ಶಿಕ್ಷಣ

ವಕ್ವಾಡಿ: ಸಮುದಾಯದತ್ತ ಶಾಲೆ ಮತ್ತು ಜಿಲ್ಲಾ ದೈಹಿಕ ಶಿಕ್ಷಕರ ಸಂಘದ  ಜಿಲ್ಲಾಧ್ಯಕ್ಷರಿಗೆ ಸನ್ಮಾನ 

Views: 216

ಕನ್ನಡ ಕರಾವಳಿ ಸುದ್ದಿ: ಸರಕಾರಿ ಪ್ರೌಢ ಶಾಲೆ ವಕ್ವಾಡಿ, 2024-25 ನೇ ಶೈಕ್ಷಣಿಕ ವರ್ಷದ ದ್ವಿತೀಯ ಸಮುದಾಯದತ್ತ ಶಾಲಾ ಕಾರ್ಯಕ್ರಮ ಗುರುವಾರ ಜರಗಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಜು ಕುಲಾಲ್ SDMC ಅಧ್ಯಕ್ಷರು ವಹಿಸಿದ್ದು, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಜಾತಾ ಬಿ, ಶ್ರೀಮತಿ ಸುಮತಿ, ಶ್ರೀಮತಿ ಪೂರ್ಣಿಮಾ, ಶ್ರೀಮತಿ ನಯನ, ಶ್ರೀಮತಿ ವನಿತಾ SDMC ಸದಸ್ಯರು  ವೇದಿಕೆಯಲ್ಲಿದ್ದು ಸಭೆಯನ್ನು ಯಶಸ್ವಿಗೊಳಿಸಿದರು.

ಇದೇ ಸಂದರ್ಭದಲ್ಲಿ ಇತ್ತೀಚಿಗೆ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷರಾಗಿ ಚುನಾಯಿತರಾದ ಶಾಲೆಯ ದೈಹಿಕ ಶಿಕ್ಷಕರಾದ ಶ್ರೀ ಕುಸುಮಾಕರ ಶೆಟ್ಟಿ ಅವರನ್ನು SDMC, ಶಿಕ್ಷಕವೃಂದ, ಮತ್ತು ವಿದ್ಯಾರ್ಥಿಗಳ ಪರವಾಗಿ  ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕುಸುಮಾಕರ ಶೆಟ್ಟಿಯವರು, ಪ್ರಶಸ್ತಿ ಬಯಸಿದವ ನಾನಲ್ಲ, ಸನ್ಮಾನ ಮಾಡುವ ಮೂಲಕ ನನ್ನ ಜವಬ್ದಾರಿ ಹೆಚ್ಚಿಸಿದ್ದೀರಿ, ನನ್ನಿಂದ ಸಾಧ್ಯವಾದಷ್ಟು ಕಾಯ, ವಾಚ, ಮನಸಾ ನನ್ನನ್ನು ನಾನು ತೊಡಗಿಸಿಕೊಳ್ಳುತ್ತೇನೆ, ಎಂದರು.

ಶ್ರೀಮತಿ ಸುಜಾತಾ ಬಿ ಸ್ವಾಗತಿಸಿದರು., ಶ್ರೀಮತಿ ಉಷಾ ಕಾರಂತ್ ವಂದಿಸಿದರು, ಶ್ರೀ ದೇವರಾಜ ಹೆಬ್ಬಾರ್ ನಿರೂಪಣೆಗೈದರು. 9ನೇ ತರಗತಿಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು

Related Articles

Back to top button