ಆರೋಗ್ಯ

7 ನಿಮಿಷದಲ್ಲೇ ಕ್ಯಾನ್ಸರ್‌ ಗುಣಪಡಿಸುವ ಇಂಜೆಕ್ಷನ್..! ಪ್ರತಿ ಡೋಸ್‌ಗೆ ವೆಚ್ಚ ಎಷ್ಟು?

Views: 317

ಕನ್ನಡ ಕರಾವಳಿ ಸುದ್ದಿ: ಕ್ಯಾನ್ಸರ್ ಎಂಬ ಸದ್ದಿಲ್ಲದ ಮಾರಣಾಂತಿಕ ಕಾಯಿಲೆಯನ್ನು ಗುಣಪಡಿಸುವ ಏಳು ನಿಮಿಷಗಳ ಇಂಜೆಕ್ಷನ್ ಮೂಲಕ ನೀಡಬಹುದಾದ ಹೊಸ ಇಮ್ಯುನೊಥೆರಪಿ ಔಷಧ ಭಾರತಕ್ಕೆ ಲಗ್ಗೆ ಇಟ್ಟಿದೆ.

ಶ್ವಾಸಕೋಶದ ಕ್ಯಾನ್ಸರ್ ರೋಗಿಗಳಿಗೆ ಇಮ್ಯುನೊಥೆರಪಿ(ರೋಗ ನಿರೋಧಕ ಶಕ್ತಿ ಆಧಾರಿತ) ಚಿಕಿತ್ಸೆಯನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಭಾರತದಲ್ಲಿ ಮಹತ್ವದ ಬೆಳವಣಿಗೆ ಆಗಿದ್ದು, ರೋಚ್ ಫಾರ್ಮಾ ಇಂಡಿಯಾ ಸಂಸ್ಥೆಯು ‘ಟೆಸಂಟ್ರಿಕ್’ ಹೆಸರಿನ, ಚುಚ್ಚುಮದ್ದು ಆಧಾರಿತ ಔಷಧವನ್ನು ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಿದೆ.

ಐವಿ ಮೂಲಕ ಔಷಧವನ್ನು ಕೊಳವೆ ಮೂಲಕ ದೇಹಕ್ಕೆ ಸೇರಿಸುವ ಸಾಂಪ್ರದಾಯಿಕ ವಿಧಾನಗಳಿಂದಾಗಿ ಆಸ್ಪತ್ರೆಯಲ್ಲಿ ಗಂಟೆಗಟ್ಟಲೆ ಕಾಯುವ ಅಗತ್ಯವಿಲ್ಲದೇ, ಈ ಚುಚ್ಚುಮದ್ದನ್ನು ಕೇವಲ 7 ನಿಮಿಷ ಗಳಲ್ಲಿ ರೋಗಿಗೆ ನೀಡಬಹುದು. ಇದರ ಪ್ರತಿ ಡೋಸ್‌ಗೆ ಸುಮಾರು 3.7 ಲಕ್ಷ ರೂ. ವೆಚ್ಚವಾಗಲಿದ್ದು, ರೋಗಿ ಆರೋಗ್ಯ ಸ್ಥಿತಿ ಆಧಾರದಲ್ಲಿ 6 ಡೋಸ್‌ಗಳ ಅಗತ್ಯ ವಿರಬಹುದು ಎನ್ನಲಾಗಿದೆ.

ಹೇಗೆ ಕೆಲಸ ಮಾಡಲಿದೆ ಲಸಿಕೆ

ಸಾಮಾನ್ಯವಾಗಿ ಕ್ಯಾನ್ಸರ್ ಕೋಶ ದೇಹದ ರೋಗ ನಿರೋಧಕ ವ್ಯವಸ್ಥೆ  ‘ಪಿಡಿ-ಎಲ್!’ ಎಂಬ ಪ್ರೊಟೀನ್ ಉತ್ಪಾದಿಸುತ್ತದೆ. ಆದರೆ, ಈ ಮದ್ದು ಪ್ರೊಟೀನ್‌ನ ಉದ್ದೇಶ ನಿರ್ಬಂಧಿಸುತ್ತದೆ. ಹೀಗಾಗಿ ರೋಗ ನಿರೋಧಕ ವ್ಯವಸ್ಥೆಯು ಕ್ಯಾನ್ಸರ್ ಕೋಶ ಪತ್ತೆಹಚ್ಚಿ ನಾಶಪಡಿಸುತ್ತದೆ. ರಾಸಾಯನಿಕ ಆಧಾರಿತ ಕೀಮೋ ಥೆರಪಿ ಕ್ಯಾನ್ಸರ್‌ಕೋಶ ಜತೆಗೆ ಆರೋಗ್ಯಕರ ಕೋಶ ನಾಶಪಡಿಸುತ್ತದೆ. ಆದರೆ, ಈ ವಿಧಾನ ಕೇವಲ ಕ್ಯಾನ್ಸರ್ ಕೋಶವನ್ನಷ್ಟೇ ನಾಶ ಮಾಡಲು ನೆರವಾಗುತ್ತದೆ.

ಕಳೆದ ಡಿಸೆಂಬರ್‌ನಲ್ಲಿ ಗುರುಗ್ರಾಮದ ಮೆದಾಂತ ಆಸ್ಪತ್ರೆಯಲ್ಲಿ 57 ವರ್ಷದ ಜೈ ಸಿಂಗ್ ಅವರಿಗೆ ಶ್ವಾಸಕೋಶದ ಕ್ಯಾನ್ಸರ್‌ನಿಂದಾಗಿ ಕಿಮೋಥೆರಪಿಯ ಅಡ್ಡಪರಿಣಾಮಗಳ ಭಯದಿಂದ ವೈದ್ಯರು ಇಮ್ಯುನೊಥೆರಪಿ ಚಿಕಿತ್ಸೆ ಸೂಚಿಸಿದರು. ಅವರ PD-L1 ಮಟ್ಟ ಶೇ.75 ರಷ್ಟಿದ್ದ ಕಾರಣ, ರೋಚೆ ಕಂಪನಿಯ ‘ಟೆಸೆಂಟ್ರಿಕ್’ ಬ್ರಾಂಡ್‌ನ ಅಟೆಜೋಲಿಜುಮಾಬ್ ಚರ್ಮದ ಅಡಿಯಲ್ಲಿ ನೀಡುವ ಇಂಜೆಕ್ಷನ್ ಅನ್ನು ಶಿಫಾರಸು ಮಾಡಲಾಯಿತು. ಇದು ನಾನ್-ಸ್ಮಾಲ್ ಸೆಲ್ ಲಂಗ್ ಕ್ಯಾನ್ಸರ್ (NSCLC) ರೋಗಿಗಳಿಗೆ, ವಿಶೇಷವಾಗಿ PD-L1 ರಿಸೆಪ್ಟರ್‌ಗಳು ಹೆಚ್ಚಿರುವವರಿಗೆ ಪರಿಣಾಮಕಾರಿ. ತರಬೇತಿ ಪಡೆದ ದಾದಿಯರು ಕೇವಲ ಏಳು ನಿಮಿಷಗಳಲ್ಲಿ ಇದನ್ನು ನೀಡಬಹುದು.

 

Related Articles

Back to top button
error: Content is protected !!