ಇತರೆ
ಕೋಟ ಗಿಳಿಯಾರಿನಲ್ಲಿ ಅಕ್ಕಿ ಅಕ್ರಮ ಸಾಗಾಟ:ವಾಹನ ಚಾಲಕ ವಶಕ್ಕೆ

Views: 214
ಕನ್ನಡ ಕರಾವಳಿ ಸುದ್ದಿ. ಕೋಟ ಗಿಳಿಯಾರಿನಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಪಡೆದು ಸಾಗಾಟ ನಡೆಸುತ್ತಿದ್ದ ವಾಹನ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕ ಸುಧೀರ್ ಹಾಗೂ ಪೊಲೀಸ್ ಠಾಣಾ ಉಪನಿರೀಕ್ಷಕರಾದ ರಾಘವೇಂದ್ರ ಸಿ. ಜಂಟಿ ಕಾರ್ಯಚರಣೆ ನಡೆಸಿ ಬೋಲೆರೋ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
42 ಪ್ಲಾಸ್ಟಿಕ್ ಚೀಲಗಳಲ್ಲಿ ಅಕ್ಕಿಯನ್ನು ಯಾವುದೇ ಪರವಾನಿಗೆ, ದಾಖಲಾತಿಗಳಿಲ್ಲದೆ ಕಂಡುಬಂದಿದ್ದು. ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿರುವ ಬೋಲೆರೋ ಚಾಲಕ ಉದಯ ಹಾಗೂ ಅಕ್ಕಿಯನ್ನು ಅಕ್ರಮವಾಗಿ ಖರೀದಿಸುತ್ತಿದ್ದ ಸುರೇಂದ್ರ ಅವರ ಮೇಲೆ ಪ್ರಕರಣ ದಾಖಲಾಗಿದೆ.






