ಪ್ರವಾಸೋದ್ಯಮ

3 ದಶಕಗಳ ಯಶಸ್ವಿ ಸೇವೆಯಲ್ಲಿ..ಪ್ರವಾಸಿಗರ ಮೆಚ್ಚುಗೆ ಗಳಿಸಿದ ಅಡಿಗಾಸ್ ಯಾತ್ರಾ!

Views: 95

ಸತತ ಪಯತ್ನ, ಕಠಿಣ ಪರಿಶ್ರಮ ಹಾಗೂ ಹೊಸತನ್ನು ಅಳವಡಿಸಿಕೊಂಡು ಅದನ್ನು ಜಾರಿಗೊಳಿಸುವುದು ಪ್ರತಿ ಉಧ್ಯಮದ ಯಶಸ್ಸಿನ ಕೀಲಿ ಕೈ. ಅದರಲ್ಲೂ, ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ, ದಿನಕ್ಕೊಂದು ಹೊಸ ಆವಿಷ್ಕಾರಾದ ಪರ್ವಕಾಲದಲ್ಲಿ, ನಿರಂತರವಾಗಿ, ವಿಭಿನ್ನವಾಗಿ ಯೋಜನೆಗಳನ್ನು ಮೈಗೂಡಿಸಿಕೊಂಡು ಅವುಗಳ ಅನುಷ್ಠಾನದಲ್ಲಿ ಶಿಸ್ತಿನಿಂದ ಶ್ರಮಿಸುವುದು ಅತೀ ಅಗತ್ಯ. ಅಂತಹ ಉದ್ಯಮಗಳಲ್ಲಿ ಮುಂಚೂಣಿಯಲ್ಲಿ ನಿಲ್ಲಬಲ್ಲ ಸಂಸ್ಥೆಗಳಲ್ಲೊಂದು ಶ್ರೀಯುತ ಕೆ. ನಾಗರಾಜ್ ಅಡಿಗರ “ಕನಸಿನ ಕೂಸು ” ಅಡಿಗಾಸ್ ಯಾತ್ರಾ / ಅಡಿಗಾಸ್ ವರ್ಲ್ಡ್ ಸಂಸ್ಥೆ. ಸಂಸ್ಥೆಗೀಗ 30 ರ ಹರೆಯ. ನಡೆದು ಬಂದ ದಾರಿ, ಎದುರಿಸಿದ ಸವಾಲುಗಳು ಲೆಕ್ಕವಿಲ್ಲದಷ್ಟು…

ವಿಶ್ವಾಸ ಮತ್ತು ನಂಬಿಕೆ ಎಂಬ ಎರಡು ಆಧಾರ ಸ್ಥoಭಗಳ ಮೇಲೆ ನಿಂತಿರುವ ಪ್ರವಾಸೋಧ್ಯಮ ಕ್ಷೇತ್ರದಲ್ಲಿ 30 ವರ್ಷಗಳಿಂದ ತೊಡಗಿಸಿಕೊಂಡಿರುವ ಅಡಿಗಾಸ್ ಸಂಸ್ಥೆ ಅಪಾರ ಜನ ಮನ್ನಣೆಯನ್ನು ಗಳಿಸಿದೆ. ಹಾದಿ ಬೀದಿ ಗೊಂದರಂತೆ ದಿನವೂ ಆರಂಭವಾಗಿ ಮುಚ್ಚಿ ಹೋಗುವ ನೂರಾರು ಟೂರ್ ಆಪರೇಟರ್ ಗಳ ಮಧ್ಯೆ ಅಡಿಗಾಸ್ ಸಂಸ್ಥೆ ತನ್ನದೇ ಚಾಪನ್ನು ಮೂಡಿಸಿ ಯಶಸ್ವಿಯಾಗಿ ಮುನ್ನೆಡೆದಿದೆ. ಪ್ರವಾಸೋಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಹಲವಾರು ಪ್ರಶಸ್ತಿಗಳು ಸಂಸ್ಥೆಯ ಮು ಡಿಗೇರಿದೆ. ಭಾರತ ಸರಕಾರದ ಪ್ರವಾಸೋಧ್ಯಮ ಸಚಿವಲಯದ ” ಅನುಭವಿ ಸೇವಾ ಪೂರೈಕೆದಾರ “, ಕರ್ನಾಟಕ ರಾಜ್ಯ ಪ್ರವಾಸೋಧ್ಯಮ ಇಲಾಖೆಯಿಂದ ಮಾನ್ಯತೆ, ಸತತ 4 ವರ್ಷಗಳಿಂದ ಅತ್ಯುತ್ತಮ ಪ್ರವಾಸಿ ಸಂಸ್ಥೆ ಎಂಬ ಹೆಗ್ಗಳಿಕೆ ಮತ್ತು ಪ್ರಶಸ್ತಿ, ಇಕನಾಮಿಕ್ಸ್ ಟೈಮ್ಸ್ ನಿಂದ ಉತ್ತಮ ಪ್ರವಾಸಿ ಸಂಸ್ಥೆ ಎಂಬ ಪ್ರಶಸ್ತಿ ಹೀಗೆ ಹತ್ತು ಹಲವಾರು, ಸಂಸ್ಥೆಯ ಯಶಸ್ಸಿಗೆ ಹಿಡಿದ ಕೈಗನ್ನಡಿ.

ಅಡಿಗಾಸ್ ಸಂಸ್ಥೆಯು ಪ್ರವಾಸಿಗರ / ಯಾತ್ರಿಕರ ಅಭಿರುಚಿ ಹಾಗೂ ಬೇಡಿಕೆಗೆ ಅನುಗುಣವಾಗಿ 500 ಕ್ಕೂ ಹೆಚ್ಚು ಪ್ರವಾಸಗಳನ್ನು ದೇಶಿಯ, ಅಂತರ ರಾಷ್ಟ್ರೀಯ, ಗ್ರಾಹಕಾನುಕೂಲಿತ ಹಾಗೂ ಮಧುಚಂದ್ರ ಪ್ರವಾಸಗಳು ಯೋಜಿಸಿದೆ.
ಅಂತರರಾಷ್ಟ್ರೀಯ ಪ್ರವಾಸಗಳಲ್ಲಿ ಯುರೋಪ್, ಯುಕೆ, ಆಸ್ಟ್ರೇಲಿಯಾ, ದುಬೈ, ಇಂಡೋನೆಷಿಯಾ, ಸಿಂಗಾಪುರ್, ಮಲೇಷಿಯಾ, ಥೈಲ್ಯಾಂಡ್, ಬಾಲಿ, ಶ್ರೀಲಂಕಾ, ನೇಪಾಳ ಮತ್ತು ಭೂತಾನ್ ಪ್ರವಾಸಗಳು ಅಪಾರ ಜನ ಮನ್ನಣೆಯನ್ನು ಗಳಿಸಿವೆ.

ಬಹುತೇಕ ಪ್ರವಾಸಿಗರಿಗೆ ವಿದೇಶಿ ಪ್ರವಾಸಕ್ಕೆ ಅಡಿಗಾಸ್ ಮೊದಲ ಆಯ್ಕೆ ಯಾಗಿರುತ್ತದೆ. ಅದಕ್ಕೆ ಕಾರಣಗಳು ಹಲವಾರು. ಸಹ ಪ್ರಯಾಣಿಕರು ಕರ್ನಾಟಕದವರೇ ಆಗಿದ್ದು, ಅವರ ಆಚಾರ ವಿಚಾರ, ಭಾಷೆ, ಸಂಸ್ಕೃತಿ ಹಾಗೂ ಉಟೋಪಹಾರ ದಲ್ಲಿ ಸಾಮ್ಯತೆ ಇರುವುದರಿಂದ ಪ್ರವಾಸವೂ ಯಶಸ್ವಿಯಾಗುತ್ತದೆ.

ಯಾವುದೇ ರೀತಿಯ home ಸಿಕ್ ಭಾವನೆ ಪ್ರವಾಸಿಗರಿಗೆ ಕಾಡುವುದಿಲ್ಲ.ವಿಶ್ವದರ್ಜೆಯ ಹೆಸರಾಂತ ಹೋಟೆಲ್ ಗಳಲ್ಲಿ ವಾಸ್ತವ್ಯ, ಸುಖಾಸೀನ, ಐಷಾರಾಮಿ ಬಸ್ ಗಳಲ್ಲಿ ಪ್ರಯಾಣ, ಕನ್ನಡ ಬಲ್ಲ ಅನುಭವೀ ಟೂರ್ ಮ್ಯಾನೇಜರ್, ಭಾರತೀಯ ರೆಸ್ಟೋರೆಂಟ್ ಗಳಲ್ಲಿ ಮೊದಲೇ ಕಾದಿರಿಸಿದ ಉತ್ತಮ ಊಟ- ಉಪಹಾರಗಳು ಇವೆಲ್ಲ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಅಂತೆಯೇ, ಪ್ರತಿಯೊಬ್ಬ ಪ್ರವಾಸಿಗನೂ ಖಡ್ಡಾಯವಾಗಿ ಪಾವತಿಸಬೇಕಾದ ಡ್ರೈವರ್ ಟಿಪ್ಸ್, ಗೈಡ್ ಚಾರ್ಜಸ್, ಟ್ರಾವೆಲ್ ಇನ್ಸೂರೆನ್ಸ್, ವೀಸಾ ಎಲ್ಲವೂ ಒಳಗೊಂಡ ಪ್ರವಾಸಿದರ ಮತ್ತು ಪ್ರಮುಖ, ವಿಶ್ವ ವಿಖ್ಯಾತ ಪ್ರವಾಸಿ ತಾಣಗಳಿಗೆ ಯಾವುದೇ ಹೆಚ್ಚುವರಿ ಶುಲ್ಕವನ್ನೂ ಸಂಸ್ಥೆ ವಿಧಿಸದೇ ಪ್ರವಾಸಿಗರ ಮೆಚ್ಚುಗೆಯನ್ನು ಗಳಿಸಿದೆ

ಇನ್ನುಳಿದಂತೆ ದೇಶಿಯ ಪ್ರವಾಸಗಳ ಬೇಡಿಕೆ ದುಪ್ಪಟ್ಟಾಗಿದೆ. ಭಾರತದಾದ್ಯಂತ ನಮ್ಮ ದಕ್ಷಿಣ ಭಾರತೀಯ ಉಟೋಪಹಾರ, ಹವಾ ನಿಯಂತ್ರಿತ ವಾಹನಗಳಲ್ಲಿ ಪ್ರಯಾಣ, ಅತ್ಯುತ್ತಮ ಹೋಟೆಲ್ ಗಳ ವಾಸ್ತವ್ಯ, ಅನುಭವಿ ಟೂರ್ ಮ್ಯಾನೇಜರ್ ಗಳ ಸೇವೆ ಇವೆಲ್ಲ ಸೇರಿ ಪ್ರವಾಸವನ್ನು ಅವಿಸ್ಮರಣೀಯ ವನ್ನಾಗಿಸುತ್ತದೆ.

ಇದಲ್ಲದೆ ಗ್ರಾಹಕಾನುಕೂಲಿತ ಮತ್ತು ಮಧುಚಂದ್ರ ಪ್ರವಾಸಗಳು ಪ್ರವಾಸಿಗರ ಆಯ್ಕೆಯಾದ ದಿನಾಂಕಕ್ಕೆ ಅವರ ಆದಾಯಕ್ಕನುಗುಣವಾಗಿ ಪಂಚಾತಾರಾ ಸೌಲಭ್ಯಗಳೊಂದಿಗೆ , ವ್ಯವಸ್ಥೆ ಮಾಡುವ ಸಾಮರ್ಥ್ಯ ಅಡಿಗಾಸ್ ಸಂಸ್ಥೆ ಹೊಂದಿದೆ.

Easy Pay ಎನ್ನುವ ಇನ್ನೊಂದು ಯೋಜನೆಯಲ್ಲಿ ಪೂರ್ವಯೋಜಿತವಾಗಿ ತಿಂಗಳಿಗೆ ನಿರ್ದಿಷ್ಟ ಮೊತ್ತದ ಹಣವನ್ನು 11 ತಿಂಗಳು ಜಮಾ ಮಾಡಿದಲ್ಲಿ 1 ತಿಂಗಳ ಕಂತನ್ನು ಸಂಸ್ಥೆ ಭರಿಸುತ್ತದೆ. ಇದು ಕೂಡಾ ಮಧ್ಯಮ ವರ್ಗದ ಕುಟುಂಬಗಳಿಗೆ ವರದಾನವಾಗಿದೆ.

ದೇಶಾದ್ಯಂತ ಯಶಸ್ವಿ ಪ್ರವಾಸ ಏರ್ಪಡಿಸಿ ಇಂದು ವಿದೇಶಗಳಿಗೂ ಏರ್ಪಡಿಸುವ ಪ್ರವಾಸಗಳು ಜನ ಮೆಚ್ಚುಗೆ ಗಳಿಸಿವೆ. ಆಯಾ ಪ್ರದೇಶಗಳ ವಿಶಿಷ್ಟತೆ ಅಳವಡಿಸಿಕೊಂಡು ಕನ್ನಡದ ಸೊಗಡಿನ ಪ್ರವಾಸಿ ಸ್ನೇಹಿ ಟೂರುಗಳು ನಮ್ಮ ಪರಿಶ್ರಮ ತೊಡಗಿಸುವಿ ಕೊಳ್ಳುವಿಕೆಯಲ್ಲಿ ನಂಬಿಕೆ ಮೂಡಿಸಿದೆ. ಇಂದಿಗೂ ಜನರು ಅಡಿಗಾಸ್ ನಲ್ಲಿ ಭರವಸೆ ಇಟ್ಟಿರುವುದು ಪ್ರವಾಸಿಗರಲ್ಲಿ ಹೊಸ ಹುರುಪು ಮೂಡಿಸುತ್ತಿದೆ.

 

Related Articles

Back to top button
error: Content is protected !!