ಸಾಂಸ್ಕೃತಿಕ
21 ವರ್ಷದ ಹುಡುಗಿಯನ್ನು ಮದುವೆಯಾದ 50ರ ವಯಸ್ಸಿನ ನಟ

Views: 61
ಸಾಹಿಲ್ ಖಾನ್ ಅವರು 21ನೇ ವಯಸ್ಸಿನ ಯುವತಿ ಜತೆ 2ನೇ ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 50ರ ಅಂಚಿನಲ್ಲಿರುವ ಸಾಹಿಲ್ ಇದೀಗ ಸಾಮಾಜಿಕ ಜಾಲತಾಣದಲ್ಲಿ 2ನೇ ಪತ್ನಿಯ ಪರಿಚಯ ಮಾಡಿಸಿದ್ದಾರೆ.
ಸಾಹಿಲ್ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಈ ಮೂಲಕ 2ನೇ ಮದುವೆ ಬಗ್ಗೆ ನಟ ಮಾಹಿತಿ ನೀಡಿದ್ದಾರೆ. ಆದರೆ ಪತ್ನಿಯ ಹೆಸರಾಗಲಿ ಆಕೆಯ ಬಗ್ಗೆ ಯಾವುದೇ ಮಾಹಿತಿ ನಟ ಹಂಚಿಕೊಂಡಿಲ್ಲ.
50 ವರ್ಷ ಸಮೀಪದಲ್ಲಿರುವ ನಟ ಸಾಹಿಲ್ ಖಾನ್, 21ರ ಹುಡುಗಿಯನ್ನು ಪ್ರೀತಿಸಿ 2ನೇ ಮದುವೆಯಾಗಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.