ್ ಅಖ್ತರ್‌ಗೆ ವಿಚ್ಛೇದನ ನೀಡುತ್ತಿರುವ ವಿಷಯದಲ್ಲೂ ಗೌಪ್ಯತೆ ಕಾಪಾಡಿಕೊಂಡಿದ್ದಾರೆ.
ಊರ್ಮಿಳಾ ಮಾಂತೋಡ್ಕರ್ ಅವರು ತಮ್ಮ ವೈವಾಹಿಕ ಜೀವನ ಅಂತ್ಯಗೊಳಿಸುತ್ತಿರುವುದೇಕೆ ಎಂದು ಅಧಿಕೃತ ಹೇಳಿಕೆ ನೀಡದಿದ್ದರೂ ಕಳೆದ ಕೆಲವು ವರ್ಷಗಳಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದು , ಆದರಿಂದಲೇ ವಿಚ್ಛೇದನ ಪಡೆಯಲು ಕಾರಣವಾಗಿರ ಬಹುದೇ ಎಂದು ಬಿಗ್‌ಟೌನ್‌ನಲ್ಲಿ ಚರ್ಚೆಗಳಾಗಿವೆ.






