2ನೇ ತರಗತಿ ಬಾಲಕನಿಗೆ ಮೆದುಳು ನಿಷ್ಕ್ರಿಯ:. ಅಂಗಾಂಗ ದಾನಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ
ಬಾಲಕನ ಮರಣದ ನಂತರ ತಂದೆ-ತಾಯಿ ಆತನ ಶ್ವಾಸಕೋಶ, ಕಣ್ಣು, ಹೃದಯ ಸೇರಿ ಎಲ್ಲಾ ಅಂಗಗಾಳನ್ನು ದಾನ ಮಾಡಿದ್ದಾರೆ. ಅಂಗಾಂಗಗಳನ್ನು ದಾನ ಮಾಡಿದ್ದಕ್ಕಾಗಿ ಸಕಲ ಸರ್ಕಾರಿ ಗೌರವಗಳೊಂದಿಗೆ ಭುವನೇಶ್ವರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

Views: 71
8 ವರ್ಷದ ಬಾಲಕ ಅಕಾಲಿಕ ಮರಣಕ್ಕೆ ತುತ್ತಾಗಿದ್ದು, ಪೋಷಕರು ಅಂಗಾಂಗ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಪೋಷಕರು ಮಾಡಿದ ಮಹಾತ್ಯಾಗಕ್ಕೆ , ಬಾಲಕನಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಿದ ಘಟನೆ ಒಡಿಶಾದ ಭುವನೇಶ್ವರ್‌ದಲ್ಲಿ ಘಟನೆ ನಡೆದಿದೆ.
ಸುಭಜಿತ್ ಸಾಹು ಎಂಬ ಈ ಬಾಲಕ 2ನೇ ತರಗತಿ ಓದುತ್ತಿದ್ದ. ಕಳೆದ ವಾರ ಶಾಲೆಯಲ್ಲಿ ನಡೆಯುತ್ತಿದ್ದ ಪರೀಕ್ಷೆಗೆ ಹಾಜರಾಗಿದ್ದು ಅನಾರೋಗ್ಯಕ್ಕೆ ತುತ್ತಾಗಿದ್ದ. ಕೂಡಲೇ ಸುಭಜಿತ್ ಸಾಹುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಭಜಿತ್ ಸಾಹು ಕೋಮಾಗೆ ಹೋಗಿದ್ದ. ಬಾಲಕನ ಮೆದುಳು ನಿಷ್ಕ್ರಿಯವಾಗಿದ್ದು ಸಾವನ್ನಪ್ಪಿದ್ದಾನೆ.
ಮಗನನ್ನು ಕಳೆದುಕೊಂಡ ನೋವಿನಲ್ಲೂ ಸುಭಜಿತ್ ಸಾಹು ಹೆತ್ತವರು ಅಂಗಾಂಗ ದಾನಕ್ಕೆ ನಿರ್ಧಾರ ಮಾಡಿದ್ದರು. ಪೋಷಕರ ಅನುಮತಿಯಂತೆ ಬಾಲಕ ಸಾವನ್ನಪ್ಪಿದ ಮೇಲೆ ಕಿಡ್ನಿ, ಶ್ವಾಸಕೋಶ, ಲಿವರ್, ಕಣ್ಣುಗಳು, ಹೃದಯವನ್ನು ದಾನ ಮಾಡಲಾಗಿದೆ.ಬಾಲಕನ ದಾರುಣ ಸಾವು ಎಂತಹವರ ಹೃದಯವೂ ಮರಗುವಂತೆ ಮಾಡಿದೆ. ಅದರಲ್ಲೂ ಸುಭಜಿತ್ ಸಾಹು ಪೋಷಕರ ಮಾನವೀಯತೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಮರಣದ ನಂತರ ಸುಭಜಿತ್ ತಂದೆ-ತಾಯಿ ಆತನ ಶ್ವಾಸಕೋಶ, ಕಣ್ಣು, ಹೃದಯ ಸೇರಿ ಎಲ್ಲಾ ಅಂಗಗಾಳನ್ನು ದಾನ ಮಾಡಿದ್ದಾರೆ. ಬಾಲಕನ ಅಂಗಾಂಗಗಳನ್ನು ದಾನ ಮಾಡಿದ್ದಕ್ಕಾಗಿ ಸಕಲ ಸರ್ಕಾರಿ ಗೌರವಗಳೊಂದಿಗೆ ಭುವನೇಶ್ವರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.