ಗೆಳತಿಯನ್ನು ಟ್ರಾಲಿ ಬ್ಯಾಗ್ ಒಳಗೆ ಬಚ್ಚಿಟ್ಟು ಬಾಲಕರ ಹಾಸ್ಟೆಲ್‌ಗೆ ಕರೆದೊಯ್ಯುವ ವೇಳೆ ಸಿಕ್ಕಿಬಿದ್ದ ವಿದ್ಯಾರ್ಥಿ!

Views: 102
ಕನ್ನಡ ಕರಾವಳಿ ಸುದ್ದಿ: ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯನ್ನು ಟ್ರಾಲಿ ಬ್ಯಾಗ್ ಒಳಗೆ ಬಚ್ಚಿಟ್ಟು ಬಾಲಕರ ಹಾಸ್ಟೆಲ್‌ಗೆ ರಹಸ್ಯವಾಗಿ ಕರೆದೊಯ್ಯುವ ವೇಳೆ ಸಿಕ್ಕಿಬಿದ್ದಿರುವ ಘಟನೆ ಪಾಣಿಪತ್‌ನಲ್ಲಿರುವ ಒಪಿ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದಲ್ಲಿ ನಡೆದಿದೆ.
ವಿದ್ಯಾರ್ಥಿ ಹಾಸ್ಟೆಲ್ ಪ್ರವೇಶದ್ವಾರದ ಮೂಲಕ ಟ್ರಾಲಿ ಬ್ಯಾಗ್ ಅನ್ನು ಒಳಗೆ ತೆಗೆದುಕೊಂಡು ಹೋಗುತ್ತಿದ್ದಾಗ, ವಸ್ತುವೊಂದಕ್ಕೆ ಸೂಟ್‌ಕೇಸ್ ಡಿಕ್ಕಿ ಹೊಡೆದಿದೆ. ಇದರಿಂದ ಟ್ರಾಲಿ ಬ್ಯಾಗ್ ಒಳಗಿದ್ದ ಯುವತಿ ಜೋರಾಗಿ ಕಿರುಚಿಕೊಂಡಿದ್ದಾಳೆ. ಈ ವೇಳೆ ಹಾಸ್ಟೆಲ್‌ನ ಭದ್ರತಾ ಸಿಬ್ಬಂದಿ ಯುವತಿಯ ಶಬ್ದ ಕೇಳಿ ವಿದ್ಯಾರ್ಥಿಯನ್ನು ತಡೆದಿದ್ದಾರೆ.
ಈ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯದಲ್ಲಿ ವೈರಲ್ ಆಗಿದೆ. ಅದರಲ್ಲಿ, ಭದ್ರತಾ ಸಿಬ್ಬಂದಿ ಟ್ರಾಲಿ ಬ್ಯಾಗ್ ಸುತ್ತುವರೆದಿರುವುದು ಕಂಡು ಬರುತ್ತದೆ ಮತ್ತು ಟ್ರಾಲಿ ಬ್ಯಾಗ್ನಿಂದ ಯುವತಿ ಹೊರ ಬರಲು ಯತ್ನಿಸುತ್ತಿದ್ದು, ಈ ವೇಳೆ ಮಹಿಳಾ ಭದ್ರತಾ ಸಿಬ್ಬಂದಿ ಟ್ರಾಲಿ ಬ್ಯಾಗ್ನ ಜಿಪ್ ತೆಗೆದು ಯುವತಿ ಹೊರ ಬರಲು ಅನುವು ಮಾಡಿಕೊಡುತ್ತಾರೆ. ಅಷ್ಟು ಸಣ್ಣ ಟ್ರಾಲಿ ಬ್ಯಾಗ್ನಲ್ಲಿ ಯುವತಿ ಹೇಗೆ ಕುಳಿತಿದ್ದಳು ಎಂಬುದು ಎಲ್ಲರಲ್ಲಿ ಆಚ್ಚರಿ ಮೂಡಿಸಿದೆ. ಭದ್ರತಾ ಸಿಬ್ಬಂದಿಯಿಂದ ಜೋಡಿಯ ಕಳ್ಳಾಟ ಬಯಲಿಗೆ ಬಂದಿದ್ದು, ಇಡೀ ಕ್ಯಾಂಪಸ್‌ನಲ್ಲಿ ಕೋಲಾಹಲ ಸೃಷ್ಟಿಯಾಗುವಂತೆ ಮಾಡಿತು.
.