ಮಿಲ್ಕಿ ಬ್ಯೂಟಿ ತಮನ್ನಾ-ವಿಜಯ್ ವರ್ಮಾ ಜೊತೆಗಿನ ಪ್ರೇಮ ಸಂಬಂಧ ಬ್ರೇಕ್ ಬಿತ್ತಾ?

Views: 67
ಕನ್ನಡ ಕರಾವಳಿ ಸುದ್ದಿ: ಕನ್ನಡದಲ್ಲಿ ‘ಜಾಗ್ವಾರ್’ ಹಾಗೂ ‘ಕೆಜಿಎಫ್- 1’ ಚಿತ್ರದ ಡ್ಯಾನ್ಸಿಂಗ್ ನಂಬರ್‌ಗಳಲ್ಲಿ ಕುಣಿದು ರಂಗೇರಿಸಿದ ಮಿಲ್ಕಿ ಬ್ಯೂಟಿ ನಟಿ ತಮನ್ನಾ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. ಕಳೆದ ವರ್ಷ ಆಕೆ ನಟ ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡುತ್ತಿರುವುದು ಬಹಿರಂಗವಾಗಿತ್ತು.
ಕೆಲ ತೆಲುಗು ಸಿನಿಮಾಗಳಲ್ಲಿ ಕೂಡ ವಿಜಯ್ ವರ್ಮಾ ನಟಿಸಿದ್ದಾರೆ. ‘ಲಸ್ಟ್ ಸ್ಟೋರೀಸ್’-2 ಸಿನಿಮಾ ಚಿತ್ರೀಕರಣದ ವೇಳೆ ಇಬ್ಬರ ಪರಿಚಯವಾಗಿತ್ತು. ಬಳಿಕ ಅದು ಪ್ರೀತಿಗೆ ತಿರುಗಿತ್ತು. ಇಬ್ಬರೂ ರಿಲೇಷನ್‌ಶಿಪ್ ಬಗ್ಗೆ ಮಾತನಾಡಿದ್ದರು. ಇತ್ತೀಚೆಗೆ ಒಟ್ಟೊಟ್ಟಿಗೆ ಕೈ ಕೈ ಹಿಡಿದು ಓಡಾಡುತ್ತಿದ್ದರು. ಆದರೆ ಇತ್ತೀಚೆಗೆ ತಮನ್ನಾ ಮಾಡಿರೋ ಪೋಸ್ಟ್‌ವೊಂದು ಭಾರೀ ಚರ್ಚೆ ಆಗಿದೆ.
“ಪ್ರೀತಿಸುವುದು ಅಂತ ನಾನು ಭಾವಿಸುತ್ತೇನೆ. ಅದೇ ರೀತಿ ಆಸಕ್ತಿದಾಯಕವಾಗಿರುವುದರ ರಹಸ್ಯವೆಂದರೆ ಆಸಕ್ತಿ ಹೊಂದಿರುವುದು. ಇತರರು ನಿಮ್ಮಲ್ಲಿ ಸೌಂದರ್ಯವನ್ನು ಕಂಡುಕೊಳ್ಳುವುದರ ರಹಸ್ಯವೆಂದರೆ ಇತರರಲ್ಲಿ ಸೌಂದರ್ಯವನ್ನು ಕಂಡುಕೊಳ್ಳುವುದು. ಇನ್ನು ಸ್ನೇಹಿತನನ್ನು ಹೊಂದುವ ರಹಸ್ಯವೆಂದರೆ ಸ್ನೇಹಿತನಾಗಿರುವುದು” ಎಂದು ತಮನ್ನಾ ಬರೆದುಕೊಂಡಿದ್ದರು.
ಅರೇ ಇದ್ದಕ್ಕಿಂದಂತೆ ಪ್ರೀತಿ ಬಗ್ಗೆ ತಮನ್ನಾ ಈ ರೀತಿ ಯಾಕೆ ಪೋಸ್ಟ್ ಮಾಡಿದರು. ಈ ಮೂಲಕ ಏನು ಹೇಳಲು ಹೊರಟಿದ್ದಾರೆ ಅಂತೆಲ್ಲಾ ಏನೇನೋ ಊಹಿಸಿಕೊಳ್ಳುತ್ತಿದ್ದಾರೆ. ಆದರೆ ಬ್ರೇಕಪ್ ಎನ್ನುವುದೆಲ್ಲಾ ಸುಳ್ಳು. ಒಂದು ವೇಳೆ ನಿಜವೇ ಆಗಿದ್ದರೆ ಆಕೆ ಹೇಳುತ್ತಾರೆ ಎನ್ನುತ್ತಿದ್ದಾರೆ. ಇತ್ತೀಚೆಗೆ ತಮನ್ನಾ ಸಿನಿಮಾಗಳಲ್ಲಿ ನಟಿಸುವುದಕ್ಕಿಂತ ಸ್ಪೆಷಲ್ ಸಾಂಗ್‌ಗಳಲ್ಲಿ ಕುಣಿಯುವುದು ಹೆಚ್ಚಾಗಿದೆ. ಅದಕ್ಕಾಗಿ ಭಾರೀ ಮೊತ್ತದ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಸದ್ಯ ‘ಓಡೆಲ- 2’ ಸಿನಿಮಾದಲ್ಲಿ ಮಿಲ್ಕಿ ಬ್ಯೂಟಿ ನಟಿಸುತ್ತಿದ್ದಾರೆ. ಕಳೆದ ವರ್ಷ ಬಂದ ‘ಸ್ತ್ರೀ- 2’ ಹಾಗೂ ‘ವೇದ’ ಚಿತ್ರದ ಐಟಂ ಸಾಂಗ್‌ನಲ್ಲಿ ತಮನ್ನಾ ಮಿಂಚಿದ್ದರು. 2024ರ ಹೊಸ ವರ್ಷದ ಸಂಭ್ರಮದಲ್ಲಿ ತಮನ್ನಾ- ವಿಜಯ್ ವರ್ಮಾ ಲವ್ ಸ್ಟೋರಿ ರಿವೀಲ್ ಆಗಿತ್ತು. ಜೋಡಿ ಒಟ್ಟಿಗೆ ಪಾರ್ಟಿ ಮಾಡಿ ಹೊಸ ವರ್ಷವನ್ನು ಸ್ವಾಗತಿಸಿದ್ದರು.