ಶಿಕ್ಷಣ
ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಮತ್ತು ಸುಜ್ಞಾನ್ ಪಿಯು ಕಾಲೇಜು:ಮಂಥನ ಬೇಸಿಗೆ ಶಿಬಿರ 6ನೇ ದಿನದ ಕಾರ್ಯಕ್ರಮ
"ಪಠ್ಯೇತರ ಚಟುವಟಿಕೆಗಳು ಮಕ್ಕಳ ಸುಪ್ತ ಪ್ರತಿಭಾ ಅನಾವರಣಕ್ಕೆ ಸಹಕಾರಿ - ಬಿ.ಜಯಕರ ಶೆಟ್ಟಿ

Views: 102
ಕನ್ನಡ ಕರಾವಳಿ ಸುದ್ದಿ: ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ವತಿಯಿಂದ ಯಡಾಡಿ- ಮತ್ಯಾಡಿಯ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಮತ್ತು ಸುಜ್ಞಾನ್ ಪಿ.ಯು.ಕಾಲೇಜಿನ ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ಮಂಥನ ಬೇಸಿಗೆ ಶಿಬಿರದ ಆರನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ಉಡುಪಿ ಜಿಲ್ಲಾ ಮುಖ್ಯ ಆಯುಕ್ತಾಗಿರುವ ಶ್ರೀಯುತ ಬಿ.ಜಯಕರ ಶೆಟ್ಟಿ”ಮಕ್ಕಳು ಶಾಲೆಯಲ್ಲಿ ಪಠ್ಯದ ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿಯನ್ನು ಬೆಳೆಸಿಕೊಂಡರೆ ಉತ್ತಮ ಪ್ರಗತಿ ಕಾಣಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿರುವ ಪ್ರತಿಭೆ ಯ ಅನಾವರಣಕ್ಕಾಗಿ ಸರಕಾರವು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮವನ್ನು ಆರಂಭಿಸಿದೆ.ಪ್ರತಿಯೊಂದು ಮಗುವಿನಲ್ಲಿಯೂ ಒಂದೊಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸಿ ಅನಾವರಣಗೊಳಿಸುವ ಪ್ರಯತ್ನ ಆಗಬೇಕು. ಪಠ್ಯೇತರ ಚಟುವಟಿಕೆಗಳು ಮಕ್ಕಳ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಸಹಕಾರಿಯಾಗುತ್ತದೆ.ಬೇಸಿಗೆ ಶಿಬಿರಗಳು ಕೂಡ ಮಕ್ಕಳಿಗೆ ಉತ್ತಮ ವೇದಿಕೆಯಾಗಿದ್ದು ಅಲ್ಲಿ ಕಲಿಸಿಕೊಡುವ ಕೌಶಲಗಳು,ಸಂಸ್ಕಾರವನ್ನು ಮಕ್ಕಳು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡು ಭವಿಷ್ಯದ ಉತ್ತಮ ಪ್ರಜೆಗಳಾಗಿ ಬಾಳುವಂತಾಗಬೇಕು”ಎಂದರು.ರಘುಸನ್ ಟೈಲ್ಸ್ ಕುಂದಾಪುರ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರಾದ ಮಹೇಂದ್ರ ಶೆಟ್ಟಿ ಮಾತನಾಡಿ”ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಆಮೂಲಾಗ್ರ ಬದಲಾವಣೆ ತರಲು ಸಾಧ್ಯವಾವುತ್ತದೆ.ಒಂದಿಷ್ಟು ಸುಲಭ ಕೌಶಲಗಳ ಮೂಲಕ ಸಮಾಜದಲ್ಲಿ ನಾವು ಹೇಗೆ ವ್ಯವಹರಿಸಬೇಕು ಎನ್ನುವ ವಿಷಯವನ್ನು ಮಕ್ಕಳು ಶಿಬಿರದ ಮೂಲಕ ಕಲಿಯಲು ಸಾಧ್ಯವಾಗುತ್ತದೆ.ಮಕ್ಕಳು ಜೀವನದಲ್ಲಿ ಋಣಾತ್ಮಕವಾಗಿ ಯೋಚಿಸುವುದನ್ನು ಬಿಟ್ಟು ಧನಾತ್ಮಕವಾಗಿ ಯೋಚಿಸಿದರೆ ಉತ್ತಮವಾದ ಉನ್ನತ ಸ್ಥಾನಕ್ಕೆರಲು ಸಾಧ್ಯ”ಎಂದರು.
ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾಗಿರುವ ಡಾ.ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಪ್ರದೀಪ್ ಕೆ.ಉಪಸ್ಥಿತರಿದ್ದರು.
ಮಂಥನ ಬೇಸಿಗೆ ಶಿಬಿರ 6ನೇ ದಿನದ ಕಾರ್ಯಕ್ರಮ ವಿಶೇಷತೆ: ಸಾಹಸ ಆಟಗಳನ್ನು ಒಳಗೊಂಡ ಬೂಟ್ ಕ್ಯಾಂಪ್ ನಲ್ಲಿ ಪಿಸ್ತೂಲ್ ಮತ್ತು ಬಂದೂಕು ಶೂಟಿಂಗ್, ಬಿಲ್ಲುಗಾರಿಕೆ,ಮಂಕಿ ಬ್ರಿಡ್ಜ್,ಕಮಾಂಡೋ ಬ್ರಿಡ್ಜ್,ಸಿಂಗಲ್ ರೋಪ್ ಬ್ಯಾಲೆನ್ಸ್, ಮಂಕಿ ಸ್ವಿಂಗ್,ಮೈಂಡ್ ಗೇಮ್, ಟೈಯರ್ ಕ್ಲೈಂಬಿಂಗ್,ಟೈಯರ್ ವೆಲ್,ಮನರಂಜನೆಯ ಆಟ ಮುಂತಾದ 15ಕ್ಕೂ ಹೆಚ್ಚು ಸಾಹಸ ಆಟಗಳ ಚಟುವಟಿಕೆ ಹಾಗೂ ಪ್ರಶಸ್ತಿ ಪುರಸ್ಕೃತ ರಂಗ ನಿರ್ದೇಶಕರುಗಳಾದ ಸತ್ಯನಾ ಕೊಡೇರಿ ಮತ್ತು ಗಣಪತಿ ಹೋಬಳಿದಾರ್ ಅವರಿಂದ ರಂಗ-ನಾಟಕ ತರಬೇತಿ,ಕ್ರಾಫ್ಟ್ ತಯಾರಿ ತರಬೇತಿ ನಡೆಯಿತು. ಮಕ್ಕಳು ಬಹಳ ಉತ್ಸುಕತೆಯಿಂದ ಆರನೆಯ ದಿನದ ಶಿಬಿರದಲ್ಲಿ ಪಾಲ್ಗೊಂಡರು.