ಕ್ರೀಡೆ
ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜು: ಗಾಯತ್ರಿ,ರುತ್ವಿಕ್ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾಟಕ್ಕೆ ಆಯ್ಕೆ

Views: 33
ಕುಂದಾಪುರ : ರಾಜ್ಯ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನ ಗಾಯತ್ರಿ ಮತ್ತು ರುತ್ವಿಕ್ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾಟಕ್ಕೆ ಆಯ್ಕೆಯಾಗಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.
ರಾಜ್ಯಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನ ಬಾಲಕಿರ ತಂಡ ದ್ವಿತೀಯ ಸಮಗ್ರ ತಂಡ ಪ್ರಶಸ್ತಿ ಪಡೆದುಕೊಂಡಿದೆ.
ಸಾಧನೆಗೈದ ಗಾಯತ್ರಿ 77 ಕೆ.ಜಿ Gold, ಪೃತ್ವಿಕ್ 97 ಕೆ.ಜಿ Gold, ಪನ್ನಗ 97 ಕೆ.ಜಿ Silver, ಅನನ್ಯ ಪೂಜಾರಿ 50 ಕೆ.ಜಿ Silver, ಅನುಷಾ ಆರ್ ಪೂಜಾರಿ 68 ಕೆ.ಜಿ Bronze, ಅನುಷಾ 72 ಕೆ.ಜಿ Bronze ಪ್ರಣಿತ ರೈ 77 ಕೆ.ಜಿ Bronze ಪಡೆದಿರುತ್ತಾರೆ.
ಎಲ್ಲಾ ವಿಜೇತ ಕುಸ್ತಿಪಟುಗಳಿಗೆ, ತರಬೇತುದಾರ ಹಾಗೂ ತಂಡದ ವ್ಯವಸ್ಥಾಪಕರಾದ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರಾದ ಕೃಷ್ಣ ಮೊಗವೀರ ಅವರಿಗೆ ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು, ಬೋಧಕ ವೃಂದ, ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.