ಜನಮನ
ಗೋ ಹತ್ಯೆ ಖಂಡಿಸಿ ಶಿಕಾರಿಪುರ ಸ್ವಯಂ ಪ್ರೇರಿತ ಬಂದ್

Views: 160
ಗೋ ಹತ್ಯೆ ಖಂಡಿಸಿ ಸೋಮವಾರ ನಡೆದ ಸ್ವಯಂ ಪ್ರೇರಿತ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಿಗ್ಗೆಯಿಂದಲೇ ಪಟ್ಟಣದಲ್ಲಿ ಅಂಗಡಿ ಮುಗ್ಗಟ್ಟು ಗಳನ್ನು ಮುಚ್ಚುವ ಮೂಲಕ ವ್ಯಾಪಾರಸ್ಥರು ಬಂದ್ ಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗೋ ಹತ್ಯೆ ಖಂಡಿಸಿ ಹಿಂದೂ ಜನಜಾಗೃತಿ ಜಾಥಾ ನಡೆಯಿತು.ಸಾವಿರಾರು ಯುವಕರು ಗೋಹತ್ಯೆ ರಕ್ಷಣೆಗೆ ಘೋಷಣೆ ಕೂಗುತ್ತಾ ಹೆಜ್ಜೆ ಹಾಕಿದರು.
ಪೊಲೀಸ್ ಬಿಗಿ ಬಂದೋಬಸ್ತ್ ಆಯೋಜಿಸಲಾಗಿತ್ತು. ಹಿಂದೂ ಜಾಗರಣ ವೇದಿಕೆ ರಕ್ಷಣಾ ಪ್ರಾಂತ್ಯ ಸಹ ಸಂಚಾಲಕ ಸತೀಶ್ ದಾವಣಗೆರೆ, ಜಿಲ್ಲಾ ಸಂಚಾಲಕ ದೇವರಾಜ್ ಅರಳಿಹಳಿ,ಆರ್ ಎಸ್ ಎಸ್ ಸಾಗರ ಜಿಲ್ಲಾ ಕಾರ್ಯ ವಾಹಕ ಶ್ರೀಧರ್, ವೇದಿಕೆಯಲ್ಲಿ ಇದ್ದರು