ಕುಂದಾಪುರ:ಗ್ರಾಮ ಪಂಚಾಯತ್ ಮತ್ತು ಸ್ವಸಹಾಯ ಸಂಘಗಳ ಒಗ್ಗೂಡಿಸುವಿಕೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ
Views: 182
ಕನ್ನಡ ಕರಾವಳಿ ಸುದ್ದಿ,
ಕುಂದಾಪುರ: ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ಕುಂದಾಪುರ ತಾಲೂಕು ಪಂಚಾಯತ್ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು ಇವರುಗಳ ಸಹಯೋಗದೊಂದಿಗೆ ಗ್ರಾಮ ಪಂಚಾಯತ್ ಮತ್ತು ಸ್ವಸಹಾಯ ಸಂಘಗಳ ಒಗ್ಗೂಡಿಸುವಿಕೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ಜ.16 ರಂದು ಗುರುವಾರ ಕುಂದಾಪುರ ತಾಲೂಕು ಪಂಚಾಯತ್ ಸಾಮರ್ಥ್ಯಸೌಧದಲ್ಲಿ ಆರಂಭಗೊಂಡಿದೆ.
ತರಬೇತಿಯ ಮಾಹಿತಿ ಕೈಪಿಡಿಯನ್ನು ಪರಿಚಯಿಸಿ ಹಂಚುವುದರ ಮೂಲಕ ತರಬೇತಿಗೆ ಚಾಲನೆ ನೀಡಲಾಯಿತು.
ತರಬೇತಿಯನ್ನು ಉದ್ಘಾಟಿಸಿದ ಶ್ರೀಮತಿ ದೀಪ ಸಹಾಯಕ ನಿರ್ದೇಶಕರು ಪಂಚಾಯತ್ ರಾಜ್ ಇವರು ಮಾತನಾಡಿ, ಈ ತರಬೇತಿಯ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತೆ ಸಲಹೆ ನೀಡಿದರು ಎಲ್ಲರೂ ಆರೋಗ್ಯಕರವಾಗಿ ಭಾಗವಹಿಸಿ, ಇದೊಂದು ಅರ್ಥಪೂರ್ಣವಾದ ತರಬೇತಿ ಎಂದು ಶ್ಲಾಘಿಸಿದರು.
ತರಬೇತಿ ಕಾರ್ಯಕ್ರಮದಲ್ಲಿ ಶ್ರೀಮತಿ ದೀಪ ಸಹಾಯಕ ನಿರ್ದೇಶಕರು ಪಂಚಾಯತ್ ರಾಜ್, ಕುಂದಾಪುರ ತಾಲೂಕು ಪಂಚಾಯತ್ ವ್ಯವಸ್ಥಾಪಕರಾದ ಶ್ರೀಯುತ ರಾಮಚಂದ್ರಮಯ್ಯ, ಎನ್ ಆರ್ ಎಲ್ ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀಯುತ ಯತೀಶ್, ಕೋಟೇಶ್ವರ ಪಂಚಾಯಿತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಯುತ ದಿನೇಶ್ ನಾಯಕ್,ಗೋಪಾಡಿ ಪಂಚಾಯತ್ ಪಿಡಿಓ ಹರೀಶ್ಚಂದ್ರ ಆಚಾರ್, ಶ್ರೀಯುತ ರಾಜೇಶ್ ಕೆ ಸಿ ಹಂಗಳೂರು ಪಂಚಾಯತ್ ಪಿಡಿಓ, ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ಮತ್ತು ಜನಪ್ರತಿನಿಧಿಗಳ ಪ್ರತಿನಿಧಿಗಳ ಪ್ರತಿನಿದಿ ಹಾಗೂ ಜಿ ಪಿ ಎಲ್ ಫ್ ನ ಪ್ರತಿನಿದಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾಗಿ ಬಿ ಮೋಹನ್ ಚಂದ್ರ ಕಾಳಾವರ್ಕರ್, ಡಿಟಿಸಿ ಕುಂದಾಪುರ. ಸುನಿತ ಗಾಣಿಗ ಡಿ ಟಿ ಸಿ ಬೈಂದೂರು ಇವರುಗಳು ಭಾಗವಸಿದರು.
ನಮ್ಮ ಮುಂದಿನ ಹಾದಿ ಈ ಕುರಿತು ಒಂದು ಯೋಜನೆಯನ್ನು ಸಿದ್ಧಗೊಳಿಸಿ ಈ ಒಂದು ದಿನದ ತರಬೇತಿಯಲ್ಲಿ ನಾವೇಕೆ ಒಗ್ಗೂಡಬೇಕು, ಘನತ್ಯಾಜ್ಯ ನಿರ್ವಹಣೆ- ನಮ್ಮೆಲ್ಲರ ನಡೆ ಸುಸ್ಥಿರ ಸ್ವಚ್ಛತೆ ಕಡೆ, ಹಳ್ಳಿ ಸಂತೆಯ ಕಲ್ಪನೆ, ಮನೋಭಾವ ಮತ್ತು ವರ್ತನೆ ಒಳಗೊಂಡು ಕೊನೆಯಲ್ಲಿ ನಮ್ಮ ಗ್ರಾಮ ಪಂಚಾಯಿತಿನ ಮುಂದಿನ ಈ ತರಬೇತಿಯು ಜ.16 ರಿಂದ ಫೆ.11ರ ತನಕ ಒಟ್ಟು 45 ಪಂಚಾಯಿತಿನಿಂದ 15 ತಂಡದಲ್ಲಿ ಈ ತರಬೇತಿ ನಡೆಯುತ್ತದೆ ಪ್ರತಿ ತಂಡದಲ್ಲಿ 3 ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ನಾಲ್ಕು ಜನ ಮಹಿಳಾ ಸದಸ್ಯ ಪ್ರತಿನಿಧಿಗಳು ಮೂರು ಪಂಚಾಯತಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸ್ವಸಹಾಯ ಸಂಘಗಳ ಒಕ್ಕೂಟದ ಜನಪ್ರತಿನಿಧಿಗಳು ಒಂದು ಪಂಚಾಯತಿನಿಂದ ಒಟ್ಟು 15 ಜನ ಈ ಒಂದು ತರಬೇತಿ ಯಲ್ಲಿ ಭಾಗವಹಿಸಲು ಅವಕಾಶ ಇದ್ದು ಒಟ್ಟು ಮೂರು ಪಂಚಾಯಿತಿನಿಂದ 45 ಜನ ಈ ಒಂದು ದಿನದ ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ.